News Karnataka Kannada
Tuesday, May 07 2024
ಮಂಗಳೂರು

ಬೆಳ್ತಂಗಡಿ: ಜನರ ಕಷ್ಟಗಳಿಗೆ ಸ್ಪಂದಿಸುವ ತಂಡಗಳು ರಚನೆಗೊಂಡರೆ ಗ್ರಾಮಗಳಲ್ಲಿ ಅಭಿವೃದ್ಧಿ ಸಾಧ್ಯ

Belthangady: Development in villages is possible only if teams are formed to respond to the hardships of the people.
Photo Credit : By Author

ಬೆಳ್ತಂಗಡಿ: ಯುವ ತೇಜಸ್ಸು ಟ್ರಸ್ಟ್ ನ ಯುವ ಸದಸ್ಯರು ಮಾಡುತ್ತಿರುವ ಸಮಾಜ ಕಟ್ಟುವ ಕಾರ್ಯ ಎಲ್ಲರಿಗೂ ಮಾದರಿ. ತಂಡವನ್ನು ಕಟ್ಟುವಾಗ ಪ್ರತಿ ಸದಸ್ಯನು ಜವಾಬ್ದಾರಿ ವಹಿಸಿಕೊಂಡು ಕೆಲಸ ಮಾಡಿದರೆ ಸಮಸ್ಯೆಗಳು ಎದುರಾಗುವುದಿಲ್ಲ.ಜನರ ಕಷ್ಟಗಳಿಗೆ ಸ್ಪಂದಿಸುವ ತಂಡಗಳು ರಚನೆಗೊಂಡರೆ ಗ್ರಾಮ ಗ್ರಾಮಗಳಲ್ಲಿ ಅಭಿವೃದ್ಧಿ ಕಾಣಬಹುದು.ಕೆಲವೊಂದು ಯುವಜನತೆ ದಾರಿತಪ್ಪುತ್ತಿರುವ ಇಂದಿನ ದಿನಗಳಲ್ಲಿ ಈ ತಂಡದ ಯುವಕರು ಇತರರಿಗೆ ಸ್ಪೂರ್ತಿಯಾಗುವ ಕೆಲಸಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ಸಾಮಾಜಿಕ ಕಾರ್ಯಕರ್ತರ ರವಿ ಕಟಪಾಡಿ ಹೇಳಿದರು.

ಅವರು ಸೋಮವಾರ ಬೆಳ್ತಂಗಡಿ ತಾಲೂಕು ಮಿತ್ತಬಾಗಿಲು ಗ್ರಾಮದ ಕಲ್ಲಂಡ ಎಂಬಲ್ಲಿ ಯುವ ತೇಜಸ್ಸು ಟ್ರಸ್ಟ್ ವತಿಯಿಂದ ನಿರ್ಮಿಸಲಾದ ಕಬ್ಬಿಣದ ಕಿರುಸೇತುವೆಯನ್ನು ಉದ್ಘಾಟಿಸಿ ಮಾತನಾಡಿದರು.

ಯುವ ತೇಜಸ್ಸು ತಂಡದ ಸದಸ್ಯ ಆಶಿತ್ ಕಲ್ಲಾಜೆ ಮಾತನಾಡಿ 7 ವರ್ಷಗಳ ಹಿಂದೆ ವಾಟ್ಸಾಪ್ ಗ್ರೂಪ್ ಮೂಲಕ ನಿರ್ಮಾಣಗೊಂಡ ತಂಡದಲ್ಲಿ ಯಾವುದೇ ಪದಾಧಿಕಾರಿಗಳು ಇಲ್ಲ. ಇಲ್ಲಿ ಎಲ್ಲರೂ ಸದಸ್ಯರೇ ಆಗಿ ದುಡಿಯುತ್ತಿದ್ದೇವೆ. ಸಾಮಾಜಿಕ ಕಳಕಳಿಯ ಧ್ಯೇಯದೊಂದಿಗೆ ಯುವಜನರು ಒಟ್ಟಾಗಿ ಕಷ್ಟ ಸಂದರ್ಭಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇವೆ. ದಾನಿಗಳಿಂದಲೇ ಸಂಗ್ರಹಿಸಿದ ಮೊತ್ತದಿಂದ ಜಿಲ್ಲೆಯ ನಾನಾ ಕಡೆ 45 ಲಕ್ಷ ರೂ. ಗಿಂತ ಅಧಿಕ ವೆಚ್ಚದ ಸಾಮಾಜಿಕ ಕಳಕಳಿಯ ಕೆಲಸಗಳನ್ನು ತಂಡದ ಮೂಲಕ ಮಾಡಲಾಗಿದೆ. ದಾನಿಗಳು ನೀಡುವ ಧನ ಸಹಾಯದಿಂದ ನಾವು ಸಮಾಜಕ್ಕೆ ಸಹಕರಿಸುವಂತಾಗಿದೆ ಎಂದರು.

ಮಿತ್ತಬಾಗಿಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ ಹರೀಶ್, ಸದಸ್ಯರಾದ ರಾಮಣ್ಣ ಕುಂಬಾರ, ಮೋಹಿನಿ, ಪಿ ಡಿ ಒ ಜಯಕೀರ್ತಿ, ಕನ್ಯಾಡಿ ಸೇವಾ ಭಾರತಿಯ ವಿನಾಯಕರಾವ್ ಕನ್ಯಾಡಿ ಗ್ರಾಪಂ ಮಾಜಿ ಅಧ್ಯಕ್ಷ ನಾರಾಯಣ ಪಾಟಾಳಿ ಮಾಜಿ ಸದಸ್ಯ ಜೋಸೆಫ್ ಸ್ಥಳೀಯರಾದ ವಾಸುದೇವರಾವ್ ಕಕ್ಕೆನೇಜಿ,ಬಾಲಕೃಷ್ಣ ಕಾನರ್ಪ ಮತ್ತಿತರರು ಉಪಸ್ಥಿತರಿದ್ದರು.  ಕೇಶವ ಪ್ರಾಸ್ತಾವಿಕವಾಗಿ ಮಾತನಾಡಿದರು ರಾಜು ಕಾರ್ಯಕ್ರಮ ನಿರೂಪಿಸಿದರು.

ಕಲ್ಲಂಡ ಪ್ರದೇಶದಲ್ಲಿ ಸೇತುವೆ ಇಲ್ಲದೆ ಇಲ್ಲಿನ ಗುತ್ತು,ಕಡ್ತಿಕುಮೇರು, ಕಕ್ಕೆನೇಜಿ,ಮಕ್ಕಿ,ಪರ್ಲ ಮೊದಲಾದ ಪ್ರದೇಶದ 28 ಕುಟುಂಬಗಳಿಗೆ ಹಾಗೂ ಜನಾಕರ್ಷಕ ಎರ್ಮಾಯಿ ಜಲಪಾತಕ್ಕೆ ಹೋಗಬೇಕಾದರೆ ನೇತ್ರಾವತಿ ನದಿ ಸಂಪರ್ಕದ ಏಳೂವರೆ ಹಳ್ಳಕ್ಕೆ ಮರದ ಕಾಲು ಸಂಕವೇ ಆಧಾರವಾಗಿತ್ತು. ಇದರಿಂದ ಇಲ್ಲಿನ ಜನರು ಸಾಕಷ್ಟು ಕಷ್ಟಗಳನ್ನು ಅನುಭವಿಸುತ್ತಿದ್ದರು.

ಇಲ್ಲಿನ ನಾಗರಿಕರ ವಿನಂತಿ ಮೇರೆಗೆ ಯುವತೇಜಸ್ಸು ತಂಡ ದ್ವಿಚಕ್ರ ವಾಹನ ಸಂಚಾರ ಸಾಮರ್ಥ್ಯದ ಕಬ್ಬಿಣದ ಕಿರು ಸೇತುವೆಯನ್ನು ನಿರ್ಮಿಸಿಕೊಟ್ಟಿದೆ. ಇದು ಸ್ಥಳೀಯ ಜನರಿಗೆ ಹೆಚ್ಚಿನ ಅನುಕೂಲವನ್ನು ನೀಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು