Bengaluru 24°C
Ad

ಅಯೋಧ್ಯೆ ಬಳಿ ಭೀಕರ ರಸ್ತೆ ಅಪಘಾತ: ಕಲಬುರಗಿ ಮೂಲದ ಮೂವರು ಸಾವು

ಲಾರಿ ಮತ್ತು ಟಿಟಿ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕಲಬುರಗಿ ಮೂಲದ ಮೂವರು ಸಾವನ್ನಪ್ಪಿದ ಘಟನೆ ಅಯೋಧ್ಯೆ ಬಳಿ ನಡೆದಿದೆ. 

ಕಲಬುರಗಿ:  ಲಾರಿ ಮತ್ತು ಟಿಟಿ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕಲಬುರಗಿ ಮೂಲದ ಮೂವರು ಸಾವನ್ನಪ್ಪಿದ ಘಟನೆ ಅಯೋಧ್ಯೆ ಬಳಿ ನಡೆದಿದೆ.

ಶಿವರಾಜ್, ಕಾಶಿನಾಥ್, ತಂಗೆಮ್ಮ ಮೃತ ದುರ್ದೈವಿಗಳು.

ಕಲಬುರಗಿಯ 22 ಜನ ಕುಟುಂಬ ಸಮೇತರಾಗಿ ಯಾತ್ರೆಗೆ ತೆರಳಿದ್ದರು. ಕಾಶಿ ವಿಶ್ವನಾಥನ ದರ್ಶನ ಮುಗಿಸಿ ಟಿಟಿಯಲ್ಲಿ ಅಯೋಧ್ಯೆಗೆ ಹೊರಟಿದ್ದರು. ಇದೇ ವೇಳೆ ಅಯೋಧ್ಯೆ ಬಳಿ ತಡರಾತ್ರಿ ಲಾರಿ ಹಾಗೂ ಟಿಟಿ ನಡುವೆ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇನ್ನುಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಗೊಂಡವರನ್ನು ಅಯೋಧ್ಯೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Ad
Ad
Nk Channel Final 21 09 2023
Ad