News Karnataka Kannada
Monday, April 29 2024
ಮಂಗಳೂರು

ಬಂಟ್ವಾಳ: ತಾಲೂಕಿನಾದ್ಯಂತ ಸುರಿದ ಭಾರೀ ಮಳೆಗೆ ಹಲವೆಡೆ ಹಾನಿ

Heavy rains lashed bantwal taluk, causing damage to several areas.
Photo Credit : By Author
ಬಂಟ್ವಾಳ: ಕಳೆದ ಕೆಲವು ದಿನಗಳ ಕಾಲ ವಿರಾಮ ಪಡೆದು ಕೊಂಡಿದ್ದ ಮಳೆ ಶನಿವಾರ ಮುಂಜಾನೆ ಧಾರಾಕಾರವಾಗಿ ಸುರಿದು ತುಂಬೆಯಲ್ಲಿ ಮನೆಯೊಂದಕ್ಕೆ ಹಾನಿ ಮಾಡಿದೆ.
ತುಂಬೆಯ ಮುದಲ್ಮೆ ನಾಗಪ್ಪ ಪೂಜಾರಿ ಅವರ ಮನೆಯ ಹಿಂಬದಿಯ ಗೋಡೆ ಕುಸಿದು ಮನೆಗೆ ತೀವ್ರ ಹಾನಿಯಾಗಿದೆ. ಮುಂಜಾನೆ ಮನೆಯವರೆಲ್ಲಾ ಮಲಗಿರುವ ವೇಳೆ ಘಟನೆ ನಡೆದಿದ್ದು, ಅದೃಷ್ಟವಶಾತ್ ಮನೆ ಮಂದಿ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.
ಕಳ್ಳಿಗೆ ಗ್ರಾಮದ ಮುಂಡಾಜೆ  ಅಶ್ವಿನ್ ಎಂಬವರ ಮನೆಗೆ ನೀರು ನುಗ್ಗಿದ್ದು, ಅಪಾರ ಹಾನಿ ಸಂಭವಿಸಿದೆ.
 ಬಂಟ್ವಾಳ ಮೂಡ ಗ್ರಾಮದ ಮೊಡಂಕಾಪಿನ ಕಾಮೆರೆಕೋಡಿನಲ್ಲಿ ಸಾರ್ವಜನಿಕ ನೀರು ಹೊಗುವ ತೋಡಿಗೆ ಮುನ್ಸಿಪಾಲಿಟಿಯ ವತಿಯಿಂದ ನಿರ್ಮಿಸಲಾದ ಕಾಲು ಸಂಕವು ರಾತ್ರಿ ಬಂದ ಮಳೆಗೆ ಕುಸಿದು ಬಿದ್ದಿದೆ.
ಸಂಕದ ಬದಿ ಇರುವ ಮುನ್ಸಿಪಾಲಿಟಿಯ ಮಾಜಿ ಅದ್ಯಕ್ಷರಾದ ಶ್ರಿಮತಿ ಜೋಸ್ಫಿನ್ ಡಿ’ಸೊಜರವರ ಮನೆಯ ಆವರಣ ಗೋಡೆ ಕುಸಿದು ಹತ್ತಿರವಿರುವ ಪಂಪ್ಶೆಡ್ ಮತ್ತು ನೀರಿನ ಟಾಂಕ್ ಕುಸಿಯುವ ಆಪಾಯವಿದೆ ಎಂದು ತಿಳಿದುಬಂದಿದೆ.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು