Bengaluru 21°C
Ad

ಶ್ರೀದೇವಿ ಭೈರಪ್ಪ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಸಪ್ತಮಿ ಗೌಡ

ನಟ ಯುವ ಯುವರಾಜ್‌ ಕುಮಾರ್‌ ವಿಚ್ಚೇದನ ನೋಟಿಸ್‌ ನೀಡಿದ ಬಳಿಕ ಪತ್ನಿ ಶ್ರೀದೇವಿ ಭೈರಪ್ಪ ಅವರು, ‘ನನ್ನ ಪತಿಗೆ ಸಪ್ತಮಿ ಗೌಡ ಅವರೊಂದಿಗೆ ಅನೈತಿಕ ಸಂಬಂಧ ಇದೆ’ ಎಂದು ಗಂಭೀರ ಆರೋಪ ಮಾಡಿದ್ದರು. ಈ ಕುರಿತು ನಟಿ ಸಪ್ತಮಿ ಅವರು ಕೋರ್ಟ್ ಮೆಟ್ಟಿಲೇರಿ ನಿರ್ಬಂಧಕಾಜ್ಞೆ ತರಿಸಿದ್ದಾರೆ.

ಬೆಂಗಳೂರು: ನಟ ಯುವ ಯುವರಾಜ್‌ ಕುಮಾರ್‌ ವಿಚ್ಚೇದನ ನೋಟಿಸ್‌ ನೀಡಿದ ಬಳಿಕ ಪತ್ನಿ ಶ್ರೀದೇವಿ ಭೈರಪ್ಪ ಅವರು, ‘ನನ್ನ ಪತಿಗೆ ಸಪ್ತಮಿ ಗೌಡ ಅವರೊಂದಿಗೆ ಅನೈತಿಕ ಸಂಬಂಧ ಇದೆ’ ಎಂದು ಗಂಭೀರ ಆರೋಪ ಮಾಡಿದ್ದರು. ಈ ಕುರಿತು ನಟಿ ಸಪ್ತಮಿ ಅವರು ಕೋರ್ಟ್ ಮೆಟ್ಟಿಲೇರಿ ನಿರ್ಬಂಧಕಾಜ್ಞೆ ತರಿಸಿದ್ದಾರೆ.

ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ನಲ್ಲಿ ಸಪ್ತಮಿ ಗೌಡ ದಾವೆ ಹೂಡಿ, ‘ಅವರ ವಿಚ್ಚೇದನ ಪ್ರಕರಣದಲ್ಲಿ ನನ್ನ ಹೆಸರು ತಳುಕು ಹಾಕಲಾಗುತ್ತಿದೆ. ಚಾರಿತ್ರ್ಯ ಹರಣ ಮಾಡಲಾಗುತ್ತಿದೆ’ ಎಂದು ಹೇಳಿಕೊಂಡಿದ್ದರು.ಮಾನ ಹಾನಿಕರ ಹೇಳಿಕೆಗಳನ್ನು ನೀಡದಂತೆ ಸಿಟಿ ಸಿವಿಲ್ ಕೋರ್ಟ್ ನಿರ್ಬಂಧಕಾಜ್ಞೆ ಹೊರಡಿಸಿ ಶ್ರೀದೇವಿ ಭೈರಪ್ಪ ಅವರಿಗೆ ನೋಟಿಸ್ ಜಾರಿ ಮಾಡಿದೆ.

ಆರೋಪವೇನು?
ಸಪ್ತಮಿ ಗೌಡ ಅವರೊಂದಿಗೆ ಯುವ ಒಂದು ವರ್ಷದಿಂದ ಸಂಬಂಧ ಹೊಂದಿದ್ದಾರೆ. 2023 ರ ಡಿಸೆಂಬರ್‌ ನಲ್ಲಿ ನಾನು ಭಾರತಕ್ಕೆ ಬಂದಾಗ ಸಪ್ತಮಿ ಗೌಡ ಅವರೊಂದಿಗೆ ಹೊಟೇಲ್‌ ರೂಮ್‌ ವೊಂದರಲ್ಲಿ ಯುವ ಸಿಕ್ಕಿಬಿದ್ದಿದ್ದರು. ಇದೇ ಕಾರಣದಿಂದ ನನ್ನನ್ನು ಮನೆಯಿಂದ ಹೊರಹಾಕಲು ಯತ್ನಿಸಿದ್ದರು ಎಂದು ಶ್ರೀದೇವಿ ಆರೋಪಿಸಿದ್ದರು

Ad
Ad
Nk Channel Final 21 09 2023
Ad