News Karnataka Kannada
Tuesday, May 07 2024
ಮಂಗಳೂರು

ಬೆಳ್ತಂಗಡಿ: ಈಶಾ ಶರ್ಮಾಗೆ ಮೊದಲ ಐಎಂ ನಾರ್ಮ್ ಪ್ರಶಸ್ತಿ

Eesha Sharma wins first IM Norm award
Photo Credit : By Author

ಬೆಳ್ತಂಗಡಿ: ಜುಲೈ 18, 2022 ರಂದು ಮುಕ್ತಾಯಗೊಂಡ ಸ್ಲೋವಾಕಿಯಾ ಓಪನ್ ಪಿಯೆಸ್ಟನಿ 2022 ಚದುರಂಗ ಪಂದ್ಯಾವಳಿಯಲ್ಲಿ ಕರ್ನಾಟಕದ ಪ್ರತಿಭೆ ಈಶಾ ಶರ್ಮಾ ತನ್ನ ಚೊಚ್ಚಲ ಇಂಟರ್ನ್ಯಾಷನಲ್ ಮಾಸ್ಟರ್ ಮತ್ತು ಒಮನ್ ಗ್ರ್ಯಾಂಡ್ ಮಾಸ್ಟರ್ ನಾರ್ಮ್ ಮುಡಿಗೇರಿಸಿದ್ದಾರೆ.

ಮೂರನೇ ಸುತ್ತಿನಲ್ಲಿ ಈಶಾ ಪೋಲಿಷ್ ದಂತಕಥೆ ಗ್ರ್ಯಾಂಡ್‌ಮಾಸ್ಟರ್ ಕ್ರಾಸೆಂಕೋವ್ ಮಿಚಾಲ್ (2569) ವಿರುದ್ಧ ಮಿಂಚಿನ ಗೆಲುವು ಸಾಧಿಸಿದರು, ಇದು ಅವರ ಈವರೆಗಿನ ಅತ್ಯುತ್ತಮ ಗೆಲುವಾಗಿದೆ. ಇಶಾ ಎಫ್ ಐ ಇ ಡಿ ತರಬೇತುದಾರ ಕೆ.ವಿಶ್ವೇಶ್ವರನ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.

ಈಶಾ ಧರ್ಮಸ್ಥಳ ಸಮೀಪದ ಉಜಿರೆಯ ಎಸ್‌ಡಿಎಂ ಕಾಲೇಜಿನ (ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ) ನಲ್ಲಿ ಅಂತಿಮ ವರ್ಷದ ಅರ್ಥಶಾಸ್ತ್ರ ವ್ಯಾಸಂಗ ಮಾಡುತ್ತಿದ್ದಾರೆ. ಈಶಾ ಕರ್ನಾಟಕದ ಮೊದಲ ಮಹಿಳಾ ಇಂಟರ್‌ನ್ಯಾಶನಲ್ ಮಾಸ್ಟರ್ ಆಗಿದ್ದಾರೆ.

ಐ.ಎಂ. ನಾರ್ಮ್‌ ಗೆಲುವಿನ ಹಾದಿಯಲ್ಲಿ ಈಶಾ ಅವರು ಮೊದಲಿಗೆ ಅಧಿಕ ಶ್ರೇಯಾಂಕದ ಸ್ಲೋವಾಕಿಯಾದ ಐಎಂ ನ್ಯೂಗೆಬೌರ್ ಮಾರ್ಟಿನ್ (2528) ಅವರನ್ನು ಸೋಲಿಸಿದರು ಮತ್ತು ಐಸ್‌ಲ್ಯಾಂಡ್‌ನ ಐಎಂ ಸ್ಟೆಫಾನ್ಸನ್ ವಿಗ್ನಿರ್ ವಟ್ನಾರ್ ಅವರೊಂದಿಗೆ ಡ್ರಾ ಮಾಡಿಕೊಂಡರು.

ಈಶಾ ಅವರು 2019 ರಲ್ಲಿ ಕರ್ನಾಟಕದ ಮೊದಲ ಮಹಿಳಾ ಇಂಟರ್ನ್ಯಾಷನಲ್ ಮಾಸ್ಟರ್ ತನ್ನ ಹೆಸರಿನಲ್ಲಿ ಬರೆದಿದ್ದರು.

ಮಾತ್ರವಲ್ಲದೆ 2015 ರಲ್ಲಿ ಏಷ್ಯನ್ ಶಾಲೆಗಳ ಯು-15 ಕಂಚಿನ ಪದಕ ವಿಜೇತೆ ಮತ್ತು 2017 ರಲ್ಲಿ ಇರಾನ್‌ನಲ್ಲಿ ನಡೆದ ಏಷ್ಯನ್ ಜೂನಿಯರ್ ಬಾಲಕಿಯರ ಚಾಂಪಿಯನ್‌ಶಿಪ್ ನ್ನು ಗೆದ್ದಿದ್ದಾರೆ, ಇದೀಗ ತನ್ನ ಹೆಸರಿನಲ್ಲಿ ಮತ್ತಷ್ಟು ಗೆಲುವಿನ ಸಾಧನೆ ಮುಂದುವರೆಸುತ್ತಿರುವ ಈಶಾ ಪ್ರಸ್ತುತ ಹಂಗೇರಿಯ ಬುಡಾಪೆಸ್ಟ್‌ನಲ್ಲಿ ವೆಜೆರ್ಕೆಪ್ಜೊ ಕ್ಲೋಸ್ಡ್ ಜಿಎಂ ಪಂದ್ಯಾವಳಿಯನ್ನು ಆಡುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು