ಬೆಳ್ತಂಗಡಿ: ಕಲ್ಮಂಜ ಗ್ರಾಮದ ವ್ಯಕ್ತಿಯೋರ್ವರಿಗೆ ಕೊರೋನಾ ಪಾಸಿಟಿವ್ ಬಂದಿದೆ.
ಮಹಾರಾಷ್ಟ್ರದಿಂದ ಆಗಮಿಸಿ 9 ದಿನಗಳ ಹಿಂದೆ ಕಲ್ಮಂಜದಲ್ಲಿ ಸರಕಾರಿ ಕ್ವಾರಂಟೈನ್ ಗೆ ಒಳಗಾಗಿದ್ದ 33ರ ಹರೆಯದ ವ್ಯಕ್ತಿಯ ಗಂಟಲು ದ್ರವ ಮಾದರಿ ಪರೀಕ್ಷೆಯಲ್ಲಿ ಬುಧವಾರ ಕೋವಿಡ್19 ದೃಢಗೊಂಡಿದೆ.
ಕಲ್ಮಂಜ ಗ್ರಾಮದ ಕನ್ಯಾಡಿ ಬಳಿಯ ನಿವಾಸಿ ಆಗಿರುವ ವ್ಯಕ್ತಿಯನ್ನು, ಮುಂಡಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ, ಕಲ್ಮಂಜ ಪಂಚಾಯತ್ ಪಂ.ಅಭಿವೃದ್ದಿ ಅಧಿಕಾರಿ ಹಾಗೂ ಸಿಬ್ಬಂದಿಗಳು ಜಿಲ್ಲಾಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದಾರೆಂದು ವರದಿಯಾಗಿದೆ.