News Karnataka Kannada
Thursday, May 02 2024
ಮಂಗಳೂರು

ಬೆಳ್ತಂಗಡಿ: ಕಾಂಗ್ರೆಸ್ ಪಕ್ಷದಿಂದ ತಹಶೀಲ್ದಾರ್ ಗೆ ದೂರು

Congress files complaint with Tahsildar
Photo Credit :

ಬೆಳ್ತಂಗಡಿ: ಅಕ್ರಮ-ಸಕ್ರಮ ಯೋಜನೆಯಡಿ ಭೂಮಿ ಮಂಜೂರಾತಿಗೊಳಿಸುವ ವಿಚಾರದಲ್ಲಿ ಬೆಳ್ತಂಗಡಿಯಲ್ಲಿ ನಿಯಮ ಉಲ್ಲಂಘನೆ, ವ್ಯಾಪಕ ಭ್ರಷ್ಟಾಚಾರ ನಡೆಸಲಾಗಿದ್ದು ಪಕ್ಷಪಾತ ತಾರತಮ್ಯ ನಡಸಿದೆ. ಈ ಬಗ್ಗೆ ಹಲವಾರು ಸಾರ್ವಜನಿಕರು ನಮಗೆ ದೂರು ನೀಡಿದ್ದಾರೆ. ಬೈಠಕ್ ನಡೆಸುವ ವೇಳೆ ಕಂದಾಯ ಇಲಾಖೆಯ ಯಾವೊಬ್ಬ ಅಧಿಕಾರಿಗಳ ಸಹಿ ಇಲ್ಲದೆ ಬೆರಳೆನಿಕೆಯ ಹಕ್ಕುಪತ್ರ ನೀಡಿ ಜನರನ್ನು ವಂಚಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಕೆ. ವಸಂತ ಬಂಗೇರ ಆರೋಪಿಸಿದರು.

ಬೆಳ್ತಂಗಡಿ ತಾಲೂಕಿನಲ್ಲಿ ಅಕ್ರಮ- ಸಕ್ರಮದಲ್ಲಿ ಫಲಾನುಭವಿಗಳ ಆಯ್ಕೆಯಲ್ಲಿ ತಾರತಮ್ಯ ನಡೆಯುತ್ತಿದೆ ಎಂದು ಆರೋಪಿಸಿ ಮಾ.18 ರಂದು ತಾಲೂಕು ಆಡಳಿತ ಸೌಧದಲ್ಲಿ ತಹಶೀಲ್ದಾರ್ ಸಮ್ಮುಖದಲ್ಲಿ ಚರ್ಚೆ ನಡೆಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಮನವಿ ನೀಡಿ ಮಾತನಾಡಿದರು.

ತೋಟತ್ತಾಡಿ ವೆಂಕಟ್ರಮಣ ಗೌಡರ ಅಕ್ರಮ ಸಕ್ರಮಕ್ಕೆ ಮೋಹನ್ ಗೌಡ ಎಂಬಾತ ಹಣ ಪಡೆದಿದ್ದ. ಬಳಿಕ ವಿಷಯ ಬಹಿರಂಗವಾಗುತ್ತಲೆ ಅರ್ಧ ಹಣ ಹಿಂದಿರುಗಿಸಿದ್ದಾನೆ. ‌ತೋಮಸ್ ಧರ್ಮಸ್ಥಳ ಅವರ ಅರ್ಜಿ ಮುಂದುವರಿಸಲು ಗ್ರಾ.ಪಂ. ಸದಸ್ಯ ಶಾಸಕರ ಕಚೇರಿಯ ಪಟ್ಟಿಯಲ್ಲಿಲ್ಲ ಎಂದು ಉತ್ತರ ನೀಡುತ್ತಾನೆ ಎಂದು ಫೋನ್ ಕರೆಯ ದಾಖಲೆ ಸಹಿತ ತಹಶೀಲ್ದಾರ್ ಗೆ ದೂರು ನೀಡಿದರು. ಶಾಸಕರು ಹೇಳಿದ ಅಥವಾ ಬಿಜೆಪಿ ಶಕ್ತಿ ಕೇಂದ್ರ ಪ್ರಮುಖರು, ಕಾರ್ಯಕರ್ತರು ಹೇಳಿದ ಕಡತವನ್ನಷ್ಟೆ ಮಂಜೂರು ಗೊಳಿಸಲಾಗುತ್ತಿದೆ ಎಂಬ ದೂರುಗಳು ಕೇಳಿ ಬಂದಿವೆ ತಹಶೀಲ್ದಾರ್ ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ತಾಲೂಕು ಕಚೇರಿ ಹಳೇ ಕಟ್ಟಡ ಕೆಡವಲು ಅನುಮತಿ ಪಡೆದಿಲ್ಲ. ರಕ್ಷಣೆ ನೀಡಬೇಕಿದ್ದ ಪೊಲೀಸ್ ಇಲಾಖೆ ಭಕ್ಷಿಸುತ್ತಿದೆ. ನ.ಪಂ. ಸಂಬಂಧಿಸಿ ಸುತ್ತಮುತ್ತಲ 13 ಗ್ರಾ.ಪಂ.ಗಳ ಮೂರು ಕಿ.ಮೀ. ವ್ಯಾಪ್ತಿಯನ್ನು ನ.ಪಂ. ವ್ಯಾಪ್ತಿಗೆ ಒಳಪಡಿಸಬೇಕೆಂಬ ನಿಯಮದಿಂದ ಗ್ರಾಮೀಣ ಕೃಪಾಂಕಕ್ಕೆ ತೊಂದರೆ ಆಗುತ್ತಿದೆ. ಉಳಿದಂತೆ 2016, 17, 18 ರಲ್ಲಿ ಮಂಜೂರಾತಿಯಾದ ಅಕ್ರಮ ಸಕ್ರಮ ಕಡತ ವಿಲೇವಾರಿ‌ ಮಾಡಿಲ್ಲ. ತಹಶೀಲ್ದಾರರು ಖಡತಗಳಿಗೆ ಸಹಿ ಹಾಕಿತ್ತುಲ್ಲ. ಜತೆಗೆ ತಾಲೂಕು ಕಚೇರಿ ದಲ್ಲಾಳಿಗಳ ಕೇಂದ್ರವಾಗಿದೆ. ಇವೆಲ್ಲದಕ್ಕೂ ವಾರಗಳಲ್ಲಿ ಕಡಿವಾಣ ಹಾಕದೇ ಹೋದಲ್ಲಿ ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ತಹಶೀಲ್ದಾರ್ ಟಿ.ಸುರೇಶ್ ಕುಮಾರ್ ಉತ್ತರಿಸಿ, ನಿಮ್ಮ ಎಲ್ಲ ಅಹವಾಲು ಸ್ವೀಕರಿಸಿದ್ದೇನೆ. ನಾನು ಚುನಾವಣೆ ಸಂದರ್ಭ ಬಂದಿದ್ದೇನೆ. ಎಲ್ಲವನ್ನೂ ಪರಿಶೀಲಿಸಿ ಕಡತಕ್ಕೆ ಸಹಿ ಹಾಕಬೇಕಾಗುತ್ತದೆ‌. ಅಕ್ರಮ ಸಕ್ರಮ ವಿಚಾರದಲ್ಲಿ ಸಮಿತಿ ಅಧ್ಯಕ್ಷರು ಕರೆದಾಗ ನಿಯಮದಂತೆ ನಾವು ತೆರಳಬೇಕಾಗುತ್ತದೆ. ಇಲ್ಲಿ ಪಕ್ಷವನ್ನು ಆಧರಿಸಿ ಕಡತ ವಿಲೇವಾರಿ ಮಾಡುತ್ತಿಲ್ಲ. ಅಂತಹದು ನನ್ನ ಗಮನಕ್ಕೆ ಬಂದಿಲ್ಲ. ಕಾನೂನಾತ್ಮಕವಾಗಿಯೇ ನೀಡುತ್ತಿದ್ದೇವೆ. ಮೇ ಅಂತ್ಯದ ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ನಿಮ್ಮದು ಅಂತಹ ಯಾವುದೇ ಕಡತವಿದ್ದರೆ ನೀವು ನೀಡಿ. ಪಕ್ಷಾತೀತವಾಗಿ ವಿಲೇವಾರಿ ಮಡಲಾಗುವುದು, ಸುಖಾಸುಮ್ಮನೆ ಆರೋಪಿಸಿದರೆ ನಾನು ಒಪ್ಪಿಕೊಳ್ಳಲು ಸಿದ್ಧನಿಲ್ಲ ಎಂದು ಹೇಳಿದರು.

ತಹಶೀಲ್ದಾರ್ ಸಿಗುತ್ತಿಲ್ಲ ಎಂಬುದು ತಪ್ಪು ಕಲ್ಪನೆ, ಮುಂಜಾನೆ 6 ರಿಂದ ಸಂಜೆ 9 ಗಂಟೆವರೆಗೆ ಸಿಬಂದಿ ಸಹಕಾರದಲ್ಲಿ ಜಾತಿ ಪ್ರಮಾಣಪತ್ರ, ಆಧಾರ್ ತಿದ್ದುಪಡಿ ಕಡತ ವಿಲೇವಾರಿ ಮಾಡಲಾಗುತ್ತಿದೆ. ಆಧಾರ್ ತಿದ್ದುಪಡಿಗೆ 2,000 ಕಡತಗಳು ಬಾಕಿ ಇದ್ದವು ಪ್ರಸಕ್ತ 200 ಬಾಕಿ ಉಳಿದಿದೆ. ದೃಢೀಕರಣ ವಿಚಾರವಾಗಿ ಕಡತ ಪರಿಶೀಲಿಸದೆ ಎನ್.ಒ.ಸಿ. ನೀಡಲು ಸಾಧ್ಯವಿಲ್ಲ. ಕನ್ವರ್ಷನ್ ಆರಂಭಿಸಿದ್ದೇವೆ. ನಾನು ಇಲ್ಲಿಗೆ ಹೊಸಬ ಹಾಗಾಗಿ ಭೌಗೋಳಿಕ ವ್ಯಾಪ್ತಿ ಪರಿಶೀಲಿಸಲು ಸಮಯ ತೆಗೆದುಕೊಳ್ಳುತ್ತಿದೆ ಎಂದು ಪ್ರತಿಕ್ರಿಯೆ ನೀಡಿದರು.

ಪ.ಪಂ. ವ್ಯಾಪ್ತಿಗೆ ಸುತ್ತಮುತ್ತಲ 13 ಗ್ರಾಮಗಳನ್ನು ಸೇರಿಸುವ ಕುರಿತು ಯಾವುದೇ ಪ್ರಸ್ತಾವನೆ ಇಲ್ಲ. ಈ ಕುರಿತು ಪಂ.ಪಂ. ಮುಖ್ಯಾಧಿಕಾರಿ ರಾಜೇಶ್ ಅವರನ್ನು ಸ್ಥಳಕ್ಕೆ ಕರೆಸಿ ಸ್ಪಷ್ಟೀಕರಣ ಪಡೆಯಲಾಯಿತು. ಬಳಿಕ ಕಾಂಗ್ರೆಸ್ ಮುಖಂಡರು ಮುಂದಿನ ದಿನಗಳಲ್ಲಿ ನಡೆಸಲು ಉದ್ದೇಶಿಸಿದ ಸಿಟ್ಟಿಂಗ್ ಕಡತಗಳನ್ನು ಬಹಿರಂಗ ಪಡಿಸುವಂತೆ ಒತ್ತಾಯ ಮಾಡಿದರು. ಇದಕ್ಕೆ ತಹಶೀಲ್ದಾರ್ ನಿರಾಕರಿಸಿದಾಗ ಮಾತಿನ ಚಕಮಕಿ ನಡೆಯಿತು. ಬಳಿಕ ವಿವರ ನೀಡುವುದಾಗಿ ತಿಳಿಸಿದರು.

ಮಾಜಿ ಶಾಸಕ ಕೆ.ವಸಂತ ಬಂಗೇರ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೈಲೇಶ್ ಕೆ., ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಕೆಪಿಸಿಸಿ ಸದಸ್ಯ ಕೇಶವ ಗೌಡ, ವಕ್ತಾರ ಮನೋಹರ್ ಕುಮಾರ್, ಮಾಜಿ ಜಿ.ಪಂ. ಸದಸ್ಯರಾದ ಶೇಖರ ಕುಕ್ಕೇಡಿ, ಧರಣೇಂದ್ರ ಕುಮಾರ್, ನಮಿತಾ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಂದನಾ ಭಂಡಾರಿ, ಪ.ಪಂ. ಸದಸ್ಯ ಜಗದೀಶ್, ಪ್ರಮುಖರಾದ ಅಭಿನಂದನ್ ಹರೀಶ್ ಕುಮಾರ್, ಉಷಾ ಶರತ್, ಅಶ್ರಫ್ ನೆರಿಯ, ಸಲೀಂ, ರಾಜಶೇಖರ್ ಕೋಟ್ಯಾನ್, ಜಯವಿಕ್ರಂ ಕಲ್ಲಾಪು, ಪ್ರಭಾಕರ್, ಕಾರ್ಮಿಕ ಮುಖಂಡ ಬಿ.ಎಂ.ಭಟ್ ಮತ್ತಿತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು