Bengaluru 22°C
Ad

ಬಿ ನಾಗೇಂದ್ರ ರಾಜೀನಾಮೆ : ಉಸ್ತುವಾರಿ ಸಚಿವರಾಗಿ ಜಮೀರ್‌ ಅಹ್ಮದ್ ನೇಮಕ

ಕರ್ನಾಟಕ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಕ್ರಮದ ಪ್ರಕರಣದಲ್ಲಿ ಸಚಿವ ಸ್ಥಾನಕ್ಕೆ ನಾಗೇಂದ್ರ ಅವರು ಇತ್ತೀಚೆಗಷ್ಟೆ ರಾಜಿನಾಮೆ ನೀಡಿದ್ದರು.

ಬಳ್ಳಾರಿ: ಕರ್ನಾಟಕ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಕ್ರಮದ ಪ್ರಕರಣದಲ್ಲಿ ಸಚಿವ ಸ್ಥಾನಕ್ಕೆ ನಾಗೇಂದ್ರ ಅವರು ಇತ್ತೀಚೆಗಷ್ಟೆ ರಾಜಿನಾಮೆ ನೀಡಿದ್ದರು. ಈ ಹಿನ್ನೆಲೆ ಅವರ ಸ್ಥಾನಕ್ಕೆ ಉಸ್ತುವಾರಿ ಸಚಿವರಾಗಿ ಜಮೀರ್‌ ಅಹ್ಮದ್ ನೇಮಕಗೊಂಡಿದ್ದಾರೆ.

ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ಆರೋಪಗಳು ಕೇಳಿ ಬಂದಿದ್ದರಿಂದ ಯುವಜನ ಸೇವಾ, ಕ್ರೀಡಾ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ ರಾಜೀನಾಮೆ ಸಲ್ಲಿಸಿದ್ದರು. ನಾಗೇಂದ್ರ ಸ್ಥಾನಕ್ಕೆ ಈಗ ಜಮೀರ್ ಅಹ್ಮದ್‌ ನೇಮಕಗೊಂಡಿದ್ದಾರೆ. ಕಳೆದ ವಾರ ವಿಜಯನಗರದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಮಾಹಿತಿ ಕೊಟ್ಟಿದ್ದರು. ಶುಕ್ರವಾರ ಅಧಿಕೃತವಾಗಿ ಸರ್ಕಾರವು ಜಮೀರ್ ಅಹ್ಮದ್‌ಗೆ ಬಳ್ಳಾರಿ ಉಸ್ತುವಾರಿಯನ್ನು ಕೊಟ್ಟಿದೆ.

Ad
Ad
Nk Channel Final 21 09 2023
Ad