ವಾಷಿಂಗ್ಟನ್ : ನ್ಯೂಯಾರ್ಕ್ ನ ಅವಳಿ ಗೋಪುರಗಳ ಮೇಲೆ ನಡೆದ ದಾಳಿಯಿಂದ ಜಗತ್ತಿನ ದೊಡ್ಡಣ್ಣ ಒಮ್ಮೆಲೇ ಕುಸಿದಿತ್ತು. ಈ ದಾಳಿಯಲ್ಲಿ 3,000 ಮಂದಿ ಸಾವನ್ನಪ್ಪಿದ್ದು 6,000ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದರು. ಇದಕ್ಕೆ ಪ್ರತೀಕಾರವಾಗಿ, ಅಮೆರಿಕಾ ಸೇನೆ 2011ರ ಮೇ 2ರಂದು ನಡೆಸಿದ ಕಾರ್ಯಾಚರಣೆಯಲ್ಲಿ ಬಿನ್ ಲಾಡೆನ್ ನನ್ನು ಹತ್ಯೆ ಮಾಡಿತ್ತು.
ಆದರೆ ಹತ್ತು ವರ್ಷಗಳ ಹಿಂದೆ ಹತನಾದ ಬಿನ್ ಲಾಡೆನ್ ಹೆಸರು ಅಫ್ಘಾನಿಸ್ತಾನದಲ್ಲಿ ಉದ್ಭವವಾಗಿರುವ ಪ್ರಸಕ್ತ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಚರ್ಚೆಯ ವಿಷಯವಾಗಿದೆ.
ಜೋ ಬೈಡನ್ ವಿರುದ್ದ ಬಿನ್ ಲಾಡೆನ್ ಆಗ ವ್ಯಕ್ತಪಡಿಸಿದ್ದ ಅಭಿಪ್ರಾಯಗಳೇ ಇದಕ್ಕೆ ಕಾರಣ. ಆ ಸಮಯದಲ್ಲಿ ಜೋ ಬೈಡನ್ ಅಮೆರಿಕಾದ ಅಧ್ಯಕ್ಷನಾಗಬೇಕು. ನಂತರ ಅಮೆರಿಕಾ ಪತನವನ್ನು ನಾನು ಕಣ್ಣಾರೆ ನೋಡಬೇಕು ಎಂದು ಬಿನ್ ಲಾಡೆನ್ ಬಯಸಿದ್ದನಂತೆ. ಲಾಡೆನ್ ಆಸೆ ಪಟ್ಟಿದ್ದ ಈ ವಿಷಯ ಪ್ರಸ್ತುತ ಅಮೆರಿಕಾದಲ್ಲಿ ಬಿಸಿ ಚರ್ಚೆಯ ವಿಷಯವಾಗಿದೆ.