ಬೆಳ್ತಂಗಡಿ: ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಮತ್ತಿತರರ ಅನೂಕೂಲತೆಗಾಗಿ ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಸಂಜೆ ಕ್ಲಿನಿಕ್ ತೆರೆಯಲಾಗಿದ್ದು ಮಾ. 25ರಂದು ಶುಭಾರಂಭಗೊಂಡಿತು. ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ಎಂ.ಡಿ ಫಿಸಿಷಿಯನ್ ಡಾ| ಸಾತ್ವಿಕ್ ಜೈನ್ ಸಂಜೆ ಕ್ಲಿನಿಕ್ ಉದ್ಘಾಟಿಸಿದರು.
ನಿರ್ದೇಶಕರಾದ ಎಂ. ಜನಾರ್ದನ್ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಕೆಲವೊಂದು ಜನರಿಗೆ ಹಗಲು ಹೊತ್ತಿನಲ್ಲಿ ತಮ್ಮ ಕೆಲಸದ ಒತ್ತಡದಿಂದ ವೈದ್ಯರನ್ನು ಭೇಟಿ ಆಗಲು ಸಾಧ್ಯವಾಗುವುದಿಲ್ಲ. ಈ ಉದ್ದೇಶದಿಂದ ನಮ್ಮ ಆಸ್ಪತ್ರೆಯಲ್ಲಿ ಸಂಜೆ ಕ್ಲಿನಿಕ್ ಪ್ರಾರಂಭಿಸಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 5ರಿಂದ 7ರವರೆಗೆ ತಜ್ಞ ವೈದ್ಯರಿಂದ ವೈದ್ಯಕೀಯ ಸೇವೆ ನೀಡಲಾಗುತ್ತದೆ.
ಸೋಮವಾರ ಗುರುವಾರ ಹಾಗೂ ಶುಕ್ರವಾರ ಮೂಳೆ ಶಸ್ತ್ರಚಿಕಿತ್ಸಾ ತಜ್ಞರು, ಮಂಗಳವಾರ ಹಾಗೂ ಬುಧವಾರ ಎಂ.ಡಿ ಫಿಸಿಷಿಯನ್ ಗುರುವಾರ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು ಶುಕ್ರವಾರ ಕಿವಿ-ಮೂಗು-ಗಂಟಲು ತಜ್ಞರು ಸಂಜೆ ಕ್ಲಿನಿಕ್ನಲ್ಲಿ ಲಭ್ಯವಿರುತ್ತಾರೆ. ವೈದ್ಯರ ಲಭ್ಯತೆಯನ್ನು ಅವಲಂಬಿಸಿ ಸಂಜೆ ಕ್ಲಿನಿಕ್ನಲ್ಲಿ ತಮಗೆ ಬೇಕಾದ ದಿನಗಳಲ್ಲಿ, ತಮಗೆ ಬೇಕಾದ ತಜ್ಞ ವೈದ್ಯರ ನೇಮಕಾತಿಯನ್ನು ದೂರವಾಣಿ ಮೂಲಕ ನಿಗದಿಪಡಿಸಿಕೊಳ್ಳಬಹುದು. ಉಳಿದಂತೆ ಈ ಆಸ್ಪತ್ರೆಯಲ್ಲಿ ದಿನದ 24 ಗಂಟೆಯೂ ವೈದ್ಯಕೀಯ ಸೇವೆ ಲಭ್ಯವಿದೆ ಎಂದರು.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ರಂಜನ್ ಕುಮಾರ್, ಮೂಳೆ ಶಸ್ತ್ರಚಿಕಿತ್ಸಾ ತಜ್ಞ ಡಾ| ದೇವೇಂದ್ರ ಕುಮಾರ್, ಡಾ| ಹರೀಶ್ ಬಿ.ಎಸ್, ಎಂ.ಡಿ ಫಿಸಿಷಿಯನ್ ಡಾ| ಯಶಸ್ವಿನಿ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ| ಆಶಿಕಾ, ಡಾ| ಉಷಾ, ನರ್ಸಿಂಗ್ ಅಧೀಕ್ಷಕಿ ಶೆರ್ಲಿ, ಮಾನವ ಸಂಪನ್ಮೂಲ ಅಧಿಕಾರಿ ಸೌಮ್ಯ, ಪರ್ಚೇಸ್ ಮೆನೇಜರ್ ಅಜಯ್ ಕುಮಾರ್, ಮಾರ್ಕೆಟಿಂಗ್ ಎಕ್ಷಕ್ಯೂಟಿವ್ ಸುಮಂತ್ ರೈ, ಪಿ.ಆರ್.ಓ ಸಂಗೀತ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಮಮತಾ, ಅಕ್ಷತಾ, ಜಯಂತಿ ಇವರು ಪ್ರಾರ್ಥಸಿದರು. ವಿಮಾ ವಿಭಾಗದ ಜಗನ್ನಾಥ. ಎಂ ಕಾರ್ಯಕ್ರಮ ನಿರೂಪಿಸಿದರು.