Bengaluru 23°C
Ad

ಸಾರ್ವಜನಿಕ ಸೇವೆಯಲ್ಲಿ ನಿಸ್ವಾರ್ಥ ಜೀವನಕ್ಕೆ ಮಾದರಿಯಾದ- ರಾಣಿ ಬುಕ್ಕೆಗಾರ

ಆಧುನಿಕ ಜಗತ್ತಿನಲ್ಲಿ ದುಬಾರಿ ಬದುಕು ಬಡವರಿಗೆ ಮುಳುವಾಗಿರುವ ಕಾಲದಲ್ಲಿ ಶ್ರೀಮಂತಿಕೆಯ ಸ್ವರೂಪಿಗಳು ತಮ್ಮ ಹುಟ್ಟು ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸಿಕೊಳ್ಳುತ್ತಾರೆ‌.ಇನ್ನೂ ಕೆಲವೊಬ್ಬರು ಮುಂದೆ ಹೋಗಿ ಸಾವಿರಾರು ರೂಪಾಯಿ ಖರ್ಚು ಮಾಡಿ ಮದ್ಯಪಾನಗಳ ಅಮಲಿನಲ್ಲಿ ದುಂದುವೆಚ್ಚದಲ್ಲಿ ಮಾಡುತ್ತಾರೆ.

ಅಫಜಲಪುರ: ಆಧುನಿಕ ಜಗತ್ತಿನಲ್ಲಿ ದುಬಾರಿ ಬದುಕು ಬಡವರಿಗೆ ಮುಳುವಾಗಿರುವ ಕಾಲದಲ್ಲಿ ಶ್ರೀಮಂತಿಕೆಯ ಸ್ವರೂಪಿಗಳು ತಮ್ಮ ಹುಟ್ಟು ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸಿಕೊಳ್ಳುತ್ತಾರೆ‌. ಇನ್ನೂ ಕೆಲವೊಬ್ಬರು ಮುಂದೆ ಹೋಗಿ ಸಾವಿರಾರು ರೂಪಾಯಿ ಖರ್ಚು ಮಾಡಿ ಮದ್ಯಪಾನಗಳ ಅಮಲಿನಲ್ಲಿ ದುಂದುವೆಚ್ಚದಲ್ಲಿ ಮಾಡುತ್ತಾರೆ.

ಆದರೆ ಅಫಜಲಪುರ ಪಟ್ಟಣದ ಆಶಾಕಿರಣ ಸೇವಾ ಸಂಸ್ಥೆ ಸದಸ್ಯ ರಾಣಿ ಬಕ್ಕೆಗಾರ ಅವರು ತಮ್ಮ ಹುಟ್ಟು ಹಬ್ಬದ ನಿಮಿತ್ಯ ರಾಧಾಕೃಷ್ಣ ಕರಿಯರ ಅಕಾಡೆಮಿಯಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕಗಳು ನೀಡುವ ಮುಖಾಂತರ ಸಮಾಜದ ಅಂಕುಡೊಂಕುಗಳನ್ನು ಮತ್ತು ಒಡಕುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ವಚನ ಮಹಾಧೀಶರ ಪುಸ್ತಕಗಳನ್ನು ಮಕ್ಕಳಿಗೆ ಉಡುಗೊರೆಯಾಗಿ ನೀಡುವ ಮುಖಾಂತರ ಹುಟ್ಟುಹಬ್ಬ ಆಚರಿಸಿಕೊಂಡರು. ನಂತರ ಮಹಿಳಾ ಸಾಧಕಿಯರಿಂದ ಆಧುನಿಕ ಭಾರತದ ಜನರ ಸ್ಥಿತಿಗತಿಗಳ ಬಗ್ಗೆ ಚರ್ಚೆ ನಡೆಯಿತು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಮಾಜ‌ ಸೇವಕಿ ನಾಲ್ಕು ಚಕ್ರ ಖ್ಯಾತಿಯ ಮಾಲಾ ಕಣ್ಣಿ, ವಿದ್ಯಾರ್ಥಿ ಬದುಕು ಬಂಗಾರದ ಬದುಕು.ಆದರೆ ಇಂದಿನ ವಿದ್ಯಾರ್ಥಿಗಳ ಬದುಕು ಬಹಳಷ್ಟು ದುಸ್ಥಿರ ಅನಿಸುತ್ತಿರುವುದು ದುಃಖಕರ ಸಂಗತಿಯಾಗಿದೆ. ಯಾಕೆಂದರೆ ಸಮಾಜದಲ್ಲಿ ಒಳ್ಳೆಯ ಬೆಳವಣಿಗೆಗಿಂತ ತಪ್ಪು ಮಾಹಿತಿಗಳ ಕೆಟ್ಟ ಮಾರ್ಗಗಳಿಗೆ ಈಗಿನ ಜನರು ವಾಲುತ್ತಿದ್ದಾರೆ ಎಂದರು. ಮನುಷ್ಯರು ಹುಟ್ಟಿನಿಂದ ಕೆಟ್ಟವರು ಒಳ್ಳೆಯವರಾಗಿ ಹುಟ್ಟುವುದಿಲ್ಲ. ಆದರೆ ಬೆಳೆಯುತ್ತ ನಮ್ಮ ಒಳ್ಳೆಯ ಕೆಲಸಗಳು ನಮ್ಮ ವ್ಯಕ್ತಿತ್ವವನ್ನು ವೃದ್ದಿಸುತ್ತವೆ ಎಂದರು. ಸಮಾಜಮುಖಿ ಕೆಲಸಗಳಿಗೆ ಯುವ ಪಿಳಿಗೆ ವಾಲಬೇಕು ಎಂದು ಆಶಿಸಿದರು.

ನಂತರ ಮಾತನಾಡಿದ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡ ಸಮಾಜ ಸೇವಕಿ ರಾಣಿ ಬುಕ್ಕೆಗಾರ ನನ್ನ ಜೀವನದಲ್ಲಿ ಅತ್ಯುನ್ನತ ಸಾಧನೆ ಎಂದರೆ ನನ್ನ ಸಮಾಜ ಸೇವೆ ಗುರ್ತಿಸಿ ನನ್ನ ಜೊತೆ ಸ್ನೇಹ ಕಟ್ಟಿಕೊಂಡು ನನ್ನ ಸೇವೆಗೆ ಪ್ರೋತ್ಸಾಹ ನಿಡುತ್ತಿರುವ ನನ್ನ ಸ್ನೇಹಿತರು ಎಂದರು.ನನ್ನ ದಿನನಿತ್ಯದ ಸಮಾಜ ಸೇವೆಯನ್ನು ಇನ್ನೂ ಹೆಚ್ಚಾಗಿ ಮಾಡಲು ನಿಮ್ಮೆಲ್ಲರ ಸಹಕಾರದ ನಿರೀಕ್ಷೆಯಲ್ಲಿದ್ದೆನೆ ಎಂದರು.

ಇದೇ ಸಂದರ್ಭದಲ್ಲಿ 123 ಮಾಂಟೆಸರಿ ಮುಖ್ಯೋಪಾಧ್ಯಾಯಯಾರ ಅರ್ಚನಾ ಪುರೋಹಿತ,ರಾಧಾಕೃಷ್ಣ ಅಕಾಡೆಮಿ ನಿರ್ದೇಶಕ ಗುರುದೇವ ಪೂಜಾರಿ, ಪ್ರಾಧ್ಯಾಪಕ ಯಲ್ಲಾಲಿಂಗ ಎಲ್.ಎಮ್.,ಶಿಕ್ಷಕಿ ಶಿಮಾ, ಸಮಾಜ ಸೇವಕಿ ಅನಿತಾ ಕೊಳ್ಳಿ,ಉಪಸ್ಥಿತರಿದ್ದರು ಸೌಮ್ಯ ಪಾಟ್ನೆ ನಿರೂಪಿಸಿದರು.

Ad
Ad
Nk Channel Final 21 09 2023
Ad