News Karnataka Kannada
Friday, May 17 2024
ಮಂಗಳೂರು

ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನವು ಸುಮಾರು 7 ಕೋ.ರೂ.ವೆಚ್ಚದಲ್ಲಿ ಪುನರ್ ನಿರ್ಮಾಣ

Photo Credit :

ಬಂಟ್ವಾಳ: ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನವು ಸುಮಾರು 7 ಕೋ.ರೂ.ವೆಚ್ಚದಲ್ಲಿ ಪುನರ್ ನಿರ್ಮಾಣಗೊಳ್ಳಲಿದ್ದು, ಪ್ರಸ್ತುತ ಗರ್ಭಗುಡಿ, ತೀರ್ಥಮಂಟಪ, ಸುತ್ತು ಪೌಳಿಯ ಕೆಲಸ ಪ್ರಗತಿಯಲ್ಲಿದೆ. ಜೀರ್ಣೋದ್ಧಾರ ಭಾಗವಾಗಿ ಡಿ. 26ರಂದು ಕೊಡಿಮರವನ್ನು ಅದ್ದೂರಿಯಾಗಿ ಕ್ಷೇತ್ರಕ್ಕೆ ತರಲಾಗುವುದು ಎಂದು ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ ಹೇಳಿದರು.

ಅವರು ಕ್ಷೇತ್ರದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ‌ ಮಾತನಾಡಿ, ನೇತ್ರಾವತಿ ನದಿ ತಟದಲ್ಲಿ ಯುಗಾಂತರದಲ್ಲಿ  ಶ್ರೀ ಶರಭಂಗ ಮುನಿಗಳ ದಿವ್ಯ ಹಸ್ತದಿಂದ ಪ್ರತಿಷ್ಠಾಪಿಸಿಕೊಂಡು ಅರ್ಚಿತವಾದ ಕಾಲಾಂತರದಲ್ಲಿ ವಿಜಯ ನಗರ ಸಾಮ್ರಾಜ್ಯದ ಸಾಮಂತ  ಕೆಳದಿಯ ಅರಸರಿಂದ ನಿರ್ದೇಶಸಲ್ಪಟ್ಟು ಹಲ್ಸನಾಡು ವಂಶಜರಿಂದ ನಿರ್ಮಾಣಗೊಂಡಿದ್ದ  ಶ್ರೀ ಶರಭೇಶ್ವರ ದೇವರ ದೇವಾಲಯದ ಜೀರ್ಣೋದ್ಧಾರ ಪ್ರಕ್ರಿಯೆಯು ಭಕ್ತ  ಬಾಂಧವರ ಅಭೀಷ್ಟದಂತೆ ಇದೀಗ ಉಡುಪಿ ಶ್ರೀ ಪೇಜಾವರ ಸ್ವಾಮೀಜಿ ಹಾಗೂ ಧರ್ಮಸ್ಥಳದ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ಜರಗುತ್ತಿದೆ.

ಅಷ್ಟಮಂಗಲ ಪ್ರಶ್ನಾಚಿಂತನೆಯಲ್ಲಿ ಕಂಡುಬಂದಂತೆ ಈ ಪುರಾತನ ಪವಿತ್ರ ದೇವಸ್ಥಾನ ಮತ್ತು ಪರಿವಾರ ದೇವರು ಮತ್ತು ದೈವಗಳನ್ನು ಆಗಮಶಾಸ್ತ್ರಕ್ಕೆ ಸರಿಯಾಗಿ ದೇವಸ್ಥಾನ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ.

ವಾಸ್ತುಶಿಲ್ಪಿ ಮಹೇಶ್ ಭಟ್ ಮುನಿಯಂಗಳ ಅವರ ಮಾರ್ಗದರ್ಶನದಂತೆ ಮೂಲ ಶ್ರೀ ಶರಭೇಶ್ವರ ದೇವರ ಗರ್ಭಗುಡಿ, ತೀರ್ಥಮಂಟಪ, ಸುತ್ತು ಪೌಳಿ, ಧ್ವಜಸ್ತಂಭ, ಹನುಮಂತ ದೇವರ ಗುಡಿ, ಗಣಪತಿ ದೇವರ ಗುಡಿ, ಮಹಿಷಮರ್ಧಿನಿ ದೇವರ ಗುಡಿ, ನಾಗದೇವರ ಬನ ಸೇರಿದಂತೆ ಕ್ಷೇತ್ರದ ನೀಲನಕಾಶೆ ಸಿದ್ಧಪಡಿಸಿ ಸುಮಾರು 7 ಕೋ.ರೂ. ಅಂದಾಜು ಪಟ್ಟಿ ಸಿದ್ಧಪಡಿಸಲಾಗಿದೆ.

ಜೀರ್ಣೋದ್ಧಾರ ಕಾರ್ಯಗಳು ಸುಗಮವಾಗಿ ಸಾಗುವ ನಿಟ್ಟಿನಲ್ಲಿ ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಎಂ.ಮೋಹನ್ ಆಳ್ವ ಅವರ ಸಂಚಾಲಕತ್ವದಲ್ಲಿ ಜೀರ್ಣೋದ್ಧಾರ ಸಮಿತಿ ರಚಿಸಲಾಗಿದ್ದು, ಅಧ್ಯಕ್ಷರಾಗಿ ಎಂ.ಎಸ್.ಶೆಟ್ಟಿ ಸರಪಾಡಿ, ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ ಅವರ ಮುಂದಾಳತ್ವದಲ್ಲಿ ಜನಪ್ರತಿನಿಧಿಗಳು, ಊರ-ಪರವೂರ ಭಕ್ತರ ಕೂಡುವಿಕೆಯಲ್ಲಿ ಸಮಿತಿಯು ಕೆಲಸ ಮಾಡುತ್ತಿದೆ. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಅನುದಾನದಲ್ಲಿ 2 ಕೋ.ರೂ.ಗಳ ಸುಸಜ್ಜಿತ ರಥಬೀದಿ, ಸಂಪರ್ಕ ರಸ್ತೆ ನಿರ್ಮಾಣಗೊಂಡಿದೆ. ಮುಂದಿನ ದಿನಗಳಲ್ಲಿ ಸರ್ಕಾರದಿಂದ ಸಿಗುವ ಅನುದಾನಗಳನ್ನು ದೊರಕಿಸಿ ಕೊಡುವ ಭರವಸೆಯನ್ನು ನೀಡಿದ್ದಾರೆ ಎಂದರು.

ಪ್ರಸ್ತುತ ಕ್ಷೇತ್ರದ ಗರ್ಭಗುಡಿ, ತೀರ್ಥಮಂಟಪ, ಸುತ್ತುಪೌಳಿಯ ಕೆಲಸಗಳು ಪ್ರಗತಿಯಲ್ಲಿದ್ದು, ಸುಳ್ಯದ ಗೂನಡ್ಕದಿಂದ ಧ್ವಜಸ್ತಂಭ(ಕೊಡಿಮರ) ತರುವುದಾಗಿ ತೀರ್ಮಾನಿಸಿ ಸಿದ್ಧತಾ ಕಾರ್ಯಗಳು ನಡೆದಿದೆ. ಡಿ. ೨೫ರಂದು ಬೆಳಗ್ಗೆ ಗೂನಡ್ಕದಿಂದ ಹೊರಟು ಬಿ.ಸಿ.ರೋಡಿನ ಗೋಲ್ಡನ್‌ಪಾರ್ಕ್ ಮೈದಾನದಲ್ಲಿ ನಿಲ್ಲಿಸಲಾಗುತ್ತದೆ. ಡಿ. 26ರ ಮಧ್ಯಾಹ್ನ 2ಗಂಟೆಗೆ ಅಲ್ಲಿಂದ ಭವ್ಯ ಮೆರವಣಿಗೆಯಲ್ಲಿ ಕೊಡಿಮರವನ್ನು ಸರಪಾಡಿಗೆ ಸಾಗಿಸಲಾಗುತ್ತದೆ.

ಈ ಸಂದರ್ಭದಲ್ಲಿ ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್‌ಕುಮಾರ್ ಕಟೀಲು, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಮಾಜಿ ಸಚಿವರಾದ ಬಿ.ರಮಾನಾಥ ರೈ, ಬಿ.ನಾಗರಾಜ ಶೆಟ್ಟಿ ಸಹಿತ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ಶಂಕರನಾರಾಯಣ ಹೊಳ್ಳ, ಆರ್ಥಿಕ ಸಮಿತಿ ಸಂಚಾಲಕ ಸರಪಾಡಿ ಅಶೋಕ ಶೆಟ್ಟಿ, ಬಾಚಕೆರೆ ಕ್ಷೇತ್ರದ ಧರ್ಮದರ್ಶಿ ದೇಜಪ್ಪ ಬಾಚಕೆರೆ, ಆಡಳಿತ ಸಮಿತಿ ಅಧ್ಯಕ್ಷ ವಿಠಲ್ ಎಂ.ಆರುಮುಡಿ, ಕಾರ್ಯದರ್ಶಿ ಉಮೇಶ್ ಆಳ್ವ ಕೊಟ್ಟುಂಜ, ಸದಸ್ಯರಾದ ಗಿರಿಧರ್ ಮಠದಬೆಟ್ಟು, ದಯಾನಂದ ಪೂಜಾರಿ ಕೋಡಿ, ದಯಾವತಿ ಮಠದಬೆಟ್ಟು, ಪ್ರಮುಖರಾದ ಕುಸುಮಾಕರ ಶೆಟ್ಟಿ ಕುರ್ಯಾಳ, ರಾಧಾಕೃಷ್ಣ ರೈ ಕೊಟ್ಟುಂಜ, ಪುರುಷೋತ್ತಮ ಪೂಜಾರಿ ಮಜಲು, ಆನಂದ ಶೆಟ್ಟಿ ಆರುಮುಡಿ, ಚಂದ್ರಶೇಖರ ಶೆಟ್ಟಿ ಅರಸೊಳಿಗೆ, ಸುಂದರ ಶೆಟ್ಟಿ ಹೊಳ್ಳರಗುತ್ತು, ಗಿರೀಶ್ ನಾಯ್ಕ್ ನೀರಪಲ್ಕೆ ಮೊದಲಾದವರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು