ಮಂಗಳೂರು : ಉಗ್ರ ಸಂಘಟನೆ ಜೊತೆಗಿನ ಸಂಪರ್ಕದ ಆರೋಪದಲ್ಲಿ ಬಂಧಿತರಾಗಿರುವ ಉಳ್ಳಾಲ ಮಾಜಿ ಶಾಸಕ ದಿ. ಇದಿನಬ್ಬ ಮೊಮ್ಮಗನ ಸಹಿತ ಮೂರು ಮಂದಿಯ ಪಾಸ್ಪೋರ್ಟ್ ಅನ್ನು ಎನ್ಐಎ ವಶಪಡಿಸಿಕೊಂಡಿದೆ .
ಕಳೆದ ವಾರ ಇದಿನಬ್ಬರ ಪುತ್ರ ಬಿ.ಎಂ.ಭಾಷಾ ಅವರ ಮನೆಗೆ ಎನ್ಐಎ ತಂಡ ದಾಳಿ ನಡೆಸಿ, ಭಾಷಾರ ಕಿರಿಯ ಪುತ್ರ, ಇದಿನಬ್ಬರ ಮೊಮ್ಮಗ ಅಬ್ದುಲ್ ರೆಹ್ಮಾನ್ನನ್ನು ಬಂಧಿಸಿತ್ತು.
ಈ ಸಂದರ್ಭ ಭಾಷಾರ ಇನ್ನೋರ್ವ ಪುತ್ರ ಅನಾಸ್ ಹಾಗೂ ಆತನ ಪತ್ನಿ ದೀಪ್ತಿ ಮಾರ್ಲ ಯಾನೆ ಮರಿಯಂರನ್ನೂ ವಿಚಾರಣೆ ನಡೆಸಿ ಪಾಸ್ಪೋರ್ಟ್ಗಳನ್ನು ವಶಕ್ಕೆ ಪಡೆದುಕೊಂಡಿದೆ. ಇದೇ ವೇಳೆ ಮರಿಯಂ ಪಾಸ್ಪೋರ್ಟ್ನಲ್ಲಿ ಮೂಲ ಹೆಸರು ದೀಪ್ತಿ ಮಾರ್ಲ ಎಂದೇ ಇತ್ತು ಎನ್ನಲಾಗಿದೆ.
ಅನಾಸ್ ಜೊತೆ ವಿವಾಹಕ್ಕೂ ಮುನ್ನ ಮತಾಂತರಗೊಂಡಿದ್ದ ಆಕೆ ಮರಿಯಂ ಎಂದು ಹೆಸರು ಬದಲಾಯಿಸಿದ್ದರು. ಆದರೆ ಪಾಸ್ಪೋರ್ಟ್ನಲ್ಲಿ ಈಗಲೂ ಆಕೆಯ ಮೂಲ ಹೆಸರು ಇರುವುದನ್ನು ತನಿಖಾ ತಂಡ ಕಂಡುಕೊಂಡಿದೆ.