News Karnataka Kannada
Saturday, April 27 2024
ಕಾಸರಗೋಡು

ಅಕ್ರಮವಾಗಿ ಟ್ರಾಲಿಂಗ್ ನಡೆಸಿದ್ದ ಮೂರು ಬೋಟ್ ಗಳು ವಶಕ್ಕೆ: ಮಾಲಕರಿಗೆ 7.5 ಲಕ್ಷ ರೂ. ದಂಡ

ಮೀನುಗಾರಿಕಾ ಇಲಾಖೆ ಹಾಗೂ ತ್ರಕ್ಕರಿಪುರ, ಶಿರಿಯ, ಬೇಕಲ ಕರಾವಳಿ ಪೊಲೀಸರು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಮೂರು ಬೋಟ್ ಗಳನ್ನು ವಶಪಡಿಸಿಕೊಂಡಿದ್ದು, ವಶಪಡಿಸಿಕೊಂಡಿರುವ ಮೂರು ಬೋಟ್ ಗಳ ಕರ್ನಾಟಕದ ಮಾಲಕರಿಂದ 7.5 ಲಕ್ಷ ರೂ. ದಂಡ ವಸೂಲು ಮಾಡಲಾಗಿದೆ.
Photo Credit : By Author

ಕಾಸರಗೋಡು: ಮೀನುಗಾರಿಕಾ ಇಲಾಖೆ ಹಾಗೂ ತ್ರಕ್ಕರಿಪುರ, ಶಿರಿಯ, ಬೇಕಲ ಕರಾವಳಿ ಪೊಲೀಸರು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಮೂರು ಬೋಟ್ ಗಳನ್ನು ವಶಪಡಿಸಿಕೊಂಡಿದ್ದು, ವಶಪಡಿಸಿಕೊಂಡಿರುವ ಮೂರು ಬೋಟ್ ಗಳ ಕರ್ನಾಟಕದ ಮಾಲಕರಿಂದ 7.5 ಲಕ್ಷ ರೂ. ದಂಡ ವಸೂಲು ಮಾಡಲಾಗಿದೆ.

ರಾತ್ರಿ ಸಮಯದಲ್ಲಿ ಅಕ್ರಮವಾಗಿ ಈ ಬೋಟ್ ಗಳು ಟ್ರಾಲಿಂಗ್ ನಡೆಸಿದ್ದವು. ಕೇರಳ ಸಮುದ್ರ ಮೀನುಗಾರಿಕಾ ನಿಯಂತ್ರಣ ಕಾಯ್ದೆಯಂತೆ ಕ್ರಮ ತೆಗೆದುಕೊಳ್ಳಲಾಗಿದೆ. ಬೋಟ್ ಮಾಲಕರಾದ ಗಣೇಶ್ ಪ್ರಸನ್ನ, ಶ್ರೀ ರಂಗ ಹಾಗೂ ಏಷ್ಯನ್ ಬ್ಲೂ ಬೋಟ್ ಗಳನ್ನು ಕುಂಬಳೆ ತೀರದಿಂದ 12 ನಾಟಿಕಲ್ ಮೈಲ್ ದೂರದಿಂದ ಬೋಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮುಂದಿನ ದಿನಗಳಲ್ಲೂ ಕಾರ್ಯಾಚರಣೆ ಮುಂದುವರಿಸಲಾಗಿವುದು ಎಂದು ಮೀನುಗಾರಿಕಾ ಇಲಾಖಾ ನಿರ್ದೇಶಕ ಕೆ. ಎ. ಲಬೀಬ್ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು