ಕಾಸರಗೋಡು: ಕಾರಿನಲ್ಲಿ ಸಾಗಾಟ ಮಾಡಲಾಗುತ್ತಿದ್ದ 5.7 ಗ್ರಾಂ ಎಂಡಿಎಂಎ ಮಾದಕ ವಸ್ತು ಸಹಿತ ಇಬ್ಬರನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಧರ್ಮತ್ತ ಡ್ಕ ದ ಆಸಿಬ್ (30)ಮತ್ತು ಕುನಿಯದ ಶಮೀರ್ (32) ಬಂಧಿತರು. ಗುರುವಾರ ರಾತ್ರಿ ಮಂಗಳೂರು ಕಡೆಯಿಂದ ಉಪ್ಪಳದತ್ತ ಬರುತ್ತಿದ್ದ ಕಾರನ್ನು ತಡೆದು ತಪಾಸಣೆ ನಡೆ ಸಲು ಮುಂದಾದಾಗ ಮಾದಕ ವಸ್ತುವನ್ನು ಒಳಗೊಂಡ ಪೊಟ್ಟಣವನ್ನು ರಸ್ತೆಗೆ ಎಸೆದು ಇಬ್ಬರು ಕಾರು ಸಹಿತ ಪರಾರಿಯಾಗಲೆತ್ನಿಸಿದ್ದು, ಬೆನ್ನಟ್ಟಿದ ಪೊಲೀಸರು ಕಾರು ತಡೆದು ನಿಲ್ಲಿಸಿ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಯಿತು.