News Karnataka Kannada
Saturday, May 04 2024
ಮಂಗಳೂರು

ಬಂಟ್ವಾಳ ಬಿ ಸಿ . ರೋಡ್  ನ  ಇಮ್ರಾನ್  ಶಾಫಿ ( 45 ) ಬಂಧನ

New Project (6)
Photo Credit :

ಕಾಸರಗೋಡು : ನಗರದ ಸುಲ್ತಾನ್ ಗೋಲ್ಡ್ ಜ್ಯೂವೆಲ್ಲರಿಯಿಂದ  ಸುಮಾರು 2. 88 ಕೋಟಿ  ರೂ . ಗಳ ವಜ್ರಾಭರಣ ದೋಚಿದ ಘಟನೆಗೆ ಸಂಬಂಧಪಟ್ಟಂತೆ  ಪ್ರಮುಖ ಆರೋಪಿಯಾಗಿರುವ ಜ್ಯುವೆಲ್ಲರಿ ಉದ್ಯೋಗಿಯ ಸಹೋದರ ನನ್ನು  ಕಾಸರಗೋಡು ಡಿ ವೈ ಎಸ್ಪಿ  ಪಿ . ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸ್  ತಂಡ ಬಂಧಿಸಿದೆ.

ಬಂಟ್ವಾಳ ಬಿ ಸಿ . ರೋಡ್  ನ  ಇಮ್ರಾನ್  ಶಾಫಿ ( 45 ) ಬಂಧಿತ ಆರೋಪಿ . ಈತ  ಪ್ರಮುಖ ಆರೋಪಿ ಮುಹಮ್ಮದ್ ಫಾರೂಕ್ ನ ಸಹೋದರ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ಈತನನ್ನು  ಕಾಸರಗೋಡು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸುಲ್ತಾನ್ ಜುವೆಲ್ಲರಿ ಯ  ನಿರ್ದೇಶಕ ಕುಂಬಳೆಯ ಅಬ್ದುಲ್ ರಫೀಕ್ ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿತ್ತು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುವ ಸಂದರ್ಭದಲ್ಲಿ  ಫಾರೂಕ್ ವಜ್ರಾಭರಣವನ್ನು  ಸಹೋದರ ಇಮ್ರಾನ್ ಶಾಫಿಗೆ ಒಪ್ಪಿಸಿ ಪರಾರಿಯಾಗಿದ್ದು , ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಇಮ್ರಾನ್ ಗಾಗಿ ಶೋಧ ನೆಡೆಸಿದ್ದು , ಬೆಂಗಳೂರಿನಲ್ಲಿರುವ ಬಗ್ಗೆ  ಲಭಿಸಿದೆ ಮಾಹಿತಿಯಂತೆ  ಬಂಧಿಸುವಲ್ಲಿ  ಯಶಸ್ವಿಯಾಗಿದ್ದಾರೆ.

ಇಬ್ಬರು ಸೇರಿ  ಐದು ಬ್ಯಾಂಕ್ ಗಳಲ್ಲಿ  ವಜ್ರಾಭರಣವನ್ನು  ಅಡವಿಟ್ಟು ಸುಮಾರು 50 ಲಕ್ಷ ರೂ . ಪಡೆದಿರುವುದಾಗಿ  ಪೊಲೀಸರು ತಿಳಿಸಿದ್ದಾರೆ. ಈ ವಜ್ರಾಭರಣವನ್ನು ಪೊಲೀಸರು ಶೀಘ್ರ  ವಶಪಡಿಸಿಕೊಳ್ಳಲು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

ಈ ನಡುವೆ  ಪ್ರಮುಖ ಆರೋಪಿ ಮುಹಮ್ಮದ್ ಫಾರೂಕ್ ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ . ಹೊರ ರಾಜ್ಯಗಳಿಗೆ ತನಿಖೆಯನ್ನು ವಿಸ್ತರಿಸಲಾಗಿದೆ. ಆರೋಪಿ ವಿದೇಶಕ್ಕೆ ಪಲಾಯನ ಗೈದಿರುವ  ಸಾಧ್ಯತೆ ಬಗ್ಗೆಯೂ  ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಇಮ್ರಾನ್ ಶಾಫಿಯ ಬ್ಯಾಂಕ್ ಖಾತೆಗಳನ್ನು ಈ ಹಿಂದೆ ಪೊಲೀಸರು ಮುಟ್ಟುಗೋಲು ಹಾಕಿದ್ದರು . ಸುಲ್ತಾನ್ ಗೋಲ್ಡ್ ಜ್ಯುವೆಲ್ಲರಿಯಲ್ಲಿ ವಜ್ರಾಭರಣ  ವಿಭಾಗದ  ಮುಖ್ಯಸ್ಥರಾಗಿದ್ದ  ಫಾರೂಕ್  ಕಳೆದ  ಲಾಕ್ ಡೌನ್ ಸಂದರ್ಭದಲ್ಲಿ  ಸುಮಾರು 2. 88 ಕೋಟಿ  ರೂ . ಮೌಲ್ಯದ ವಜ್ರಾಭರಣವನ್ನು ದೋಚಿದ್ದರು. ತಿಂಗಳ ಹಿಂದೆ ಆಡಿಟ್ ಸಂದರ್ಭದಲ್ಲಿ  ಇದು ಬೆಳಕಿಗೆ ಬಂದಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು