News Karnataka Kannada
Wednesday, May 01 2024
ಕಾಸರಗೋಡು

ಕಾಸರಗೋಡು: ವಿದ್ಯಾರ್ಥಿನಿಯ ಆತ್ಮಹತ್ಯೆ ಪ್ರಕರಣ, ವಿದ್ಯಾರ್ಥಿಯೋರ್ವನ ಬಂಧನ

student-arrested-in-kasargod-students-suicide-case
Photo Credit : By Author

ಕಾಸರಗೋಡು: ಕಾಲೇಜು ವಿದ್ಯಾರ್ಥಿನಿಯೋರ್ವಳ ಆತ್ಮಹತ್ಯೆಗೆ ಸಂಬಂಧಪಟ್ಟಂತೆ ವಿದ್ಯಾರ್ಥಿಯೋರ್ವನನ್ನು ಹೊಸದುರ್ಗ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕಾಞ೦ಗಾಡ್ ಅಲಾಮಿಪಲ್ಲಿಯ ಅಬ್ದುಲ್ ಶುಹೈಬ್ ( 21) ಬಂಧಿತ ವಿದ್ಯಾರ್ಥಿ. ಕಾಞ೦ಗಾಡ್ ನ ನಂದನಾ ವಿನೋದ್ (20) ಎಂಬಾಕೆಯ ಆತ್ಮಹತ್ಯೆಗೆ ಸಂಬಂಧಪಟ್ಟಂತೆ ಆರೋಪಿಯನ್ನು ಬಂಧಿಸಲಾಗಿದೆ . ನಂದನಾ ಪಡನ್ನಕಾಡಿನ ಕಾಲೇಜೊಂದರ ಪದವಿ ವಿದ್ಯಾರ್ಥಿನಿಯಾಗಿದ್ದಳು. ನಂದಾನ ಜೊತೆ ಪ್ರೀತಿಯ ನಾಟಕವಾಡಿ ನಂದನಾ ಕಳುಹಿಸಿಕೊಟ್ಟ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿ ಬೆದರಿಕೆಯೊಡ್ಡಿದ್ದರಿಂದ ಬೇಸತ್ತು ನಂದನಾ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಸೋಮವಾರ ಸಂಜೆ ಮನೆಯ ಮೇಲಂತಸ್ತಿನ ಕೊಠಡಿಯಲ್ಲಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ನಂದನಾ ಪತ್ತೆಯಾಗಿದ್ದಳು. ಆತ್ಮಹತ್ಯೆ ಗೈಯ್ಯುವ ಮುನ್ನಶುಹೈಬ್ ನಂದನಾಳಿಗೆ ವಿಡಿಯೋ ಕಾಲ್ ಮಾಡಿರುವುದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ವಿಡಿಯೋ ಕಾಲ್ ನಡುವೆ ನಡುವೆಯೇ ನಂದನಾ ನೇಣಿಗೆ ಶರಣಾಗಿರುವುದಾಗಿ ಸಂಶಯಿಸಲಾಗಿದೆ.

ವಿಡಿಯೋ ಕಾಲ್ ನಡುವೆ ನಂದನಾ ಪ್ರತಿಕ್ರಿಯೆ ಲಭಿಸದಿದ್ದುರಿಂದ ಶುಹೈಬ್ ನು ನಂದನಾಳ ಸ್ನೇಹಿತೆಗೆ ಕರೆ ಮಾಡಿದ್ದು,ಈಕೆ ನೀಡಿದ ಮಾಹಿತಿಯಂತೆ ನಂದನಾಳ ಮನೆಯವರು ಕೊಠಡಿಗೆ ತೆರಳಿದಾಗ ನೇಣುಬಿಗಿದಿರುವುದು ಕಂಡು ಬಂದಿದೆ. ಕೂಡಲೇ ಮನೆಯವರು ಆಸ್ಪತ್ರೆಗೆ ತಲಪಿಸಿದರೂ ಆಗಲೇ ಮೃತಪಟ್ಟಿದ್ದಳು. ಬಳಿಕ ಇಬ್ಬರ ಮೊಬೈಲ್ ಫೋನ್ ನ್ನು ತಪಾಸಣೆ ನಡೆಸಿದಾಗ ಹಲವು ಮಾಹಿತಿಗಳು ಪೊಲೀಸರಿಗೆ ಲಭಿಸಿದೆ. ಇದರಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ.

 

ಸಹಾಯವಾಣಿಗೆ ಕರೆ ಮಾಡಿ:

ನೀವು ಆತ್ಮಹತ್ಯೆಯ ಯೋಚನೆ ಮಾಡುತ್ತಿದ್ದರೆ ಅಥವಾ ಅಂತವರ ಕುರಿತು ನಿಮಗೆ ತಿಳಿದಿದ್ದರೆ, ಸಹಾಯ ಅಗತ್ಯವಿರುವ ಯಾರಾದರೂ, ಕರೆ ಮಾಡಿ ಸುಶೇಗ್ ಚಾರಿಟೇಬಲ್ ಟ್ರಸ್ಟ್ 0824-2983444 ಗೆ ಏಕೆಂದರೆ ಪ್ರತಿಯೊಬ್ಬರ ಜೀವವು ಅಮೂಲ್ಯವಾದ್ದದ್ದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು