News Karnataka Kannada
Wednesday, April 17 2024
Cricket
ಮಂಗಳೂರು

ತಿರುಪತಿ ಸಮೀಪದ ಜಲಪಾತದಲ್ಲಿ ಮುಳುಗಿ ಹೊನ್ನೆಕಟ್ಟೆ ವಿದ್ಯಾರ್ಥಿ ಸಾವು

ಕಾವೇರಿ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಕುಶಾಲನಗರ ಬಳಿಯ ಗುಡ್ಡೆಹೊಸೂರಿನ ಬಾಳುಗೋಡಿನಲ್ಲಿ ನಡೆದಿದೆ.
Photo Credit : IANS

ಸುರತ್ಕಲ್‌: ತಿರುಪತಿ ಸಮೀಪದ ಜಲಪಾತವೊಂದರಲ್ಲಿ ಮುಳುಗಿ ಮಂಗಳೂರು ಕುಳಾಯಿ ಹೊನ್ನೆಕಟ್ಟೆ ನಿವಾಸಿ ಸುಮಂತ್‌ (23 ) ಮೃತಪಟ್ಟಿದ್ದಾರೆ.

ಸುಮಂತ್‌ ಅವರು ಚೈನೈನ ರಾಜೀವ್‌ ಗಾಂಧಿ ವಿವಿಯಲ್ಲಿ ಎಂಎಸ್ಸಿ ವಿದ್ಯಾಭ್ಯಾಸ ಮಾಡುತ್ತಿದ್ದು ತಂದೆ ಬಳಿ ತಿರುಪತಿಗೆ ಹೋಗುವುದಾಗಿ ಹೇಳಿದ್ದರು. ತಿರುಪತಿಯಿಂದ 60 ಕಿಲೋ ಮೀಟರ್‌ ದೂರದ ತಲಕೋನ ಜಲಪಾತಕ್ಕೆ ಹೋಗಿ ಸಹಪಾಠಿಗಳ ಜತೆ ಸ್ನಾನ ಮಾಡುತ್ತಿದ್ದರು. ಈ ವೇಳೆ ಕೆಳಭಾಗಕ್ಕೆ ಧುಮುಕಿದ್ದು, ನೀರು ಹಾದು ಹೋಗುವ ಗುಹೆಗೆ ಕಾಲು ಸಿಲುಕಿದೆ. ಇದನ್ನು ನೋಡಿದ ಸ್ನೇಹಿತ ಆತನನ್ನು ಮೇಲಕ್ಕೇತ್ತಿದರೂ ಜೀವ ಉಳಿಸಲು ಸಾಧ್ಯವಾಗಿಲ್ಲ. ಭಾನುವಾರ ಮೃತದೇಹವನ್ನು ಮನೆಗೆ ತರಲಾಗಿದೆ.

ಸುಮಂತ್‌ ತಂದೆ ಪಯ್ಯನ್ನೂರು ಕೆನರಾ ಬ್ಯಾಂಕ್‌ ಮ್ಯಾನೇಜರ್‌ ಆಗಿದ್ದು, ತಾಯಿ ಉಮಾಕ್ಷಿ ಕೆಂಜಾರು ಸರ್ಕಾರಿ ಶಾಲೆ ಮುಖ್ಯಶಿಕ್ಷಕಿಯಾಗಿದ್ದಾರೆ. ಸುಮಂತ್‌ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, ಫೋಟೋಗ್ರಫಿ, ಪ್ರವಾಸ ಅವರ ಹವ್ಯಾಸವಾಗಿತ್ತು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು