Bengaluru 27°C
Ad

ಮುರಿದು ಬಿದ್ದ ಬಹುಕೋಟಿ ವೆಚ್ಚದ ತ್ಯಾಜ್ಯ ವಿಲೇವಾರಿ ಘಟಕ

Collapse

ಕಲಬುರಗಿ : ಕಲಬುರಗಿ ನಗರದ ಹೊರ ವಲಯ ಉದನೂರ್‌ ಬಳಿ ಕಳೆದ 1 ವರ್ಷದ ಹಿಂದಷ್ಟೆ ನಿರ್ಮಿಸಲಾಗಿದ್ದ ಬಹುಕೋಟಿ ರೂಪಾಯಿ ವೆಚ್ಚದ ತ್ಯಾಜ್ಯ ಸಂಸ್ಕರಣಾ ಘಟಕ ಇತ್ತೀಚೆಗೆ ಸುರಿದ ಮಳೆಗೆ ಕುಸಿದು ಬಿದ್ದಿದೆ. ಇದರಿಂದಾಗಿ ಕೋಟಿಗಟ್ಟಲೇ ಹಣ ವೆಚ್ಚವಾಗಿರುವ ಈ ಕಾಮಗಾರಿಯಲ್ಲಿ ಕಳಪೆತನವಾಗಿರುವ ಬಗ್ಗೆ ಬಲವಾದಂತಹ ಶಂಕೆಗಳು ಹುಟ್ಟಿಕೊಂಡಿವೆ.

ಪಾಲಿಕೆ ಅಡಿಯಲ್ಲಿ 28 ಕೋಟಿ ರು. ವೆಚ್ಚದಲ್ಲಿ ಈ ಘಟಕ ನಿಮ್ರಾಣವಾಗಿತ್ತು. ಆದರೆ, ಬಿರುಗಾಳಿಗೆ ಇಡೀ ಘಟಕವೇ ಕುಸಿದಿರೋದು ಇಡೀ ಕಾಮಗಾರಿಯ ಬಗ್ಗೆಯೇ ಶಂಕೆಗಳನ್ನು ಹುಟ್ಟುಹಾಕಿದೆ.

ಇನ್ನೊಂದು ವಿಶೇಷವೆಂದರೆ ಈ ಘಟಕದಲ್ಲಿ ತ್ಯಾಜ್ಯ ಸಂಸ್ಕರಣೆಯ ಕೆಲಸ ಇನ್ನೂ ಪೂರ್ಣ ಪ್ರಮಾಣದಲ್ಲಿ ಆರಂಭಗೊಂಡಿರಲಿಲ್ಲ. ಆರಂಭಕ್ಕೂ ಮುನ್ನವೇ ಈ ಘಟಕ ಮುರಿದು ಬಿದದ್ದಿದೆ. ಪೂರ್ಣ ಕೆಲಸ ಶುರು ಮಾಡಿ ತ್ಯಾಜ್ಯ ಸಮಸ್ಯೆಗೆ ಪರಿಹಾರ ನೀಡಬೇಕಿದ್ದ ಘಟಕವೇ ಇಂದು ಕುಸಿದಿ ಬಿದ್ದಿರೋದು ಸಮಸ್ಯೆಯಾಗಿದೆ.

ನಗರದಲ್ಲಿ ನಿತ್ಯ 300 ಟನ್‌ಗೂ ಅಧಿಕ ಕಸ ಉತ್ಪತ್ತಿಯಾಗುತ್ತದೆ. ಈ ಪೈಕಿ 250 ಟನ್‌ ಕಸ ಸಂಗ್ರಹಿಸಲಾಗುತ್ತದೆ. ಅದನ್ನೆಲ್ಲ ಉದನೂರ್‌ ಬಳಿಯ ಕಸ ಸಂಗ್ರಹಣೆ ಸ್ಥಳದಲ್ಲಿ ವಿಲೇವಾರಿ ಮಾಡಲಾಗುತ್ತದೆ. ಇಲ್ಲಿಂದ ಕಸವನ್ನು ವಿಲೇವಾರಿ ಮಾಡಲೆಂದೇ ಈ ವಿಶೇಷ ಘಟಕ ಯೋಜನೆ ತಲೆ ಎತ್ತಿತ್ತಾದರೂ ಅದು ತನ್ನ ಉದ್ದೇಶ ಪೂರೈಸುವ ಮೊದಲೇ ಕುಸಿದಿರೋದು ಆತಂಕ ಮೂಡಿಸಿದೆ.ಇದುವರೆಗೂ ಸಂಗ್ರಹಿಸಲಾಗುತ್ತಿದ್ದ 250 ಟನ್‌ ಕಸದಲ್ಲಿ 120 ಟನ್‌ನನಷ್ಟು ಕಸ ಸಂಸ್ಕರಣೆಯಾಗುತ್ತಿತ್ತು.

ಇದೀಗ ಶೆಡ್‌ ಕುಸಿದಿದ್ದರಿಂದ ಈ ಕೆಲಸಕ್ಕೂ ಹಿನ್ನೆಡೆ ಉಂಟಾಗಿದೆ. ಶೆಡ್‌ ಮರು ನಿರ್ಮಾಣದವರೆಗೂ ಕಸ ಸಂಸ್ಕರಣೆಯೇ ನಿಂತು ಹೋಗಲಿದೆ. 4 ಎಕರೆ ಪ್ರದಶದಲ್ಲಿ ಹರಡಿರುವ ತ್ಯಾಜ್ಯ ಸಂಸ್ಕರಣಾ ಟಕದಲ್ಲಿ 180 ಕಾಲಂಗಳಿವೆ. ಕಸದ ಗುಡ್ಡೆಯ ಪಕ್ಕದಲ್ಲೇ ಘಟಕವಿದೆ. ಬಿರುಗಾಳಿ ಜೋರಾಗಿ ಬೀಸಿದಾಗ ಅದು ಗಾಳಿ ಇಲ್ಲಿಂದ ಮುಂದೆ ಸಾಗದತೆ ಕಸದ ರಾಶಿ ತಡೆದಿದೆ. ಆಗ ಹಿಂಬದಿಯಲ್ಲಿ ಉಂಟಾದ ಒತ್ತಡದಿಂದಾಗಿ ಶೆಡ್‌ ಕುಸಿದಿದೆ. ಈ ಶೆಡ್‌ನ 20ಕ್ಕೂ ಹೆಚ್ಚು ಕಂಬಗಳು ಮುರಿದಿವೆ.

ಪಾಲಿಕೆಯ ಅಧಿಕಾರಿ ಮೂಲಗಳ ಪ್ರಕಾರ ಶೆಡ್‌ ನಿರ್ಮಾಣ ಮಾಡಿದ ಗುತ್ತಿಗೆದಾರರು 2 ವರ್ಷ ಇದನ್ನು ನಿರ್ವಹಣೆ ಮಾಡುವ ಜವಾಬ್ದಾರಿ ಹೊಂದಿದ್ದಾರೆ. ಇದೀಗ ಶೆಡ್‌ ಕುಸಿದಿದೆ. ಅವರೇ ದುರಸ್ಥಿ ಮಾಡುತ್ತಾರೆ ಎಂದು ಹೇಳಲಾಗಿದೆ. ಪ್ರಸ್ತುತ ಕಸ ಸಂಸ್ಕರಣೆಯ ತಾತ್ಕಾಲಿಕ ಟೆಂಡರ್‌ ಶ್ರೀ ಸಿಮೆಂಟ್‌ನವರಿಗೆ ನೀಡಲಾಗಿದ್ದು ಲೋಕಸಭೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಕಾಯಂ ಟೆಂಡರ್‌ ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.

Ad
Ad
Nk Channel Final 21 09 2023
Ad