Bengaluru 22°C
Ad

ಕೊಳ್ಳೇಗಾಲ ಯಡಕುರಿಯ ಕಾವೇರಿ‌ ನದಿಯಲ್ಲಿ ಬೃಹತ್‌ ಮೊಸಳೆ ಪ್ರತ್ಯಕ್ಷ

ಜಿಲ್ಲೆಯ ಕೊಳ್ಳೇಗಾಲದ ಯಡಕುರಿಯ ಕಾವೇರಿ‌ ನದಿಯಲ್ಲಿ ಬೃಹತ್‌ ಮೊಸಳೆ ಪ್ರತ್ಯಕ್ಷವಾಗಿ ಜನರ ಆತಂಕಕ್ಕೆ ಕಾರಣವಾಗಿದೆ, ಈ ನಿಟ್ಟಿನಲ್ಲಿ ಸತ್ತೇಗಾಲ ಗ್ರಾಪಂ ವತಿಯಿಂದ ನದಿಯ ಬಳಿ ತೆರಳದಂತೆ ಜನರಲ್ಲಿ ಭಾನುವಾರ ಮಧ್ಯಾಹ್ನ ಜಾಗೃತಿಯನ್ನು ಮೂಡಿಸಲಾಯಿತು.

ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲದ ಯಡಕುರಿಯ ಕಾವೇರಿ‌ ನದಿಯಲ್ಲಿ ಬೃಹತ್‌ ಮೊಸಳೆ ಪ್ರತ್ಯಕ್ಷವಾಗಿ ಜನರ ಆತಂಕಕ್ಕೆ ಕಾರಣವಾಗಿದೆ, ಈ ನಿಟ್ಟಿನಲ್ಲಿ ಸತ್ತೇಗಾಲ ಗ್ರಾಪಂ ವತಿಯಿಂದ ನದಿಯ ಬಳಿ ತೆರಳದಂತೆ ಜನರಲ್ಲಿ ಭಾನುವಾರ ಮಧ್ಯಾಹ್ನ ಜಾಗೃತಿಯನ್ನು ಮೂಡಿಸಲಾಯಿತು.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡಕುರಿಯ ಕಾವೇರಿ ನದಿಯ ನೀರನ್ನು ದನಗಾಹಿ, ಕುರಿಗಾಹಿಗಳಿಗೂ ಬಳಕೆ ಮಾಡುತ್ತಾರೆ ಅಲ್ಲದೆ ಯುವಕರು, ಮಕ್ಕಳು ಕೆರೆಯಲ್ಲಿ ಈಜಾಡುತ್ತಾರೆ. ಆದರೆ, ದಿಢೀರನೆ ಮೊಸಳೆ ಕಾಣಿಸಿಕೊಂಡಿರುವುದು ಈ ಭಾಗದ‌ ಜನತೆಯಲ್ಲಿ ಆತಂಕ ಸೃಷ್ಠಿಸಿದೆ.

ಶನಿವಾರ ಮೊಸಳೆ ದಾಳಿಯಿಂದ ಓರ್ವ ಪಾರಾಗಿದ್ದು ಕೊಳ್ಳೇಗಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ, ಹೀಗಾಗಿ ಮೊಸಳೆಯಿರುವ ಕಾರಣ ನೀರಿಗೆ ಇಳಿಯದಂತೆ ಜಾಗೃತಿ ಮೂಡಿಸಲಾಗಿದೆ.

Ad
Ad
Nk Channel Final 21 09 2023
Ad