News Karnataka Kannada
Sunday, April 28 2024
ಕರಾವಳಿ

ರಾಷ್ಟ್ರೀಯ ಭಾವೈಕ್ಯತೆಗೆ ಸಾಕ್ಷಿಯಾದ ಆಳ್ವಾಸ್ ಗಣರಾಜ್ಯೋತ್ಸವ

Photo Credit :

ರಾಷ್ಟ್ರೀಯ ಭಾವೈಕ್ಯತೆಗೆ ಸಾಕ್ಷಿಯಾದ ಆಳ್ವಾಸ್ ಗಣರಾಜ್ಯೋತ್ಸವ

ಮೂಡುಬಿದಿರೆ: ‘ಭಾರತ ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬ ಪ್ರಜೆಯು ಭದ್ರ ಭುನಾದಿಯಾಗುತ್ತಾರೆ. ಅದರಲ್ಲೂ ಮುಖ್ಯವಾಗಿ ಈ ದೇಶದಲ್ಲಿರುವಷ್ಟು ಯುವಕರು ಬೇರೆಲ್ಲೂ ಇಲ್ಲ. ನಿಮ್ಮ ಅದ್ಭುತ ಸಾಧನೆಗಳ ಮೂಲಕ ದೇಶವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಬೇಕು’ ಎಂದು ಬ್ರೀಗೆಡಿಯರ್ ಬಿ.ವಿ ಪೂರ್ವಿಮಠ್ ತಿಳಿಸಿದರು. 

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಶ್ರೀಮತಿ ವನಜಾಕ್ಷಿ ಶ್ರೀಪತಿ ಭಟ್ ವೇದಿಕೆಯಲ್ಲಿ ನಡೆದ 70ನೇ ಗಣರಾಜ್ಯೋತ್ಸವದ ಮುಖ್ಯ ಅಥಿತಿಗಳಾಗಿ ಅವರು ಮಾತನಾಡಿದರು.
ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಭಾರತೀಯನು ಕ್ರಿಯಾಶೀಲತೆಯಿಂದ ಕೆಲಸ ನಿರ್ವಹಿಸಿದರೆ ದೇಶ ಏಳಿಗೆಯ ಪಥ ಸುಲಭವಾಗುತ್ತದೆ. ಪೋಲಿಸ್, ಲಾಯರ್, ಮಿಲಿಟರಿ, ಡಾಕ್ಟರ್, ಯಾವುದೇ ಹುದ್ದೆ ಇರಲಿ, ಅದನ್ನು ಗೌರವಿಸಿ ಹೆಮ್ಮೆಯಿಂದ ದುಡಿಯಬೇಕು. ಆಗ ಮಾತ್ರ ದುಡಿಮೆಗೆ ಸಾರ್ಥಕತೆ ಸಿಗಲು ಸಾಧ್ಯ. ಇದರ ಜೊತೆಗೆ ವಿದ್ಯಾರ್ಥಿಗಳು ಕೂಡ ತಮಗೆ ಸಿಕ್ಕಿರುವ ಎಲ್ಲಾ ಅವಕಾಶಗಳನ್ನು ಕ್ರಿಯಾಶೀಲತೆಯಿಂದ ಬಳಸಿಕೊಂಡು ದೇಶದ ಅಭಿವೃದ್ಧಿ ಪಣತೊಡಬೇಕು ಎಂದರು.

ಆಕರ್ಷಕ ಪಥಸಂಚಲನ: ಈ ಬಾರಿಯ ಆಳ್ವಾಸ್ ಗಣರಾಜ್ಯೋತ್ಸವದ ಮುಖ್ಯ ವಿಶೇಷತೆ ಎಂದರೆ ಎನ್ಸಿದಸಿ ಕೆಡೆಟ್ಗಗಳ ಪಥ ಸಂಚಲನ. ಕರ್ನಾಟಕದ ವಿವಿಧ ಕಾಲೇಜುಗಳ ಆರ್ಮಿ, ನೇವಿ ಹಾಗೂ ಏರ್ಫೋಿರ್ಸ್ ವಿಂಗ್ಗಳಳಿಗೆ ಸೇರಿದ ಸುಮಾರು 2,200 ಕೆಡೆಟ್ಗಜಳು ಶಿಸ್ತಿನ ಹೆಜ್ಜೆ ಹಾಕಿದರು. ಜೊತೆಗೆ 400 ರೋವರ್ಸ್-ರೇಂಜರ್ಸ್ ಹಾಗೂ ಸ್ಕೌಟ್ಸ್-ಗೈಡ್ಸ್ ವಿದ್ಯಾರ್ಥಿಗಳು ಪಥಸಂಚಲನದಲ್ಲಿದ್ದರು. ಸುಮಾರು 20 ನಿಮಿಷಗಳಕಾಲ ನಡೆದ ಈ ಮಾರ್ಚ್ಪಾಗಸ್ಟ್‍ ಗಣರಾಜ್ಯೋತ್ಸವಕ್ಕೆ ಶಿಸ್ತಿನ ಚೌಕಟ್ಟು ನೀಡಿತ್ತು. ಈ ಪಥಸಂಚಲನಕ್ಕೆ ಹೊನ್ನಾವರದ ಮದರ್ ತೆರೆಸಾ ಬ್ಯಾಂಡ್ ಸಾಥ್ ನೀಡಿತ್ತು. ಆಳ್ವಾಸ್ ಗಣರಾಜೋತ್ಸವದಲ್ಲಿ ಭಾರತೀಯ ಸೇನೆಯ ಸುಮಾರು 300 ಎಕ್ಸ್ ಸರ್ವೀಸ್ಮೆತನ್ಕಣ ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದರು. ಎನ್ಸಿುಸಿ ಬೆಟಾಲಿಯನ್ಗ್ಳ ಕ್ಯಾಪ್ಟನ್ಗ ಳು ಕೂಡ ಕಾ ಕಾರ್ಯಕ್ರಮದಲ್ಲಿದ್ದರು.

ಸಾವಿರ ಕಂಠಗಳಲ್ಲಿ ಮೊಳಗಿದ ಏಕತಾಗೀತೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಎಲ್ಲ ವಿದ್ಯಾರ್ಥಿಗಳು, ಬೊಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿಶೇಷ ಆಹ್ವಾನಿತರು, ಮೂಡುಬಿದಿರೆಯ ಸಾರ್ವಜನಿಕರು ಸೇರಿದಂತೆ 33000 ಜನರು ಆಳ್ವಾಸ್ ಗಣರಾಜ್ಯೋತ್ಸವ ಸಂಭ್ರಮಕ್ಕೆ ಸಾಕ್ಷಿಯಾದರು.ಮುಖ್ಯ ಅತಿಥಿಗಳ ಭಾಷಣದ ನಂತರ ಹಾಡಿದ ‘ಕೋಟಿಕಂಠೋ ಸೆ’ಏಕತಾ ಹಾಡಿಗೆ ಸಾವಿರ ಸಂಖ್ಯೆಯಲ್ಲಿ ಸೇರಿದ್ದ ವಿದ್ಯಾರ್ಥಿ ಸಮೂಹ ದನಿಗೂಡಿಸಿದ್ದು ರೋಮಾಂಚನ ನೀಡುವಂತಿತ್ತು. ಏಕತಾಗೀತೆಯ ಸಮಯದಲ್ಲಿಯೇ ವಿದ್ಯಾರ್ಥಿಗಳೆಲ್ಲರೂ ತ್ರಿವರ್ಣಧ್ವಜವನ್ನು ಹಾಡಿನ ತಾಳಕ್ಕೆ ಲಯಬದ್ಧವಾಗಿ ಬೀಸಿದ್ದು ವಿಶೇಷವಾಗಿತ್ತು.

ತ್ರಿವರ್ಣದ ಮೆರುಗು: ನೆರೆದಿದ್ದ ಸಮೂಹವೆಲ್ಲ ಹಿಡಿದಿದ್ದ ಭಾರತದ ಧ್ವಜ, ತ್ರಿವರ್ಣ ಬಣ್ಣದ ಟೀ-ಶರ್ಟ್ ಧರಿಸಿದ್ದ 2405 ವಿದ್ಯಾರ್ಥಿಗಳು ಮಾಡಿದ್ದ `ಇಂಡಿಯಾ’ ಫಾರ್ಮೇಶನ್, ತ್ರಿವರ್ಣದ ಕೊಡೆಗಳು, ತ್ರಿವರ್ಣದ ಬೆಲೂನ್ಗ್ಳಿದ್ದು ಇಡೀ ವನಜಾಕ್ಷಿ ಶ್ರೀಪತಿ ಭಟ್ ವೇದಿಕೆಗೆ ಕೇಸರಿ, ಬಿಳಿ, ಹಸಿರಿನ ಮೆರುಗು ನೀಡಿತ್ತು.

ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಟ್ರಸ್ಟಿಗಳಾದ ವಿವೇಕ್ ಆಳ್ವ ಮತ್ತು ವಿನಯ್ ಆಳ್ವ, ಮೀನಾಕ್ಷಿ ಜಯಕರ್ ಆಳ್ವ, ಹನಾ ವಿನಯ್ ಆಳ್ವ, ಕರ್ನಲ್ ಅನಿಲ್ ನೌಟಿಯಲ್, ಕರ್ನಲ್ ಮನೋಜ್, ಕರ್ನಲ್ ಗ್ರೇಸಿಯನ್ ಸಿಕ್ವೇರ, ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಡಾ.ರಾಜೇಶ್, ಫ್ಲೈಯಿಂಗ್ ಆಫೀಸರ್ ಪರ್ವೆಜ್, ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉಪನ್ಯಾಸಕಿ ದೀಪಾ ರತ್ನಾಕರ ನಿರೂಪಿಸಿದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
193
Deevith S K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು