News Karnataka Kannada
Tuesday, April 30 2024
ಕ್ಯಾಂಪಸ್

ಮಂಗಳೂರು: ಮಹಾತ್ಮ ಗಾಂಧೀಜಿಯವರ 153 ನೇ ಜನ್ಮ ದಿನಾಚರಣೆ

Mangaluru: The 153rd birth anniversary of Mahatma Gandhi
Photo Credit : By Author

ಮಂಗಳೂರು: ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ-ಮಂಗಳಗಂಗೋತ್ರಿ ಘಟಕ; ಸರ್ಕಾರಿ ಶಾಲೆಗಳ ದತ್ತು ಸ್ವೀಕಾರ ಮತ್ತು ವಿಶ್ವವಿದ್ಯಾನಿಲಯ ಪ್ರಥಮ ದರ್ಜೆ ಕಾಲೇಜು ಮಂಗಳಗಂಗೋತ್ರಿ ಸಹಭಾಗಿತ್ವದಲ್ಲಿ ಮಹಾತ್ಮ ಗಾಂಧೀಜಿ 153 ನೇ ಜನ್ಮ ದಿನಾಚರಣೆಯನ್ನು ಯು. ಶ್ರೀನಿವಾಸ ಮಲ್ಯ ಸಭಾಂಗಣ,ಮಂಗಳಗಂಗೋತ್ರಿ ಇಲ್ಲಿ ಆಯೋಜಿಸಲಾಯಿತು.

ವಿಶ್ವವಿದ್ಯಾನಿಲಯದ ಕುಲಪತಿಗಳು ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಅವರು ಮಹಾತ್ಮ ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅಧ್ಯಕ್ಷೀಯ ಭಾಷಣ ಭಾಷಣ ಮಾಡುತ್ತಾ “ದೇಶ ಕಂಡ ಒಬ್ಬ ಅಪ್ರತಿಮ ಮಹಾನ್ ನಾಯಕ ಮೋಹನದಾಸ್ ಕರಮಚಂದ ಗಾಂಧಿ.

ಸಮಾಜದಲ್ಲಿ ಪರಿವರ್ತನೆ ಕಾಣಬೇಕಿದ್ದರೆ ಮೊತ್ತಮೊದಲು ನಮ್ಮಲ್ಲಿ ನಾವು ಪರಿವರ್ತನೆಗೊಳ್ಳಬೇಕು. ಮಹಾತ್ಮ ಗಾಂಧಿ ಅವರು ತಮ್ಮ ಹೋರಾಟ, ಆದರ್ಶಗಳ ಮೂಲಕ ಅದನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟರು. ಮಹಾತ್ಮ ಗಾಂಧಿ ಅವರು ಜೀವನ ಪರ್ಯಂತ ಹೋರಾಟ ನಡೆಸಿದವರು; ಅವರ ಎಲ್ಲಾ ಹೋರಾಟವು ಅಹಿಂಸಾತ್ಮಕವಾಗಿತ್ತು.ಸತ್ಯ, ಶಾಂತಿ, ತ್ಯಾಗ, ಅಹಿಂಸಾತ್ಮಕವಾಗಿ ಬ್ರಿಟೀಷ್ ವಸಾಹತುಶಾಲಿಯ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟವರು. ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ಕಾಣುತ್ತಿದ್ದ ಗಾಂಧಿ ಅವರನ್ನು ಎಲ್ಲರೂ ಅವರನ್ನು ಬಾಪು ಎಂದು ಕರೆಯುತ್ತಿದ್ದರೆ ತಮ್ಮ ತತ್ವ,ಸಿದ್ಧಾಂತ, ಆದರ್ಶ,ತ್ಯಾಗ,ಹೋರಾಟದ ಮೂಲಕ ಮಹಾತ್ಮ ಎಂದು ಕರೆಸಿಕೊಂಡರು.

ಅವರು ಒಬ್ಬ ವ್ಯಕ್ತಿ ಮಾತ್ರವಲ್ಲ ಒಂದು ಶಕ್ತಿ.ಇವತ್ತಿನ ಯುವ ಪೀಳಿಗೆಯು ಮಹಾತ್ಮ ಗಾಂಧಿ ಅವರು ಹಾಕಿಕೊಟ್ಟಿರುವ ಸತ್ಯ, ಶಾಂತಿ, ತ್ಯಾಗ, ಅಹಿಂಸೆ, ಸಚ್ಚಾರಿತ್ರ್ಯ, ಸನ್ಮಾರ್ಗ, “ಸರ್ವೇ ಜನಾಃ ಸುಖಿನೋ ಭವಂತು” ಮನಸ್ಥಿತಿ ಬೆಳಿಸಿಕೊಂಡು ದೇಶವನ್ನು ಕಟ್ಟುವ ಕೆಲಸದಲ್ಲಿ ತೊಡಗಿಕೊಳ್ಳಬೇಕು. ‘ಜೈ ಜವಾನ್ ಜೈ ಕಿಸಾನ್’ ಘೋಷಣೆಯೊಂದಿಗೆ ಅಭಿವೃದ್ಧಿಯ ಹರಿಕಾರರಾಗಿದ್ದ ಅಪ್ರತಿಮ ದೇಶಭಕ್ತ, ಸರಳತೆ, ಪ್ರಾಮಾಣಿಕತೆಯ ಸಾಕಾರಮೂರ್ತಿ ದೇಶದ ಎರಡನೇ ಪ್ರಧಾನ ಮಂತ್ರಿಗಳಾದ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಕೊಡುಗೆಗಳನ್ನು ಸ್ಮರಿಸುತ್ತಾ ಅವರ ಜನ್ಮದಿನಾಚರಣೆಯನ್ನೂ ಇಂದು ಆಚರಿಸುತ್ತಿದ್ದೇವೆ” ಹೇಳಿದರು.

ಪ್ರೊ. ಶೇಖರ್ ಎಂ.ಎಸ್., ನಿರ್ದೇಶಕರು, ಪ್ರಸಾರಂಗ, ಮೈಸೂರು ವಿಶ್ವವಿದ್ಯಾನಿಲಯ ಮತ್ತು ನಿಕಟಪೂರ್ವ ನಿರ್ದೇಶಕರು, ಗಾಂಧಿ ಅಧ್ಯಯನ ಕೇಂದ್ರ, ಮೈಸೂರು ವಿಶ್ವವಿದ್ಯಾನಿಲಯ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ’ಮಹಾತ್ಮ ಗಾಂಧೀಜಿ ಮತ್ತು ಪ್ರಸ್ತುತತೆ’ ಕುರಿತು ಉಪನ್ಯಾಸವನ್ನು ನೀಡಿದರು. ತಮ್ಮ ಉಪನ್ಯಾಸದಲ್ಲಿ ಅವರು “ತತ್ವಗಳಿಲ್ಲದ ರಾಜಕೀಯ; ಶ್ರಮವಿಲ್ಲದೆ ಸಂಪತ್ತು; ಆತ್ಮಸಾಕ್ಷಿಯಿಲ್ಲದ ಆನಂದ; ನಡತೆ ಇಲ್ಲದ ಜ್ಞಾನ; ನೈತಿಕತೆ ಇಲ್ಲದ ವ್ಯಾಪಾರ; ಮಾನವೀಯತೆ ಇಲ್ಲದ ವಿಜ್ಞಾನ; ತ್ಯಾಗವಿಲ್ಲದೆ ಪೂಜೆ” ಮಹಾತ್ಮ ಗಾಂಧಿ ಅವರು ಅಂದು ಪ್ರತಿಪಾದಿಸಿದ ಏಳು ಸಾಮಾಜಿಕ ಪಾಪಗಳು ಅಂದಿಗು, ಇಂದಿಗು ಮತ್ತು ಮುಂದೆಂದಿಗೂ ಪ್ರಸ್ತುತವಾಗಿದ್ದು ದೇಶದ ಪ್ರತಿಯೊಬ್ಬ ಪ್ರಜೆಯೂ ಅವುಗಳನ್ನುತಮ್ಮ ಕ್ಷೇತ್ರಕ್ಕೆ ಅನುಗುಣವಾಗಿ ಅಳವಡಿಸಿಕೊಂಡು ಆತ್ಮವಿಮರ್ಶೆ ಮಾಡಿಕೊಳ್ಳಬೇಕು; ಅವಾಗ ಮಾತ್ರ ನಮ್ಮಲ್ಲಿರುವ ಹುಳುಕುಗಳನ್ನು ಸರಿಪರಿಸಿಕೊಂಡು ಯಶಸ್ವಿಯಾಗಿ ಉತ್ತಮ ವ್ಯಕ್ತಿತ್ವ, ಸಮಾಜ ಮತ್ತು ರಾಷ್ಟ ನಿರ್ಮಾಣ ಕಾರ್ಯ ಸಾಧ್ಯವಾಗುತ್ತದೆ. ಭಾರತ ಸ್ವಾತಂತ್ರ್ಯ ಚಳುವಳಿಯ ನಾಯಕ ಮತ್ತು ಅಹಿಂಸೆಯ ಪ್ರವರ್ತಕ ಮಹಾತ್ಮ ಗಾಂಧಿಯವರ ಜನ್ಮದಿನವಾದ ಅಕ್ಟೋಬರ್ 2 ರಂದು ಜಗತ್ತಿನಾದ್ಯಂತ ಅಂತರಾಷ್ಟ್ರೀಯ ಅಹಿಂಸಾ ದಿನವನ್ನು ಆಚರಿಸಲಾಗುತ್ತಿರುವುದು ಭಾರತೀಯರೆಲ್ಲರೂ ಹೆಮ್ಮೆ ಪಡುವಂತದ್ದು.

ತನಗೆ ಆದ ಅವಮಾನಕ್ಕೆ ದೃತಿಗೆಡದೇ ಅದನ್ನೇ ಸಕಾರಾತ್ಮ ದೃಷ್ಟಿಕೋನದಲ್ಲಿ ಸವಾಲಾಗಿ ಸ್ವೀಕರಿಸಿ ಒಬ್ಬ ಮಹಾನ್ ಜಾಗತಿಕ ನಾಯಕರಾಗಿ ರೂಪುಗೊಂಡರು. ಭಾರತದ ಶ್ರೇಷ್ಠತೆ ಇರುವುದು ಭೌಗೋಳಿಕತೆ, ಸಂಸ್ಕೃತಿ, ಭಾಷೆ, ಆಹಾರ, ವಿಹಾರ,ಆಚಾರ ವಿಚಾರಗಳಲ್ಲಿರುವ ವೈವಿಧ್ಯತೆ. ಇಲ್ಲಿರುವ ಬಹುತ್ವತೆಯನ್ನು ಉಳಿಸಿಕೊಂಡು ಎಲ್ಲರ ಒಳಗೊಳ್ಳುವಿಕೆಯ ಮೂಲಕ ಸೌಹಾರ್ದತೆಯನ್ನು ಕಾಪಾಡುವಲ್ಲಿ ಗಾಂಧಿ ಅವರ ತತ್ವ ಸಿದ್ಧಾಂತಗಳು ಅತ್ಯಂತ ಪ್ರಸ್ತುತವಾದದ್ದು” ಎಂದು ತಮ್ಮ ಉಪನ್ಯಾಸದಲ್ಲಿ ಹೇಳುತ್ತಾ ಗಾಂಧಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿರುವ ಮಂಗಳೂರು ವಿಶ್ವವಿದ್ಯಾನಿಲಯವನ್ನು ಶ್ಲಾಘಿಸಿದರು.

ಪ್ರೊ. ಕಿಶೋರ್ ಕುಮಾರ್ ಸಿ.ಕೆ., ಕುಲಸಚಿವರು ತಮ್ಮ ಭಾಷಣವನ್ನು ಮಾಡುತ್ತಾ ಹೇಳಿದರು, “ಗಾಂಧಿ ಅವರ ತತ್ವ ಸಿದ್ಧಾಂತವನ್ನು ಕೇವಲ ಬಾಯಿ ಮಾತಿನಲ್ಲಿ ಹೇಳಿದರೆ ಸಾಲದು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜೀವನದಲ್ಲಿ ಸರಳತೆ, ಅಹಿಂಸೆ ಮತ್ತುಸತ್ಯಮೇವ ಜಯತೇ ಎಷ್ಟು ಅಮೂಲ್ಯ ಎಂಬುವುದನ್ನು ತನ್ನ ಕಾರ್ಯದಲ್ಲಿ ತೋರಿಸಿಕೊಟ್ಟರು.ಭಾರತ ಸ್ವಾತಂತ್ರ್ಯ ಚಳುವಳಿಯ ನಾಯಕತ್ವ ವಹಿಸಿ ಅಹಿಂಸಾ ಮಾರ್ಗದಲ್ಲಿ ಬ್ರಿಟೀಷರ ಕಪಿಮುಷ್ಠಿಯಿಂದ ಬಿಡಿಸಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮಗಾಂಧಿ ಅವರ ಹೋರಾಟ, ತ್ಯಾಗ,ಬಲಿದಾನವನ್ನು ನಾವು ಎಂದಿಗೂ ಮರೆಯಬಾರದು’ಎಂದರು.

ಈ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯದ ಶುಚಿತ್ವ ದಳದ ಸಿಬ್ಬಂದಿಗಳಾದ ರೇವತಿ, ವಿಜಯಲಕ್ಷ್ಮಿ, ಶೋಬಾ,ತಿಮ್ಮಪ್ಪ, ನಾಗೇಶ್ ಅವರ ಸೇವೆಯನ್ನು ಗೌರವಿಸಿ ಸನ್ಮಾನಿಸಲಾಯಿತು.

ಗಾಂಧಿ ಜಯಂತಿ ಪ್ರಯುಕ್ತ ವಿಶ್ವವಿದ್ಯಾನಿಲಯ ದತ್ತು ಸ್ವೀಕರಿಸಿರುವ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ ‘ನಾನು ಕಂಡಂತೆ ಮಹಾತ್ಮ ಗಾಂಧೀಜಿ’ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಳನ್ನು ವಿತರಿಸಲಾಯಿತು. ರಾಮಕೃಷ್ಣ ಸರ್ಕಾರಿ ಅನುದಾನಿತ ಪ್ರೌಢಶಾಲೆ ಹರೇಕಳ ಸಿಂಚನಾ; ನಿಹಾಲ್, ದ. ಕ. ಜಿ. ಪಂ. ಹಿರಿಯ ಪ್ರಾಥಮಿಕ ಶಾಲೆ ದೇರಳಕಟ್ಟೆ, ಝುಲೈಕಾ ಮುಂಜಿರ್ ನೇತಾಜಿ ಬೋಸ್ ಸರ್ಕಾರಿ ಪ್ರೌಢ ಶಾಲೆ ದೇರಳಕಟ್ಟೆ; ಕಾಲೇಜು ಮಟ್ಟದಲ್ಲಿ ಸೃಷ್ಟಿ, ಅಕ್ವೆಲ್, ದೀಕ್ಷಿತಾ ಬಹುಮಾನ ವಿಜೇತರು.

ಕಾರ್ಯಕ್ರಮ ಸಂಯೋಜಕರಾದ ಪ್ರೊ. ಪ್ರಶಾಂತ ನಾಯ್ಕ ಪ್ರಸ್ತಾವನೆ ಗೈದು ಎಲ್ಲರನ್ನೂ ಸ್ವಾಗತಿಸಿದರು. ಎನ್.ಎಸ್.ಎಸ್. -ಪ್ರೋಗ್ರಾಮ್ ಆಫೀಸರ್ ಡಾ.ಗೋವಿಂದರಾಜು ಎಂ.ಬಿ., ಅತಿಥಿಗಳನ್ನು ಪರಿಚಯಿಸಿದರು ಹಾಗೂ ಸನ್ಮಾನ ಮತ್ತು ಸ್ವಚ್ಚತಾ ಕಾರ್ಯಕ್ರಮದ ನೇತೃತ್ವ ವಹಿಸಿದರು. ಮಿಯಾಜ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಜ್ಯೋತಿ ಡಿ. ಎಂ. ಸನ್ಮಾನಿತರ ಸೇವೆಯನ್ನು ವಾಚಿಸಿದರು ಡಾ. ಮೋಹನ್ ಎಸ್. ಸಿಂಘೆ, ಪ್ರಾಂಶುಪಾಲರು, ವಿಶ್ವವಿದ್ಯಾನಿಲಯ ಪ್ರಥಮ ದರ್ಜೆ ಕಾಲೇಜು ವಂದನಾರ್ಪಣೆ ಸಲ್ಲಿಸಿದರು.

ಪ್ರೊ. ಕೆ. ಎಸ್.ಜಯಪ್ಪ, ಹಣಕಾಸು ಅಧಿಕಾರಿಗಳು, ಪ್ರೊ. ಸೋಮಣ್ಣ, ಪ್ರೊ. ಗಣೇಶ್ ಸಂಜೀವ, ಡಾ. ಚಂದ್ರು ಹೆಗ್ಡೆ, ಮೋಹನ್ ಕೆ. ಎಸ್., ಡಾ. ಶೇಖರ ನಾಯ್ಕ, ಡಾ. ರಮೇಶ್ ಸಾಬು ಗಣಿ, ಲಕ್ಷ್ಮಣ, ಯಮುನಾ ಎಸ್. ಎಂ., ಆಯೇಶಾ, ವಿವೇಕಾನಂದ, ಇನ್ನಿತರ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗಳು, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಡಾ.ಪ್ರಶಾಂತ ನಾಯ್ಕ ಅವರ ಸಂಗ್ರಹದ ಮಹಾತ್ಮ ಗಾಂಧಿ ಅವರ ಸ್ವಾತಂತ್ರ್ಯ ಹೋರಾಟದ ಛಾಯಾಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು