ಬೆಂಗಳೂರು: ಅಸ್ಸಾಂನ ಗೌಹಾಟಿ ಐಐಟಿಯ ಹೆಸರಿನಲ್ಲಿ ನಕಲಿ ಅಂಕಪಟ್ಟಿ ಸಲ್ಲಿಸಿ ಕೇಂದ್ರ ವಿದ್ಯುತ್ ಸಂಶೋಧನ ಸಂಸ್ಥೆ(ಸಿಪಿಆರ್ಐ)ಯಲ್ಲಿ ನೌಕರಿ ಗಿಟ್ಟಿಸಿಕೊಂಡಿದ್ದ ಇಂಜಿನಿಯರ್ ಒಬ್ಬರು ಸಿಂಧುತ್ವ ಪರೀಕ್ಷೆ ವೇಳೆ ಸಿಕ್ಕುಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯೂ ಬಿಇಎಲ್ ರಸ್ತೆಯ ನಿವಾಸಿಯಾದ ಮನೀಶ್ ಸಿಂಗ್ (26) ಎಂಬುವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
2018ನೇ ಸಾಲಿನಲ್ಲಿ ಸಿಪಿಆರ್ಐ ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗಕ್ಕೆ ಕರೆದಿದ್ದ ಇಂಜಿನೀಯರಿಂಗ್ ಅಧಿಕಾರಿ ಹುದ್ದೆಗೆ ಮನೀಶ್ ಸಿಂಗ್ ನೇಮಕಗೊಂಡಿದ್ದರು. ನೇಮಕಾತಿ ವೇಳೆ ಮನೀಶ್ ಸಲ್ಲಿಸಿದ್ದ ಐಐಟಿ ಅಂಕಪಟ್ಟಿ ಸಿಂಧುತ್ವ ಪರಿಶೀಲನೆಗಾಗಿ ಅಸ್ಸಾಂನ ಗೌಹಾಟಿ ಐಐಟಿಗೆ ಕಳುಹಿಸಲಾಗಿತ್ತು. ಅಂಕಪಟ್ಟಿ ಪರಿಶೀಲನೆ ನಡೆಸಿದ ಐಐಟಿ ಅಧಿಕಾರಿಗಳು, ನಕಲಿ ಎಂದು ದೃಢೀಕರಿಸಿದ್ದಾರೆ. ಡಿಜಿಟಲ್ ಬೆರಳಚ್ಚು ಬೇರೊಬ್ಬ ಅಭ್ಯರ್ಥಿಗೆ ಸೇರಿದ್ದಾಗಿದೆ ಎಂದು ತಿಳಿದುಬಂದಿದೆ ಎನ್ನಲಾಗಿದೆ.
ಸರ್ಕಾರೀ ನೌಕರಿಗಾಗಿ ಐಐಟಿ ನಕಲಿ ಅಂಕಪಟ್ಟಿ ; ಎಂಜಿನಿಯರ್ ಬಂಧನ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.