ಬೆಳ್ತಂಗಡಿ: ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಬೆಳ್ತಂಗಡಿ ತಾಲೂಕು ಶೇ.80.52 ಫಲಿತಾಂಶ ದಾಖಲಿಸುವ ಮೂಲಕ ಜಿಲ್ಲೆಗೆ ತೃತೀಯ ಸ್ಥಾನ ಪಡೆದಿದೆ.
ಈ ಬಾರಿ 4091 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾವಣಿ ಮಾಡಿದ್ದು ಒಟ್ಟು ತಾಲೂಕಿನ 72 ಪ್ರೌಢಶಾಲೆಗಳ ಪೈಕಿ 2 ಮೊರಾರ್ಜಿ ದೇಸಾಯಿ, 3 ಸರಕಾರಿ ಹಾಗೂ 9 ಅನುದಾನ ರಹಿತ ಶಾಲೆಗಳು ಸೇರಿ 14 ಪ್ರೌಢಶಾಲೆಗಳು ಶೇ.100 ಫಲಿತಾಂಶ ದಾಖಲಿಸಿದೆ. ಮಚ್ಚಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ರೋಷನ್ ಮತ್ತು ಲಾಯಿಲ ಸೈಂಟ್ ಮೇರಿಸ್ ಶಾಲೆಯ ಮಧುಶ್ರೀ 625 ಕ್ಕೆ 625 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ.
ಕಳೆದ ವರ್ಷ ತಲೂಕು ಶೇ.81 ಶೇ. ದಾಖಲಿಸಿತ್ತು. ಪ್ರಸಕ್ತ ವರ್ಷ ಮೂಡುಬಿದ್ರೆ ತಾಲೂಕು ಶೇ. 80.60 ಫಲಿತಾಂಶ ದಾಖಲಿಸಿದ್ದು, ಬೆಳ್ತಂಗಡಿ ತಾಲೂಕು ಶೇ.0.8 ಫಲಿತಾಂಶ ಹಿನ್ನಡೆಯಿಂದ ತೃತೀಯ ಸ್ಥಾನ ಪಡೆದಿದೆ. ತಾಲೂಕಿನ ಪೆರ್ಲ ಬೈಪಾಡಿ, ಶಾಲೆತಡ್ಕ, ಬಳೆಂಜ ಸರಕಾರಿ ಶಾಲೆ ಹಾಗೂ ಮಚ್ಚಿನ ಹಾಗೂ ಹೊಸಂಗಡಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಶೇ. 100 ಫಲಿತಾಂಶ ದಾಖಲಿಸಿದೆ.