Bengaluru 25°C
Ad

ವಿಜಯದಬ್ಬೆ ದಿಟ್ಟತನದಿಂದ ಕೂಡಿದ ಗಟ್ಟಿಗಿತ್ತಿ ಸ್ತ್ರೀವಾದಿ ಹೋರಾಟಗಾರ್ತಿ

ಸಾಹಿತಿ ವಿಮನೋಭಾವವಿತ್ತು. ನಾಡು ಕಂಡ ಪ್ರಥಮ ಸ್ತ್ರೀವಾದಿ ಮತ್ತು ದಿಟ್ಟತನದಿಂದ ಕೂಡಿದ ಗಟ್ಟಿಗತ್ತಿ ಹೋರಾಟ ಮನೋಭಾವ ಅಳವಡಿಸಿಕೊಂಡ ಸಾಹಿತಿ ವಿಜಯದಬ್ಬೆರವರು ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ ಎಂದು ಬೇಲೂರು ತಾಲ್ಲೂಕು ಜಾನಪದ ಸಾಹಿತ್ಯ ಪರಿಷತ್ತು ಅಧ್ಯಕ್ಷ ವೈ.ಎಸ್.ಸಿದ್ದೇಗೌಡ ಹೇಳಿದರು.

ಹಾಸನ: ಸಾಹಿತಿ ವಿಮನೋಭಾವವಿತ್ತು. ನಾಡು ಕಂಡ ಪ್ರಥಮ ಸ್ತ್ರೀವಾದಿ ಮತ್ತು ದಿಟ್ಟತನದಿಂದ ಕೂಡಿದ ಗಟ್ಟಿಗತ್ತಿ ಹೋರಾಟ ಮನೋಭಾವ ಅಳವಡಿಸಿಕೊಂಡ ಸಾಹಿತಿ ವಿಜಯದಬ್ಬೆರವರು ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ ಎಂದು ಬೇಲೂರು ತಾಲ್ಲೂಕು ಜಾನಪದ ಸಾಹಿತ್ಯ ಪರಿಷತ್ತು ಅಧ್ಯಕ್ಷ ವೈ.ಎಸ್.ಸಿದ್ದೇಗೌಡ ಹೇಳಿದರು.

ಬೇಲೂರು ಪಟ್ಟಣದ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ತಾಲ್ಲೂಕು ಜಾನಪದ ಪರಿಷತ್ತು ವತಿಯಿಂದ ಹಮ್ಮಿಕೊಂಡ ಸಾಹಿತಿ ವಿಜಯ ದಬ್ಬೆ ಅವರ ಒಂದು ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಜಾನಪದ ಪರಿಷತ್ತು ಕಲೆ, ಸಾಹಿತ್ಯ, ನೃತ್ಯ, ಸಂಗೀತ ಹೀಗೆ ಪ್ರಕಾರದಲ್ಲಿ ಪ್ರೋತ್ಸಾಹ ಜೊತೆಗೆ ಅವರಿಗೆ ಸೂಕ್ತ ವೇದಿಕೆ ಕಲ್ಪಿಸುವ ಕೆಲಸ ಮಾಡುತ್ತಾ ಬಂದಿದೆ.

ಬೇಲೂರು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಬ್ಬಾಳು ಹಾಲಪ್ಪ ಮಾತನಾಡಿ, ಮಹಿಳೆಯರಿಗೆ ಸಮಾನತೆ ಅವಕಾಶ ನೀಡಿದ್ದು, ೧೨ ನೇ ಶತಮಾನದಲ್ಲಿ ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಡಾ.ವಿಜಯದಬ್ಬೆ ರವರು ಕೂಡ ಮಹಿಳಾ ಪರ ಹೋರಾಟ ಪ್ರಥಮ ಸ್ತ್ರೀವಾದಿವಾಗಿದ್ದಾರೆ.

ಸಾಹಿತ್ಯದ ವಿಚಾರಗಳು ಇಂದಿನ ಯುವ ಪೀಳಿಗೆಗೆ ತಿಳಿಸುವ ಕೆಲಸ ಜಾನಪದ ಪರಿಷತ್ತು ನಡೆಸಿದ್ದು ನಿಜಕ್ಕೂ ಸಂತೋಷವಾಗಿದೆ. ಬೇಲೂರು ಕಲೆಗಳ ತವರು ಇಂತಹ ಸ್ಥಳದಲ್ಲಿ ಬಹುತೇಕ ಮಾಹನ್ ಪುರುಷರ ಪ್ರತಿಮೆ, ವೃತ್ತ ಮತ್ತು ರಸ್ತೆ ಹೆಸರನ್ನು ನಾಮಕರಣ ಮಾಡಿದ್ದಾರೆ.

ಅಂತೆಯೇ ಬೇಲೂರಿನ ಕೀರ್ತಿಯನ್ನು ನಾಡಿನಲ್ಲಿ ಹೆಸರು ಮಾಡಿದ ಡಾ.ವಿಜಯ ದಬ್ಬೆ ಮತ್ತು ಬೇಲೂರು ಕೃಷ್ಣಮೂರ್ತಿ ಅವರು ಹೆಸರನ್ನು ಯಾವುದಾದರೂ ರಸ್ತೆ ಅಥವಾ ವೃತ್ತಕ್ಕೆ ನಾಮಕರಣ ಮಾಡಬೇಕಿದೆ ಎಂದ ಅವರು ವಿದ್ಯಾರ್ಥಿಗಳು ಸಾಹಿತ್ಯ ಅಧ್ಯಯನ ಬಗ್ಗೆ ಗಮನ ನೀಡಬೇಕು ಎಂದು ಸಲಹೆ ನೀಡಿದರು.

ನಿವೃತ್ತ ಪ್ರಾಂಶುಪಾಲ ಡಿ.ಕೆ.ಸೋಮಶೇಖರ ಮಾತನಾಡಿ, ಡಾ.ವಿಜಯದಬ್ಬೆ ನಾಡಿನ ಸಾಹಿತ್ಯದಲ್ಲಿ ಮೇರು ಸ್ಥಾನ ಪಡೆದಿದ್ದಾರೆ. ಇಂತಹವರು ನಮ್ಮ ಕುಟುಂಬದಲ್ಲಿ ನಮ್ಮ ಅಕ್ಕನಾಗಿದ್ದು ನಮ್ಮ ಪುಣ್ಯ. ಚಿಕ್ಕ ವಯಸ್ಸಿನಲ್ಲೇ ಸಮಾನತೆ ಹೋರಾಟ ಮನೋಭಾವವಿತ್ತು, ಕುಟುಂಬದ ಒಪ್ಪಿಗೆ ಪಡೆದು ಅಂದಿನ ಕಾಲಘಟ್ಟದಲ್ಲಿ ಸ್ನಾತಕೋತ್ತರ ಪದವಿ ಪಡೆದು ಸಾಹಿತ್ಯ ಹೆಚ್ಚಿನ ಕೃಷಿ ಮಾಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಡಾ.ವಿಜಯದಬ್ಬೆ ಬಗ್ಗೆ ಚಿಕ್ಕಮಗಳೂರು ಕವಯತ್ರಿ ವೇದ ಉಪನ್ಯಾಸ ನೀಡಿದರು. ಉಳಿದಂತೆ ಕಾಲೇಜು ಪ್ರಾಂಶುಪಾಲ ಶಿವಕುಮಾರ್, ಸಾಹಿತಿ ಇಂದಿರಮ್ಮ, ಸಾಹಿತಿ ಸೋಂಪುರ ಪ್ರಕಾಶ್, ಉಪನ್ಯಾಸಕ ಧನಂಜಯ, ಮುಖ್ಯ ಶಿಕ್ಷಕ ಗಂಗೇಗೌಡ, ಮೋಹನ್, ಶೇಷಪ್ಪ ಸೇರಿದಂತೆ ಇನ್ನೂ ಮುಂತಾದವರು ಹಾಜರಿದ್ದ ಸಮಾರಂಭ ಡಾ. ವಿಜಯದಬ್ಬೆ ಬಗ್ಗೆ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

Ad
Ad
Nk Channel Final 21 09 2023
Ad