News Karnataka Kannada
Thursday, May 02 2024
ತುಮಕೂರು

ತುಮಕೂರು ಚುನಾವಣಾ ಅಕ್ರಮ: 81.33ಲಕ್ಷ ರೂ. ನಗದು ಜಪ್ತಿ

Printer's name mandatory in election leaflet
Photo Credit : News Kannada

ತುಮಕೂರು: ಕರ್ನಾಟಕ ವಿಧಾನಸಭಾ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾದ ದಿನ ಅಂದರೆ ಮಾರ್ಚ್ 29 ರಿಂದ ಏಪ್ರಿಲ್ 11 ರವರೆಗೆ ಜಿಲ್ಲೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆಯಡಿ 81.33ಲಕ್ಷ ರೂ. ನಗದನ್ನು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಪಾರದರ್ಶಕ ಚುನಾವಣೆ ನಡೆಸುವ ನಿಟ್ಟಿನಲ್ಲಿ ಚುನಾವಣಾ ಅಕ್ರಮವನ್ನು ತಡೆಯಲು 156 ವಿಚಕ್ಷಣ ದಳ(ಎಫ್ಎಸ್ಟಿ-ಫ್ಲೈಯಿಂಗ್ ಸ್ವ್ಯಾಡ್) 135 ಸ್ಥಿರ ಕಣ್ಗಾವಲು ತಂಡ (ಎಸ್ಎಸ್ಟಿ-ಸ್ಟ್ಯಾಟಿಕ್ ಸರ್ವೇಲೆನ್ಸ್ ತಂಡ) ಹಾಗೂ 9 ಅಬಕಾರಿ ತಂಡವನ್ನು ರಚಿಸಿ ನಿಯೋಜಿಸಲಾಗಿದೆ.

ಜಿಲ್ಲಾದ್ಯಂತ ನಿಯೋಜಿತ ತಂಡಗಳು ಮಾರ್ಚ್ 29 ರಿಂದ ಏಪ್ರಿಲ್ 11 ರವರೆಗೆ ಪೊಲೀಸರ ಸಹಕಾರದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಎಸ್ಎಸ್ಟಿ ತಂಡದಿಂದ 5.18 ಲಕ್ಷ ರೂ. ಹಾಗೂ ಪೊಲೀಸ್ ಇಲಾಖೆಯಿಂದ 76.25ಲಕ್ಷ ರೂ. ಸೇರಿ 82.33 ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ದಾಖಲೆಯಿಲ್ಲದ 75 ಲಕ್ಷ ರೂ. ಹಣವನ್ನು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗಿದ್ದು, ಸೂಕ್ತ ದಾಖಲೆ ಒದಗಿಸಿದವರಿಗೆ 3.70 ಲಕ್ಷ ರೂ. ಹಣವನ್ನು ಹಿಂದಿರುಗಿಸಲಾಗಿದೆ.

ಉಳಿದ 2.63 ಲಕ್ಷ ರೂ. ಹಣವನ್ನು ಜಿಲ್ಲಾ ಖಜಾನೆಗೆ ಜಮೆ ಮಾಡಲಾಗಿದೆ. ಆದಾಯ ತೆರಿಗೆ ಇಲಾಖೆಯಲ್ಲಿ ಜಮೆಯಾಗಿರುವ 75 ಲಕ್ಷ ರೂ. ಹಣಕ್ಕೆ ಸಮರ್ಪಕ ದಾಖಲೆ ಒದಗಿಸಿದ ನಂತರ ಸಂಬಂಧಿಸಿದವರಿಗೆ ಹಿಂದಿರುಗಿಸಲಾಗುವುದು.

ಅದೇ ರೀತಿ ಮಾರ್ಚ್ 29 ರಿಂದ ಏಪ್ರಿಲ್ 11 ರವರೆಗೆ ಅಬಕಾರಿ ಇಲಾಖೆ, ಫ್ಲೈಯಿಂಗ್ ಸ್ಕ್ವಾಡ್ ತಂಡ ಹಾಗೂ ಪೊಲೀಸ್ ತಂಡದಿಂದ ಜಿಲ್ಲೆಯಲ್ಲಿ 89,92,641 ರೂ. ಮೌಲ್ಯದ ದಾಖಲೆಯಿಲ್ಲದ 16804.53 ಲೀ. ಭಾರತೀಯ ತಯಾರಿಕಾ ಮದ್ಯ (IML-Indian made liquor), 16371.01 ಲೀ. ಬೀರ್ ಹಾಗೂ 5೦ಲೀ. ಸೇಂದಿಯನ್ನು ವಶಪಡಿಸಿಕೊಳ್ಳಲಾಗಿದೆ.

ಚುನಾವಣಾ ಅಕ್ರಮಗಳಿಗಾಗಿ ಬಳಸಿಕೊಂಡಿದ್ದ 5೦ ದ್ವಿಚಕ್ರ ವಾಹನ, 2 ನಾಲ್ಕು ಚಕ್ರ ವಾಹನ, ಮತದಾರರಿಗೆ ಹಂಚಿಕೆ ಮಾಡಲು ಸಂಗ್ರಹಿಸಿಟ್ಟಿದ್ದ ವಸ್ತು, ದವಸ-ಧಾನ್ಯ, ಉಡುಪುಗಳನ್ನು ವಶಪಡಿಸಿಕೊಳ್ಳಲಾಗಿದ್ದು, 6301212 ರೂ. ಮೌಲ್ಯದ 720 ಎಲ್ಇಡಿ ಬಲ್ಬ್, 9 ಬ್ಯಾಗ್ನಲ್ಲಿದ್ದ 137 ಚೂಡಿದಾರ್ ಪೀಸ್, 2 ಬ್ಯಾಗ್ನಲ್ಲಿದ್ದ 13 ಲೆಹಂಗಾ ಪೀಸ್, 1 ಬ್ಯಾಗ್ನಲ್ಲಿದ್ದ 25 ಬುರ್ಖಾ ಪೀಸ್, 1 ಬ್ಯಾಗ್ನಲ್ಲಿದ್ದ 16 ಲಾಂಗ್ ಫ್ರಾಕ್ಸ್, 54 ಬಾಕ್ಸ್ ಡಿನ್ನರ್ ಸೆಟ್, ತಲಾ 77 ಕೆ.ಜಿ. 4೦೦ ಭತ್ತದ ಚೀಲ, 2235 ಕೆ.ಜಿ. ಅಲ್ಯುಮಿನಿಯಂ ಮತ್ತು ಸ್ಟೀಲ್ ಪಾತ್ರೆ, 1೦೦ ನೈಟಿ, 2321 ಸೀರೆ, 301 ಚೂಡಿದಾರ್ ಟಾಪ್ಸ್, 68 ಲೆಗ್ಗಿನ್ಸ್, ತಲಾ 6೦ ಕೆ.ಜಿ. 2೦ ಜೋಳದ ಚೀಲ, PÉJ-06-J©-5828 ಕ್ಯಾಂಟರ್ ಲಾರಿ, 257 ಚುನಾವಣಾ ಕರಪತ್ರ, ಮಂಜುನಾಥ ಸ್ವಾಮಿ ಭಾವಚಿತ್ರ ಮತ್ತು ಬಳೆಗಳ ಪೊಟ್ಟಣ, ತಲಾ 26 ಕೆ.ಜಿ.ಯ 6೦ ಚೀಲ ಅಕ್ಕಿ, 2500-3೦೦೦ ಜೆ.ಡಿ.ಎಸ್. ಪಕ್ಷದ ಪಾಂಪ್ಲೇಟ್, 380 ಅಕ್ಕಿಯ ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ.

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಡಿ ದಾಖಲಾದ ಪ್ರಕರಣಗಳಲ್ಲಿ ಒಟ್ಟು 27 ಹಾಗೂ ಅಬಕಾರಿ ಕಾಯ್ದೆಯನ್ನು ಉಲ್ಲಂಘಿಸಿದ 249 ಪ್ರಕರಣಗಳಿಗೆ ಪ್ರಥಮ ವರ್ತಮಾನ ವರದಿ(ಎಫ್ಐಆರ್) ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು