ಮಂಗಳೂರು : ನಾಪತ್ತೆಯಾಗಿದ್ದ ಹದಿನಾರು ವರ್ಷದ ಹುಡುಗನ ಶವ ಹೊಯಿಗೆಬಜಾರ್ ನ ಬಳಿಯ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ. ಹುಡುಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆಯೇ ಅಥವಾ ಸ್ನಾನಕ್ಕೆ ಇಳಿದ ಸಾವು ಕಂಡಿದ್ದಾನೆ ಎಂಬ ಬಗ್ಗೆ ಸಂಶಯ ವ್ಯಕ್ತವಾಗಿದೆ.
ಮಹಾಕಾಳಿ ಪಡ್ಪುವಿನಲ್ಲಿ ವಾಸವಿರುವ ಆಶಾ ಮತ್ತು ಚೆನ್ನಪ್ಪ ದಂಪತಿಯ ಪುತ್ರ ದೃಶಂತ್ ಮೃತ ಹುಡುಗ ಪಾಂಡೇಶ್ವರದ ರೊಸಾರಿಯೋ ಸ್ಕೂಲ್ ನಲ್ಲಿ ಒಂಭತ್ತನೇ ತರಗತಿ ಕಲಿಯುತ್ತಿದ್ದ. ದೃಶಂತ್ ಭಾನುವಾರ ಶಾಲೆಗೆ ರಜೆ ಇದ್ದುದರಿಂದ ಮನೆ ಬಳಿಯ ಮೈದಾನದಲ್ಲಿ ಆಟವಾಡಲು ಹೋಗಿದ್ದ ಗೆಳೆಯರ ಜೊತೆ ಕ್ರಿಕೆಟ್ ಆಟ ಆಡುತ್ತಿದ್ದ ಹುಡುಗ ಆನಂತರ ಮನೆಗೆ ಬಂದಿರಲಿಲ್ಲ .
ಈ ಬಗ್ಗೆ ಜೊತೆಗಿದ್ದ ಗೆಳೆಯರಲ್ಲಿ ಹೆತ್ತವರು ವಿಚಾರಿಸಿದ್ದು ತಮಗೇನು ಗೊತ್ತಿಲ್ಲ ಎಂದಿದ್ದರು ಇಂದು ಬೆಳಿಗ್ಗೆ ತಾಯಿ ಆಶಾ ಪಾಂಡೇಶ್ವರ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದರು. ಸಂಜೆ ವೇಳೆ ಅದೇ ಹುಡುಗನ ಶವ ಹೊಯ್ಗೆ ಬಜಾರ್ ನ ಬಳಿ ನದಿಯ ತೀರದಲ್ಲಿ ಪತ್ತೆಯಾಗಿದೆ.
ಆಡಲು ಹೋಗಿದ್ದ ಹುಡುಗ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಕಡಿಮೆ ಅಲ್ಲದೆ ಪ್ಯಾಂಟ್ ಹಾಕಿಕೊಂಡು ಹೋಗಿದ್ದವನು ಚಡ್ಡಿಯಲ್ಲಿ ಪತ್ತೆಯಾಗಿದ್ದಾನೆ. ಹೀಗಾಗಿ ಸ್ಥಾನಕ್ಕಿಳಿದು ಮೃತಪಟ್ಟಿದ್ದಾನೆಯೇ ಬೇರೆ ಏನಾದ್ರೂ ಕೈವಾಡ ಇದೆಯೇ ಎನ್ನುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ ಪಾಂಡೇಶ್ವರ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.