Bengaluru 22°C
Ad

ವಿದೇಶಾಂಗ ಕಾರ್ಯದರ್ಶಿಯಾಗಿ ವಿಕ್ರಮ್‌ ಮಿಸ್ರಿ ಆಯ್ಕೆ

1989ರ ಐಎಫ್‌ಎಸ್‌ ಬ್ಯಾಚ್‌ ಅಧಿಕಾರಿ, ಚೀನಾಗೆ ಸಂಬಂಧಿಸಿದ ವಿಷಯಗಳಲ್ಲಿ ತಜ್ಞ ಎಂದೇ ಖ್ಯಾತರಾಗಿರುವ ವಿಕ್ರಮ್‌ ಮಿಸ್ರಿ ಅವರು ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ.

ನವದೆಹಲಿ: 1989ರ ಐಎಫ್‌ಎಸ್‌ ಬ್ಯಾಚ್‌ ಅಧಿಕಾರಿ, ಚೀನಾಗೆ ಸಂಬಂಧಿಸಿದ ವಿಷಯಗಳಲ್ಲಿ ತಜ್ಞ ಎಂದೇ ಖ್ಯಾತರಾಗಿರುವ ವಿಕ್ರಮ್‌ ಮಿಸ್ರಿ ಅವರು ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ.

ಹಾಲಿ ವಿದೇಶಾಂಗ ಕಾರ್ಯದರ್ಶಿ ವಿನಯ್‌ ಕ್ವಾಟ್ರಾ ಅವರ ಅವಧಿಯು ಜುಲೈ 14ರಂದು ಮುಗಿಯುವ ಕಾರಣ ವಿಕ್ರಮ್‌ ಮಿಸ್ರಿ ಅವರನ್ನು ನೇಮಿಸಲಾಗಿದೆ. ಜುಲೈ 15ರಂದು ವಿಕ್ರಮ್‌ ಮಿಸ್ರಿ ಅವರು ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಯಾರಿವರು ವಿಕ್ರಮ್‌ ಮಿಸ್ರಿ?

ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ 1964ರ ನವೆಂಬರ್‌ 7ರಂದು ಜನಿಸಿದ ವಿಕ್ರಮ್‌ ಮಿಸ್ರಿ ಅವರು ಇತಿಹಾಸ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಜಮ್‌ಶೆಡ್‌ಪುರದಲ್ಲಿ ಎಂಬಿಎ ಅಧ್ಯಯನ ಮಾಡಿರುವ ಇವರು ಮೂವರು ಪ್ರಧಾನಿಗಳಿಗೆ ಖಾಸಗಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ನರೇಂದ್ರ ಮೋದಿ, ಮನಮೋಹನ್‌ ಸಿಂಗ್‌ ಹಾಗೂ ಐ.ಕೆ. ಗುಜ್ರಾಲ್‌ ಅವರಿಗೆ ಕಾರ್ಯದರ್ಶಿಯಾಗಿದ್ದರು.

Ad
Ad
Nk Channel Final 21 09 2023
Ad