ಮ್ಮೆಕೆರೆ ಮೈದಾನ ದಲ್ಲಿ ರೌಡಿಶೀಟರ್ ರಾಹುಲ್ ಎಂಬಾತನನ್ನು ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ. ರಾಹುಲ್ ಅಲಿಯಾಸ್ ಕಕ್ಕೆ ರಾಹುಲ್ (26) ಕೊಲೆಯಾದ ರೌಡಿಶೀಟರ್.
ನಗರದ ಹೊಯಿಗೆ ಬಝಾರ್ ನಿವಾಸಿಯಾಗಿದ್ದ ರಾಹುಲ್ನನ್ನು, ಮಾರಕಾಸ್ತ್ರದಿಂದ ಹತ್ಯೆ ನಡೆಸಿ ಅಪರಿಚಿತರ ಗುಂಪು ಪರಾರಿಯಾಗಿದೆ. ವೈಯಕ್ತಿಕ ದ್ವೇಷದ ಹಿನ್ನೆಲೆ, ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದೆ.
ವೆನ್ಲಾಕ್ ಆಸ್ಪತ್ರೆಯ ಶವಗಾರಕ್ಕೆ ಮೃತದೇಹ ರವಾನೆಯಾಗಿದ್ದು, ಆಸ್ಪತ್ರೆಗೆ ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.