ಬೆಂಗಳೂರು : ಇಂದು ಬೆಳಗ್ಗೆ ಸಿಲಿಕಾನ್ ಸಿಟಿಯಲ್ಲಿ 17 ವರ್ಷದ ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿದೆ. ಮಿಲಿಟರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿ ರಾಹುಲ್ ಭಂಡಾರಿ ಮೃತರು.
ಸಂಜಯನಗರ ಮುಖ್ಯರಸ್ತೆಯ ಬಸ್ಸ್ಟಾಪ್ ಬಳಿ ರಾಹುಲ್ ಶವ ಪತ್ತೆಯಾಗಿದೆ. ತಲೆಗೆ ಪಿಸ್ತೂಲ್ನಿಂದ ಶೂಟ್ ಮಾಡಿಕೊಂಡು ಮೃತಪಟ್ಟಿದ್ದಾರೆ. ಮೃತರ ಜೇಬಿನಲ್ಲಿ ಮೊಬೈಲ್ ಇದ್ದು, ಮೊಬೈಲ್ ಪರಿಶೀಲನೆ ಮಾಡಲಾಗುತ್ತಿದೆ.
ಘಟನಾ ಸ್ಥಳಕ್ಕೆ ಪೋಷಕರು ಬಂದು ಕಣ್ಣೀರಿಟ್ಟಿದ್ದಾರೆ. ಓದಿನಲ್ಲಿಯೂ ಮುಂದಿದ್ದ ರಾಹುಲ್ಗೆ ಯಾವುದೇ ರೀತಿ ಒತ್ತಡ ಇರಲಿಲ್ಲ ಎಂದು ಪೋಷಕರು ಹೇಳಿದ್ದಾರೆ. ಇದು ಆತ್ಮಹತ್ಯೆಯಾ ಅಥವಾ ಕೊಲೆಯಾ ಎನ್ನುವ ಬಗ್ಗೆ ಅನುಮಾನ ಇದ್ದು ಪೊಲೀಸರು ತನಿಖೆ ಮಾಡುತ್ತಿದ್ದಾರೆ