News Karnataka Kannada
Saturday, May 04 2024
ಬೆಂಗಳೂರು

ಕಳೆದ ಎಂಟು ತಿಂಗಳಲ್ಲಿ ರಾಜ್ಯದಲ್ಲಿ 4,78,082 ಜನರು ಸಾವನ್ನಪ್ಪಿದ್ದಾರೆ : ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್

Death Body 08082021
Photo Credit :

ಬೆಂಗಳೂರು: ರಾಜ್ಯ ಸರ್ಕಾರ ನೀಡಿರುವ ಅಧಿಕೃತ ಕೋವಿಡ್ -19 ಸಾವಿನ ಸಂಖ್ಯೆಯನ್ನು ವಿರೋಧ ಪಕ್ಷಗಳು ವಿವಾದ ಮಾಡುತ್ತಲೇ ಇದೆ, ಇದರ ನಡುವೆ ಸೋಮವಾರ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದಾರೆ.

ಮಾರ್ಚ್ 1, 2020 ರಿಂದ ಕೋವಿಡ್ -19 ನಿಂದ 37,423 ಮಂದಿ ಸಾವನನ್ನಪ್ಪಿದ್ದಾರೆ. ಆ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 9,40,416 ಆಗಿದೆ. ಅದರಲ್ಲಿ ಕಳೆದ ಎಂಟು ತಿಂಗಳಲ್ಲಿ ರಾಜ್ಯದಲ್ಲಿ 4,78,082 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.

ಕಳೆದ 2 ವರ್ಷಗಳಲ್ಲಿ ರಾಜ್ಯದಲ್ಲಿ ಕೋವಿಡ್ ನಿಂದ ಉಂಟಾಗಿರುವ ಸಾವಿನ ಬಗಗ್ಗೆ ಕಾಂಗ್ರೆಸ್ ಎಂಎಲ್ ಸಿ ಪ್ರಕಾಶ್ ರಾಥೋಡ್ ಪ್ರಶ್ನೆಗೆ ಉತ್ತರಿಸಿದ ಸುಧಾಕರ್, ಮಾರ್ಚ್ 1 2020 ರಿಂದ 31 ಡಿಸೆಂಬರ್ 2020 ರವರೆಗೆ 4,62,334 ಮಂದಿ ಸಾವನ್ನಪ್ಪಿದ್ದು, 1 ಜನವರಿ 2021 ರಿಂದ 31 ಆಗಸ್ಟ್31 ರವರೆಗೆ 4,78,082 ಜನ ಮರಣ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.

ಜನನ ಮತ್ತು ಮರಣಗಳ ರಿಜಿಸ್ಟ್ರಾರ್ ಕಚೇರಿಯ ದಾಖಲೆಗಳ ಪ್ರಕಾರ ಒಟ್ಟು ಸಾವಿನ ಸಂಖ್ಯೆ ಮತ್ತು ಪ್ರಸ್ತುತ ವರ್ಷದ ಸಂಖ್ಯೆಯನ್ನು ಸಮನ್ವಯಗೊಳಿಸಲಾಗುತ್ತಿದೆ. ಎಲ್ಲಾ ಕೋವಿಡ್ -19 ಸಾವುಗಳನ್ನು ದಾಖಲಿಸಲಾಗಿದೆ, ಮತ್ತು ಡೇಟಾವನ್ನು ಐಸಿಎಂಆರ್ ವೆಬ್‌ಸೈಟ್‌ನಲ್ಲಿ ಅಪ್‌ಡೇಟ್ ಮಾಡಲಾಗುತ್ತದೆ ಎಂದು ಹೇಳಿದ ಅವರು, ಸಾವಿನ ಲೆಕ್ಕಪರಿಶೋಧನೆಯನ್ನು ನಿಯಮಿತವಾಗಿ ಮಾಡಲಾಗುತ್ತದೆ ಎಂದು ಹೇಳಿದರು. ಗ್ರಾಮೀಣ ಪ್ರದೇಶಗಳಲ್ಲಿ ಮನೆಯಲ್ಲಿ ಕೋವಿಡ್ ಸಾವಿನ ಅಂಕಿ ಅಂಶ ಪರಿಶೀಲನೆ ಸಂಬಂಧ ಎಂಎಲ್‌ಸಿ ರಾಥೋಡ್ ಅವರ ಸಲಹೆಯನ್ನು ಪರಿಗಣಿಸಲಾಗುವುದು ಎಂದು ಹೇಳಿದರು.

ಆರ್ ಟಿ ಪಿಸಿಆರ್ ಪಾಸಿಟಿವ್ ಫಲಿತಾಂಶ ಹೊಂದಿದ್ದ ರೋಗಿಗಳ ಸಾವನ್ನು ಮಾತ್ರ ಕೋವಿಡ್ ಸಾವು ಎಂದು ಸರ್ಕಾರ ಪರಿಗಣಿಸಿದೆ ಎಂದು ಪ್ರಕಾಶ್ ರಾಥೋಡ್ ಹೇಳಿದರು, ಆದರೆ ಕೋವಿಡ್ ತರಹದ ರೋಗಲಕ್ಷಣಗಳೊಂದಿಗೆ ಹೆಚ್ಚಿನ ಜನರು ತಮ್ಮ ಮನೆಗಳಲ್ಲಿ ಸಾವನ್ನಪ್ಪಿದ್ದಾರೆ, ಹಾಗೂ ಅನೇಕರು ಕೋವಿಡ್‌ಗೆ ತುತ್ತಾಗಿರುವುದು ಸಿಟಿ ಸ್ಕ್ಯಾನ ನಿಂದ ಕಂಡುಬಂದಿದೆ.

ಸರ್ಕಾರವು ವಿವರವಾದ ಮರಣ ಪರೀಕ್ಷೆಯನ್ನು ನಡೆಸಬೇಕು ಮತ್ತು ಕೋವಿಡ್‌ನಿಂದ ಉಂಟಾಗುವ ಎಲ್ಲಾ ಸಾವುಗಳನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಸಚಿವರು ನೀಡಿದ ಸಂಖ್ಯೆಗಳ ಪ್ರಕಾರ, ಸೆಪ್ಟೆಂಬರ್ 2020 ರಲ್ಲಿ 67,444 ಜನರು ಸಾವನ್ನಪ್ಪಿದ್ದಾರೆ, ಮೇ 2021 ರಲ್ಲಿ 77,221 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಜೂನ್ 2021 ರಲ್ಲಿ 99,665 ಜನರು ರಾಜ್ಯದಲ್ಲಿ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು