ಬೆಂಗಳೂರು: ಚಿನ್ನದ ಬೆಲೆಯ ಇಳಿಕೆ ಮುಂದುವರಿದಿದೆ. ಬೆಳ್ಳಿ ಬೆಲೆ ಏರಿದೆ. ಕೆಲ ವಿದೇಶೀ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆಯಲ್ಲಿ ತುಸು ಹೆಚ್ಚಳವಾದರೂ ಭಾರತದಲ್ಲಿ ಬೆಲೆ ಕಡಿಮೆ ಆಗಿದೆ. ಇಂದು ಚಿನ್ನದ ಬೆಲೆ ಏರುಗತಿಗೆ ಬರುವ ನಿರೀಕ್ಷೆ ಇದೆ.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 52,400ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 57,160ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,110 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 52,400ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 6,900ರೂಪಾಯಿಯಲ್ಲಿ ಇದೆ.
ಇನ್ನು ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಚೆನ್ನೈ: 52,950 ರೂ., ಮುಂಬೈ: 52,400 ರೂ., ದೆಹಲಿ: 52,550 ರೂ., ಕೋಲ್ಕತಾ: 52,400 ರೂ., ಕೇರಳ: 52,400 ರೂ., ಅಹ್ಮದಾಬಾದ್: 52,450 ರೂ., ಜೈಪುರ್: 52,550 ರೂ., ಲಕ್ನೋ: 52,550 ರೂ., ಭುವನೇಶ್ವರ್: 52,400 ರೂಪಾಯಿಯಲ್ಲಿ ಇದೆ.