ಬೆಂಗಳೂರು: ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಅಲ್ಪ ಇಳಿಕೆ ಕಂಡಿವೆ. ಕಳೆದ ವಾರ ಸತತವಾಗಿ ಏರಿಕೆ ಕಂಡಿದ್ದ ಈ ಎರಡು ಲೋಹಗಳ ಬೆಲೆ ಇದೀಗ ಸ್ವಲ್ಪ ತಗ್ಗಿದೆ. ಆಗಾಗ ಏರಿಕೆ ಕಂಡರೂ ಈ ಎರಡೂ ಲೋಹಗಳ ಬೆಲೆ ಮೂರು ತಿಂಗಳಲ್ಲಿ ಕೆಳಗಿನ ಮಟ್ಟದಲ್ಲೇ ಇದೆ. ಮುಂಬರುವ ದಿನಗಳಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಬೇಡಿಕೆ ಇನ್ನಷ್ಟು ಹೆಚ್ಚಬಹುದು.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 54,650 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 55,000 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,750 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 55,000 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,680 ರೂಪಾಯಿಯಲ್ಲಿ ಇದೆ.
ವಿವಿಧ ನಗರಗಳಲ್ಲಿರುವ 10 ಗ್ರಾಮ್ಗೆ 22 ಕ್ಯಾರಟ್ ಚಿನ್ನದ ಬೆಲೆ ನೋಡುವುದಾದರೆ, ಚೆನ್ನೈ: 55,370 ರೂ, ಮುಂಬೈ: 55,000 ರೂ, ದೆಹಲಿ: 55,150 ರೂ, ಕೋಲ್ಕತಾ: 55,000 ರೂ, ಕೇರಳ: 55,000 ರೂ, ಅಹ್ಮದಾಬಾದ್: 55,050 ರೂ, ಭುವನೇಶ್ವರ್: 55,000 ರೂ. ಇದೆ.
ಇನ್ನು ವಿವಿಧ ನಗರಗಳಲ್ಲಿರುವ 100 ಗ್ರಾಮ್ ಬೆಳ್ಳಿ ಬೆಲೆ ನೋಡುವುದಾದರೆ ಚೆನ್ನೈ: 8,180 ರೂ, ಮುಂಬೈ: 7,750 ರೂ, ದೆಹಲಿ: 7,750 ರೂ, ಅಹ್ಮದಾಬಾದ್: 7,750 ರೂ, ಭುವನೇಶ್ವರ್: 8,180 ರೂ, ಕೇರಳ: 8,180 ರೂ. ಇದೆ.
ಅಮೆರಿಕದಲ್ಲಿ ಬ್ಯಾಂಕ್ ಬಡ್ಡಿ ದರ ಏರಿಕೆ ಆಗಬಹುದು ಎಂಬ ಭೀತಿ ಈ ಚಿನ್ನದ ಬೆಲೆ ಇಳಿಕೆಗೆ ಎಡೆ ಮಾಡಿಕೊಟ್ಟಿದೆ. ತಜ್ಞರ ಅಂದಾಜಿನ ಪ್ರಕಾರ ಚಿನ್ನದ ಬೆಲೆ ಈಗ ಇಳಿಯುತ್ತಿದೆಯಾದರೂ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿ ಹಿಡಿಯುವ ನಿರೀಕ್ಷೆ ಇದೆ. ಮುಂದಿನ ವರ್ಷದಲ್ಲಿ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.