ಬೆಂಗಳೂರು: ನಾಲ್ಕೈದು ದಿನಗಳಿಂದ ಚಿನ್ನ, ಬೆಳ್ಳಿ ದರ ಇಳಿಕೆಯ ಹಾದಿ ಹಿಡಿದಿದೆ. ಇದು ಚಿನ್ನಾಭರಣ ಖರೀದಿಸುವವರಿಗೆ ಸಂತೋಷದ ವಿಚಾರ. ಪ್ರಮುಖ ಎಲ್ಲಾ ಮಹಾ ನಗರಗಳಲ್ಲಿಯೂ ಸಹ ಕೆಲವು ದಿನಗಳಿಂದ ಚಿನ್ನಾಭರಣ ದರ ಇಳಿಕೆ ಕಾಣುತ್ತಿದೆ.
ಬೆಂಗಳೂರು, ಚೆನ್ನೈ, ದೆಹಲಿ ಸೇರಿದಂತೆಯೇ ಪ್ರಮುಳ ಎಲ್ಲಾ ಮಹಾನಗರಗಳಲ್ಲಿಯೂ ಸಹ ಚಿನ್ನದ ದರ ಇಳಿಕೆ ಕಂಡಿದೆ. ಬೆಳ್ಳಿ ದರದಲ್ಲಿ ಕೆಲವೆಡೆ ಸ್ಥಿರವಾಗಿದ್ದರೆ, ಕೆಲವೆಡೆ ಅಲ್ಪ ಪ್ರಮಾಣದಲ್ಲಿ ಇಳಿಕೆ ಆಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 43,300 ರೂಪಾಯಿ ನಿಗದಿಯಾಗಿದೆ. ಸುಮಾರು 1,000 ರೂಪಾಯಿ ಇಳಿಕೆ ಕಂಡಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 47,230 ರೂಪಾಯಿ ನಿಗದಿಯಾಗಿದ್ದು, 1,200 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ. ಬೆಳ್ಳಿ ದರ ನಿನ್ನೆ ಅಲ್ಪ ಪ್ರಮಾಣದಲ್ಲಿ ಇಳಿಕೆ ಕಂಡಿತ್ತು, ಆ ಬಳಿಕ ಇಂದು ಸ್ಥಿರವಾಗಿದೆ. ಕೆಜಿ ಬೆಳ್ಳಿಗೆ 60,000 ರೂಪಾಯಿ ನಿಗದಿಯಾಗಿದೆ.