Bengaluru 27°C
Ad

ಬಿಳಿಗಿರಿರಂಗನ ಬೆಟ್ಟದಿಂದ ಜಿಗಿದು ರಿಯಲ್ ಎಸ್ಟೇಟ್ ಉದ್ಯಮಿ  ಆತ್ಮಹತ್ಯೆ

ಚಾಮರಾಜನಗರ  ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ಮೇಲಿಂದ ಜಿಗಿದು ರಿಯಲ್ ಎಸ್ಟೇಟ್ ಉದ್ಯಮಿ  ಆತ್ಮಹತ್ಯೆ ಮಾಡಿಕೊಂಡ ಘಟನೆ   ನಡೆದಿದೆ. 

ಚಾಮರಾಜನಗರ: ಚಾಮರಾಜನಗರ  ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ಮೇಲಿಂದ ಜಿಗಿದು ರಿಯಲ್ ಎಸ್ಟೇಟ್ ಉದ್ಯಮಿ  ಆತ್ಮಹತ್ಯೆ ಮಾಡಿಕೊಂಡ ಘಟನೆ   ನಡೆದಿದೆ.

ಮಹದೇವನಾಯಕ ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ.

ಮಹದೇವನಾಯಕ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕು ಕವಲಂದೆ ಕುಂಬಾರಹಳ್ಳಿಯ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದರು.

ಜೂ.6 ರಂದು ಬಿಳಿಗಿರಿರಂಗನಬೆಟ್ಟದ ಬಳಿ ಬೈಕ್ ಪತ್ತೆಯಾಗಿದೆ. ಈ ಜಾಡನ್ನು ಹಿಡಿದ ಪೊಲೀಸರು ಶನಿವಾರ ಡ್ರೋನ್ ಕ್ಯಾಮೆರಾ ಬಳಸಿ ಬೆಟ್ಟದ ಕಡಿದಾದ ಜಾಗದಲ್ಲಿ ಹುಡುಕಾಟ ನಡೆಸಿದ್ದಾರೆ. ಡ್ರೋನ್ ಕ್ಯಾಮೆರಾದಲ್ಲಿ ಕಮರಿನ ನಡುವೆ ಶವ ಸಿಲುಕಿರುವುದು ಪತ್ತೆಯಾಗಿದೆ.

ಮಹದೇವನಾಯಕ ಮೇ 5 ರಂದು ನಾಪತ್ತೆಯಾಗಿದ್ದಾರೆ ಎಂದು ಕವಲಂದೆ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಶವದ ಮೇಲಿನ ಬಟ್ಟೆಯನ್ನು ಸಂಬಂಧಿಕರು ಗುರುತಿಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಯಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ – 9152987821

Ad
Ad
Nk Channel Final 21 09 2023
Ad