ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಇಂದು 40 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ಸುಡುತ್ತಿರುವ ಬಿಸಿಲಿನ ಧಗೆ ತಡೆಯಲಾರದೆ ಇಬ್ಬರು ಸ್ನೇಹಿತರು ಬಾವಿಗಿಳಿದು ನೀರಲ್ಲಿ ಮುಳುಗಿ ಸಾವನಪ್ಪಿರುವ ಘಟನೆ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ನಡೆದಿದೆ. ಸೋಮಶೇಖರ್ ಆಲಮೇಲ್ (16), ಮಲಿಕ್ ನದಾಫ್ (16) ಮೃತ ಬಾಲಕರು.
ಸೋಮಶೇಖರ್ ಹಾಗೂ ಮಲಿಕ್ ನದಾಫ್ ಇಬ್ಬರು ಬಾವಿಯಲ್ಲಿ ಸ್ನಾನಕ್ಕೆ ಹೋಗಿದ್ದಾರೆ. ಈಜಲು ಬಾರದೆ ಇಬ್ಬರು ಗೆಳೆಯರು ಬಾವಿಯಲ್ಲಿ ಪ್ರಾಣ ಬಿಟ್ಟಿದ್ದಾರೆ ಎನ್ನಲಾಗಿದೆ. ಸಿಂದಗಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.