ಮಂಗಳೂರು: ಬೆಂಗಳೂರಿನಿಂದ ಬರುತ್ತಿದ್ದ ಖಾಸಗಿ ಬಸ್ಸಿನಲ್ಲಿ ಯುವತಿಗೆ ಕಿರುಕುಳ ನೀಡಿದ ಘಟನೆ ನಡೆದಿದ್ದು ಆರೋಪಿಯನ್ನು ಕಂಕನಾಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮೊಹಮ್ಮದ್ ಮುಸ್ತಫಾ ಬಿಸಿರೋಡ್ ಎಂದು ಗುರುತಿಸಲಾಗಿದೆ.
ಜೂನ್ 6ರಂದು ರಾತ್ರಿ ಶೆರ್ಲಿನ್ ಮಾರ್ತಾ ಎಂಬ ಯುವತಿ ಬೆಂಗಳೂರಿನಿಂದ ಮಂಗಳೂರಿಗೆ ಖಾಸಗಿ ಬಸ್ ನಲ್ಲಿ ಬಂದಿದ್ದು ಬೆಳಿಗ್ಗೆ 5ಗಂಟೆಗೆ ಬಸ್ ತಲುಪದಿದ್ದಾಗ ಮಹಮ್ಮದ್ ಮುಸ್ತಫಾ ಕಿರುಕುಳ ನೀಡಿದ್ದಾನೆ ಈ ಬಗ್ಗೆ ಯುವತಿ ಸಹ ಪ್ರಯಾಣಿಕರಲ್ಲಿ ತಿಳಿಸಿದ್ದು ಕೂಡಲೇ ಇತರ ಪ್ರಯಾಣಿಕರು ಪ್ರಶ್ನೆ ಮಾಡಿದ್ದಾರೆ.
ಆದರೆ ಇತರ ಪ್ರಯಾಣಿಕರಲ್ಲಿ ನೀವೇನು ಮಾಡುತ್ತೀರಿ ಎಂದು ಜೋರು ದನಿಯಲ್ಲಿ ಮಾತಾಡಿ ಒರಟಾಗಿ ವರ್ತಿಸಿದ್ದಾನೆ ವಾಗ್ವಾದ ನಡೆಯುತ್ತಿರುವಾಗಲೇ ಬಸ್ ಮಂಗಳೂರಿನ ಪಂಪ್ ವೆಲ್ ತಲುಪಿದ್ದು ಅಲ್ಲಿ ಬಸ್ ನಿಲ್ಲುತ್ತಿದ್ದಂತೆ ಆರೋಪಿಯು ಇಳಿದು ತಪ್ಪಿಸಿಕೊಂಡಿದ್ದ.
ಯುವತಿ ಯಾವುದೋ ಕಂಪೆನಿಯಲ್ಲಿ ಇಂಟರ್ವ್ಯೂ ಇದ್ದ ಕಾರಣ ಮಂಗಳೂರಿಗೆ ಬಂದಿದ್ದಳು ಇಂಟರ್ವ್ಯೂ ಮುಗಿಸಿದ ಬಳಿಕ ಸಂಜೆ ಠಾಣೆಗೆ ದೂರು ನೀಡಿದ್ದಾರೆ ಆರೋಪಿ ಪೊಲೀಸರು ಬಂಧಿಸಿ ಐಪಿಸಿ 354ರ ಪ್ರಕಾರ ಪ್ರಕರಣ ದಾಖಲಿಸಿದ್ದಾರೆ.