Ad

ದರ್ಶನ್ ಸಿನಿಮಾ ಬ್ಯಾನ್ ಮಾಡುವಂತೆ ಮಾಜಿ ಶಾಸಕ ಎ.ಟಿ ರಾಮಸ್ವಾಮಿ ಆಗ್ರಹ

ವಾಲ್ಮೀಕಿ ನಿಗಮದ ಹಣ ಲೂಟಿಕೋರರ ಪಾಲಾಗಿದ್ದು ಇದರ ಹಿಂದೆ ದೊಡ್ಡ ಶಕ್ತಿಯೇ ಅಡಗಿದ್ದು ಈ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ರಾಮಸ್ವಾಮಿ ಒತ್ತಾಯಿಸಿದರು.

ಹಾಸನ: ವಾಲ್ಮೀಕಿ ನಿಗಮದ ಹಣ ಲೂಟಿಕೋರರ ಪಾಲಾಗಿದ್ದು ಇದರ ಹಿಂದೆ ದೊಡ್ಡ ಶಕ್ತಿಯೇ ಅಡಗಿದ್ದು ಈ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ರಾಮಸ್ವಾಮಿ ಒತ್ತಾಯಿಸಿದರು.

Ad
300x250 2

ಪ್ರಜ್ವಲ್ ಅಶ್ಲೀಲ ವಿಡಿಯೋ ಎನ್ನಲಾದ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ ನ್ಯಾಯಾಂಗ ವ್ಯವಸ್ಥೆ ಸಮಗ್ರ ತನಿಖೆ ನಡೆಸುವ ಮೂಲಕ ಅವರು ಅಪರಾಧಿಯೇ ಎಂದು ಸಾಬೀತು ಮಾಡಬೇಕು. ಇಂತಹ ಪ್ರಕರಣಗಳಲ್ಲಿ ರಾಜಕೀಯ ಬೆರೆಸುವುದು ಸೂಕ್ತವಲ್ಲ, ಕಾನೂನು ಎಲ್ಲರಿಗೂ ಒಂದೇ ಆಗಬೇಕು, ಬಾಯಲ್ಲಿ ಮಾತ್ರ ಹೇಳದೆ ಅನುಷ್ಠಾನಕ್ಕೆ ತರಬೇಕು.

ಈ ಪ್ರಕರಣದಲ್ಲಿ ಸಿಲುಕಿ ನೊಂದವರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಹಾಗೂ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿಯೂ ಕುಟುಂಬಕ್ಕೆ ಸರ್ಕಾರ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಆರೋಪಿಯಾಗಿರುವ ನಟ ದರ್ಶನ್ ಸಿನಿಮಾಗಳನ್ನು ಬ್ಯಾನ್ ಮಾಡಬೇಕು ಎಂದು ಮಾಜಿ ಶಾಸಕ ಎ ಟಿ ರಾಮಸ್ವಾಮಿ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು “ಉರಿದ ವರು ಬೂದಿ ಆಗಲೇಬೇಕು” ಉರಿದವರು ಒಂದಲ್ಲ ಒಂದು ದಿನ ನಾಶ ಆಗುತ್ತಾರೆ ಎನ್ನುವುದಕ್ಕೆ ನಟ ದರ್ಶನ್ ಸ್ಪಷ್ಟ ಉದಾಹರ ಣೆಯಾಗಿದ್ದಾರೆ.ಇವರನ್ನು ಚಲನ ಚಿತ್ರ ವಾಣಿಜ್ಯ ಮಂಡಳಿಯಿಂ ದ ಹೊರದಬ್ಬ ಬೇಕು ಹಾಗೂ ಇವರ ಸಿನಿಮಾಗಳನ್ನು ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿದರು.

ನಟ ದರ್ಶನ್ ಮಾಡಿರುವ ಘನ ಘೋರ ಅಪರಾಧಗಳನ್ನು ನಾವೆಲ್ಲರೂ ಖಂಡಿಸಲೇಬೇಕು, ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು ಸಿನಿಮಾ ಶೈಲಿಯಲ್ಲಿ ಅಪಹರಣ ಮಾಡಿ ಬೆಂಗಳೂರಿಗೆ ಕರೆತಂದು ಹತ್ಯೆ ಮಾಡಿದ್ದಾರೆ. ಓರ್ವ ನಟನಾದವನು ನಾಡಿನ ಕಲೆ ಸಂಸ್ಕೃತಿ ಸಂಪ್ರದಾಯ ವನ್ನು ಎತ್ತಿ ಹಿಡಿಯಬೇಕಿತ್ತು, ಆದರೆ ಮೇರು ನಟ ಎಂದು ಹೆಸರು ಪಡೆದಿದ್ದ ದರ್ಶನ್ ಹಾಗೂ ಅವರ ಪಟಾಲಂಗಳು ಹತ್ಯೆ ಮಾಡಿರುವುದು ನೋಡಿ ಧಿಗ್ಭ್ರಮೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಸಿದ್ಧ ಸಿನಿಮಾ ನಟರು ಪ್ರಖ್ಯಾ ತರಾಗಬೇಕು ಆದರೆ ಕುಖ್ಯಾತರಾಗಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ ರಾಮಸ್ವಾಮಿಯವರು ಮೇರು ನಟ ಯುವ ರಾಜಕಾರಣಿ ಕೊಲೆ ಅತ್ಯಾಚಾರ ದಲ್ಲಿ ಭಾಗಿಯಾಗಿರುವುದು ಕನ್ನಡ ನಾಡಿಗೆ ಶೋಭೆ ತರಲ್ಲ; ಈ ಪ್ರಕರಣ ನಾಡಿನ ಸಂಸ್ಕೃತಿ ಮೇಲೆ ದೊಡ್ಡ ಪೆಟ್ಟು ಬಿದ್ದಂತಾಗಿದೆ. ಚಲನಚಿತ್ರ ವಾಣಿಜ್ಯ ಮಂಡಳಿ ಇತರೆ ಸಂಘಟನೆಗಳಿರಬಹು ದು ಅವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸರ್ಕಾರ ಪೊಲೀಸ್ ಇಲಾಖೆ ದರ್ಶನ್ ಮೇಲೆ ಕಠಿಣ ಕ್ರಮ ಕೈಗೊಳ್ಳ ಬೇಕು ಹಿಂದೆ ಹಲವು ದೇಶದ್ರೋಹಿ ಕೋಟಾ ನೋಟು ಮುದ್ರಣ ದಂತಹ ಪ್ರಕರಣಗಳಲ್ಲೂ ಖುಲಾಸೆಯಾಗಿರುವ ಸನ್ನಿವೇಶನಗಳನ್ನು ಕಂಡಿದ್ದೇವೆ ಸರ್ಕಾರ ಮತ್ತು ಇಲಾಖೆಗಳು ಕಾನೂನು ಕ್ರಮದ ಜೊತೆಗೆ ಎಷ್ಟು ಜನಕ್ಕೆ ಶಿಕ್ಷೆಯಾಯಿತು ಎನ್ನುವುದನ್ನು ಗಮನಿಸಬೇಕು. ಈ ರೀತಿಯ ಪ್ರಕರಣಗಳಲ್ಲಿ ಶೀಘ್ರ ಶಿಕ್ಷೆಯಾದರೆ ಮಾತ್ರ ಸಮಾಜಕ್ಕೆ ಉತ್ತಮ ಸಂದೇಶ ರವಾನಿಯಾಗುತ್ತದೆ ಎಂದರು.

ರೇಣುಕಾಸ್ವಾಮಿ ಹತ್ಯೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡು ಫಾಸ್ಟ್ ಟ್ರ್ಯಾಕ್ ಕೋರ್ಟ್ ಅನ್ನು ತೆರೆಯುವ ಮೂಲಕ ಕನಿಷ್ಠ ಮೂರು ತಿಂಗಳಲ್ಲಿ ದರ್ಶನ್ ಗೆ ಶಿಕ್ಷೆ ಆಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಜನಾರ್ಧನ್, ಮಾದೇಶ್, ಲೋಕೇಶ್ ಇದ್ದರು.

Ad
Ad
Nk Channel Final 21 09 2023
Ad