News Karnataka Kannada
Monday, April 22 2024
Cricket
ಮಂಗಳೂರು

ಬಂಟ್ವಾಳ: ಬಿಕೆ ಹರಿಪ್ರಸಾದ್ ಸೈಡ್ ಲೈನ್, ಡಾ. ಪ್ರಣವಾನಂದ ಸ್ವಾಮೀಜಿ ಆಕ್ರೋಶ

If the Billava community is targeted, it will have to face its consequences in the next elections.
Photo Credit : News Kannada

ಬಂಟ್ವಾಳ: ಬಿಲ್ಲವ ಸಮುದಾಯವನ್ನು ಅವಗಣನೆ ಮಾಡಿದರೆ, ಸಮುದಾಯವನ್ನು ಟಾರ್ಗೆಟ್ ಮಾಡಿದರೆ, ರಾಜಕೀಯ ಪಕ್ಷಗಳು ಮುಂದಿನ ಚುನಾವಣೆಯಲ್ಲಿ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಬ್ರಹ್ಮ ಶ್ರೀ ನಾರಾಯಣ ಗುರು ಶಕ್ತಿ ಪೀಠದ ಶ್ರೀ ಡಾ. ಪ್ರಣವಾನಂದ ಸ್ವಾಮೀಜಿ ಹೇಳಿದರು.

ಬಂಟ್ವಾಳದ ಮೆಲ್ಕಾರ್ ನ ಬಿರ್ವ ಸೆಂಟರ್ ನಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರು, ದೇಶದ ಹದಿನೈದು ರಾಜ್ಯಗಳಲ್ಲಿ ಪ್ರಭಾರಿಗಳಾಗಿದ್ದವರು ಬಿ.ಕೆ.ಹರಿಪ್ರಸಾದ್. ಹೀಗಾಗಿ ಅವರನ್ನು ಮಂತ್ರಿಯನ್ನಾಗಿಸಬೇಕು ಎಂದು ಒತ್ತಾಯಿಸಿದರು. ಆದರೆ ಅವರನ್ನು ರಾಜಕೀಯವಾಗಿ ಸಂಪೂರ್ಣವಾಗಿ ಮುಗಿಸಬೇಕು ಎಂಬ ಹುನ್ನಾರ ನಡೆದಿದೆ ಎಂದು ಅನುಮಾನ ವ್ಯಕ್ತಪಡಿಸಿದರು. ಜನಾರ್ದನ ಪೂಜಾರಿ ಅವರನ್ನು ಸೈಡ್ ಲೈನ್ ಮಾಡಿದಂತೆ ಹರಿಪ್ರಸಾದ್ ಅವರನ್ನೂ ಮೂಲೆಗುಂಪಾಗಿಸಲಾಗುತ್ತಿದೆ. ಹರಿಪ್ರಸಾದ್ ಅವರು ಹಿಂದುಳಿದ ಸಮುದಾಯದ ನಾಯಕರಾಗಿದ್ದಾರೆ.

ನೀವು ಘೋಷಿಸಿದಂತೆ 250 ಕೋಟಿಗಳನ್ನು ನಿಗಮಕ್ಕೆ ನೀಡಬೇಕು ಎಂದು ಸರಕಾರವನ್ನು ಒತ್ತಾಯಿಸಿದ ಶ್ರೀಗಳು, ಕಾನೂನಾತ್ಮಕ ವ್ಯವಸ್ಥೆ ಬುಡಮೇಲು ಮಾಡಲು ನಮ್ಮ ಯುವಕರು ಹೋಗದಂತೆ ಮಾಡಲು ಚಿಂತನೆ ನಡೆಸಲಾಗಿದೆ. ನಮ್ಮ ಸಮುದಾಯದ ಯುವಕರು ಕೇಸುಗಳನ್ನು ಮೈಮೇಲೆಳೆದುಕೊಳ್ಳಬಾರದು ಎಂದರು. ಬದುಕನ್ನು ಒತ್ತೆಯಿಟ್ಟು ಯಾರಿಗೋ ಕೆಲಸ ಮಾಡುವ ಅವಶ್ಯಕತೆ ಇಲ್ಲ ಎಂದರು.

ಬೆಂಗಳೂರಿನಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಪುತ್ಥಳಿ ಅನಾವರಣ ಮಾಡಬೇಕು. ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ನೀರಾ ಮತ್ತು ಶೇಂದಿ ಇಳಿಸುವ ಕುರಿತು ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು. ನಮಗೆ ಎಸ್.ಟಿ. ಮೀಸಲಾತಿಯನ್ನು ನೀಡಬೇಕು ಎಂದು ಹೇಳಿದರು. ಬಿಜೆಪಿ ಸರಕಾರ ನಾರಾಯಣಗುರು ನಿಗಮ ಘೋಷಣೆ ಮಾಡಿತು, ಇನ್ನು ಕಾಂಗ್ರೆಸ್ ಸರಕಾರ ಅಧ್ಯಕ್ಷ, ಪದಾಧಿಕಾರಿಗಳನ್ನು ಘೋಷಣೆ ಮಾಡಬೇಕು ಎಂದವರು ಹೇಳಿದರು.

ಕೇರಳದಲ್ಲಿ ದೊಡ್ಡ ಪ್ರಮಾಣದ ಮೀಸಲಾತಿ ನಮ್ಮ ಸಮುದಾಯಕ್ಕಿದೆ. ಆದರೆ ಕರ್ನಾಟಕದಲ್ಲಿ ಇಲ್ಲ. ಹೀಗಾಗಿ ನಮ್ಮ ಸಮುದಾಯ ಎಸ್.ಟಿ. ಮೀಸಲಾತಿಯನ್ನು ಪಡೆಯಲು ದೊಡ್ಡ ಮಟ್ಟಿನ ಹೋರಾಟ ಅವಶ್ಯ ಎಂದರು.

ರಾಜ್ಯ ಈಡಿಗ ಬಿಲ್ಲವ ಮಹಾಮಂಡಲದ ಉಪಾಧ್ಯಕ್ಷ ಜಿತೇಂದ್ರ ಜೆ. ಸುವರ್ಣ, ಜಿಲ್ಲಾ ಗೌರವಾಧ್ಯಕ್ಷ ಸಂಜೀವ ಪೂಜಾರಿ, ಜಿಲ್ಲಾ ಅಧ್ಯಕ್ಷ ಸುರೇಶ್ಚಂದ್ರ ಕೋಟ್ಯಾನ್, ಜಿಲ್ಲಾ ಪ್ರದಾನ ಕಾರ್ಯದರ್ಶಿ ಶಂಕರ ಸುವರ್ಣ, ಸಂಘಟನಾ ಕಾರ್ಯದರ್ಶಿ ಸತೀಶ್ ಬಾಯ್ಲ, ಮತ್ತು ಸುಂದರ ಪೂಜಾರಿ ಮತ್ತು ಜಯಶಂಕರ್ ಕಾನ್ಸಾಲೆ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು