News Karnataka Kannada
Thursday, May 02 2024
ಮಂಗಳೂರು

ಬೆಳ್ತಂಗಡಿ: ಕಳಿಯ ಗ್ರಾಮದ ಬದಿನಡೆ ಮತ್ತು ಮಂಜಲಡ್ಕ ದೈವಗಳ ಸಾನಿಧ್ಯದಲ್ಲಿ ಧಾರ್ಮಿಕ ಸಭೆ

Belthangady Badinade Temple
Photo Credit :

ಬೆಳ್ತಂಗಡಿ: ದೇಶದಲ್ಲಿ ತುಳು ಭಾಷೆಗೆ ಅಧಿಕೃತ ಸ್ಥಾನಮಾನ ಸಿಗುವಂತಾಗಲು ನನ್ನಿಂದಾಗುವ ಎಲ್ಲಾ ಪ್ರಯ್ನಗಳನ್ನು ಮಾಡುತ್ತಿದ್ದೇನೆ. ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ.ಕತ್ತಲ್ ಸಾರ್ ಸ್ಪಷ್ಟಪಡಿಸಿದ್ದಾರೆ.

ಕಳಿಯ ಗ್ರಾಮದ ಬದಿನಡೆ ಮತ್ತು ಮಂಜಲಡ್ಕ ದೈವಗಳ ಸಾನಿಧ್ಯದಲ್ಲಿ ನಡೆಯಲಿರುವ ದೈವಗಳ ಪ್ರತಿಷ್ಠಾ ಮಹೋತ್ಸವ ಕಲಶಾಭಿಷೇಕ ಮತ್ತು ನರ್ತನ ಸೇವೆ ಕಾರ್ಯಕ್ರಮದ ಪ್ರಯುಕ್ತ ಡಿ.೨೨ರಂದು ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.

ಭೂತಾರಾಧನೆಯೆಂಬುದು ಬ್ರಿಟಿಶರು ಹುಟ್ಟುಹಾಕಿದ ಪದ. ಸತ್ಯಾರಾಧನೆಯೇ ಸರಿಯಾದ ಶಬ್ದ. ಬದುಕಿನ ಮೂಲಸತ್ವ ಸಂಧಿ ಪಾಡ್ದನಗಳಲ್ಲಿ ಅಡಗಿದೆ. ಅವ್ಯಕ್ತವಾದ ಶಕ್ತಿಯನ್ನು ವ್ಯಕ್ತಗೊಳಿಸಿ ಸಾಮಾಜಿಕ ನ್ಯಾಯ ದೊರಕಿಸುವ ವ್ಯವಸ್ಥೆ ದೈವಾರಾಧನೆಯಲ್ಲಿದೆ. ಇಂದು ಆರಾಧನೆಯ ಕ್ರಮಗಳನ್ನು ಅನುಕರಣೆ ಮಾಡುತ್ತಿದ್ದೇವೆ. ಅದರ ತಿರುಳನ್ನು ಅರಿತಿಲ್ಲ. ತೌಳವವರ ಭಾವನಾತ್ಮಕ ಬೆಸುಗೆಗೆ ಹಾಗೂ ಸಾನಿಧ್ಯ ವೃದ್ಧಿಗೆ ದೈವಸ್ಥಾನಗಳು ಅಗತ್ಯ ಎಂದ ಅವರು ಇಂದು ಆಚರಣೆಗಳು ಆಕರ್ಷಣೆಗೆ ಸೀಮಿತವಾಗಿ ಪ್ರಚಾರದ ಅಲೆಯಲ್ಲಿ ವಿಚಾರದ ಮೂಲ ಅರ್ಥವನ್ನು ಮರೆಯುತ್ತಿರುವುದಕ್ಕೆ ವಿಷಾದಿಸಿದರು.

ದೈವಾರಾಧನೆ ನಂಬಿಕೆಯ ತಳಹದಿ ಮೇಲೆ ನಿಂತಿರುವ ಅನುಕರಣೆಗಳಾಗಿದೆ. ಇಂದು ಮತಾಂತರ ಹೆಚ್ಚಾಗಲು ಕಾರಣ ನಮ್ಮ ಸಂಸ್ಕಾರ ಆಚರಣೆಗಳ ಕುರಿತು ನಾವು ಅಂತರ ಕಾಯ್ದುಕೊಂಡಿದ್ದರಿಂದ ಮತಾಂತರವಾಗಲು ಕಾರಣವಾಗಿದೆ. ನಮ್ಮ ಆಚರಣೆ ಮತ್ತು ಅನುಕರಣೆಗಳಲ್ಲಿ ನಿಯಮ ನಿಷ್ಠೆ ಪಾಲಿಸಿಕೊಂಡು ದುಶ್ಚಟಗಳಿಗೆ ಮಹತ್ವ ನೀಡದೆ ಸಾತ್ವಿಕ ನೆಲೆಗಟ್ಟಿನಲ್ಲಿ ಪರಂಪರೆ ಉಳಿಸುವ ಜತೆಗೆ ತುಳು ಭಾಷೆ ೮ನೇ ಪರಿಚ್ಛೇದ ಸೇರಬೇಕೆಂಬ ಬೇಡಿಕೆಯೊಂದಿಗೆ ತುಳುನಾಡನ್ನು ಕಟ್ಟೋಣ ಎಂದು ಆಶಿಸಿದರು.

ಮಂಗಳೂರು ವಿವಿ ಉಪಕುಲಪತಿ ಡಾ| ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಮಾತನಾಡಿ, ತುಳುಪರಂಪರೆಯೇ ಜನಪರ ಸೇವೆಯ ಪ್ರತೀಕವಾಗಿದೆ. ನಾನು ನನ್ನಿಂದಲೇ ಎಂಬುದು ಶೂನ್ಯ ಎಂಬುದನ್ನು ಸೃಷ್ಟಿ ನಮಗೆ ಅನೇಕಬಾರಿ ಮನವರಿಕೆ ಮಾಡಿಕೊಟ್ಟಿದೆ. ದೈವ ದೇವರ ಆರಾಧನೆ ಮೀರಿ ನಾವು ಇಂದು ಉಳಿದಿಲ್ಲ. ಕಲ್ಲು ಶಿಲೆಯಾಗಲು ಶಿಲ್ಪಿ ಮತ್ತು ಉಳಿಯ ಪೆಟ್ಟು ಅವಶ್ಯವೋ ಅದೇ ರೀತಿ ನಮ್ಮ ಸೃಷ್ಟಿಯ ಸೌಂದರ್ಯ ಮರು ಸ್ಥಾಪಿಸಲು ಶಿಲೆಯಾಗದೆ ಶಿಲ್ಪಿಯಾಗೋಣ ಎಂದು ಕರೆ ನೀಡಿದರು.

ಕ್ಯಾ.ಗಣೇಶ್ ಕಾರ್ಣಿಕ್ ಮಾತನಾಡಿ, ನಮ್ಮ ನಂಬಿಕೆ ಎಲ್ಲವೂ ವೈಜ್ಞಾನಿಕ ನೆಲೆಗಟ್ಟಿನಲ್ಲಿ ನಿಂತಿರುವಂತಹದು. ಪಾಪು ಪುಣ್ಯದ ಕಲ್ಪನೆಯನ್ನ, ಜೀವನ ದೃಷ್ಟಿಕೋನವನ್ನು ಸರಳ ರೀತಿಯಲ್ಲಿ ತಿಳಿಸಲು ಧರ್ಮ ಎಂದು ಕರೆದು ಅದನ್ನು ಅನುಸರಿಸುವಂತೆ ಮಾಡಿದರು. ಪೂರ್ವಜರು ನಂಬಿದ ಶಕ್ತಿಯು ಇಂದು ದೈವಾರಾಧನೆಯ ಮೂಲಕ ಪ್ರತಿಷ್ಠಾಪಿಸಿದೆ. ಇಂದು ಭಾರತವೇ ಜೀರ್ಣೋದ್ಧಾರಗೊಳ್ಳುತ್ತಿರುವ ಕಾಲಘಟ್ಟದಲ್ಲಿ ಜಗತ್ತು ಹಿಂದಿರುಗಿ ನೋಡುತ್ತಿದೆ. ಹಾಗಾಗಿ ನಾವುಗಳ ಶ್ರದ್ಧಾಕೇಂದ್ರದೊಂದಿಗೆ ನಿರಂತರ ಸಂಪರ್ಕ ಬೆಳೆಸಿ ರಾಷ್ಟ್ರಕಟ್ಟುವ ಕಾಯಕದಲ್ಲಿ ನಿರತರಾಗೋಣ ಎಂದರು.

ಧರ್ಮಸ್ಥಳ ಎಸ್.ಕೆ.ಡಿ.ಆರ್.ಡಿ.ಪಿ. ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್.ಎಚ್. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.
ವಾಮದಪದವು ಸ.ಪ್ರ.ದ.ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ| ರವಿ ಮಂಡ್ಯ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ರಾಘವೇಂದ್ರ ಭಾಂಗಿಣ್ಣಾಯ, ಪಿಂಗಾರ್ ಸತೀಶ್ ಕುಮಾರ್, ರಾ. ಸ್ವ.ಸಂಘದ ಸಂಘ ಚಾಲಕರುಗಳಾದ ಗಣೇಶ್, ರಘುನಂದನ್, ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಭುವನೇಶ್ ಗೇರುಕಟ್ಟೆ, ಕಲಷಾಭಿಷೇಕ ಸಮಿತಿ ಕಾರ್ಯಾಧ್ಯಕ್ಷ ವಸಂತ ಮಜಲು, ಶಾರದಾ ಆರ್.ರೈ., ಮೆಸ್ಕಾಂ ಎಇಇ ಶಿವಶಂಕರ್, ಪ್ರಮುಖರಾದ ಯಾದವ ಗೌಡ, ಜನಾರ್ದನ ಪೂಜಾರಿ, ಡಾ| ಅನಂತ್ ಭಟ್, ದಿವಾಕರ ಆಚಾರ್ಯ, ಪ್ರಭಾಕರ ಶೆಟ್ಟಿ ಉಪ್ಪಡ್ಕ ಮತ್ತಿತರರು ಉಪಸ್ಥಿತರಿದ್ದರು.

ಕಲಶಾಭಿಷೇಕ ಸಮಿತಿ ಅಧ್ಯಕ್ಷ ಕೇಶವ ಬಂಗೇರ ಸ್ವಾಗತಿಸಿ, ಪ್ರಾಸ್ತಾವಿಸಿದರು. ಸಹ ಸಂಚಾಲಕ ದಿನೇಶ್ ಗೌಡ ವಂದಿಸಿ, ಜೀರ್ಣೋದ್ಧಾರ ಸಮಿತಿ ಸಂಘಟನಾ ಕಾರ್ಯದರ್ಶಿ ರಾಜೇಶ್ ಪೆಂರ್ಬುಡ ನಿರೂಪಿಸಿದರು. ಶಾಲಿನಿ ಗೇರುಕಟ್ಟೆ ಪ್ರಾರ್ಥಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು