Bengaluru 22°C
Ad

ಲೋಕ ಕದನದಲ್ಲಿ ಬಿಜೆಪಿಗೆ ನುಂಗಲಾರದ ತುತ್ತಾದ ಇಬ್ಬರು ನಾಯಕರು

Pm

ದೆಹಲಿ: ಲೋಕ ಕದನದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಬಾರದ ಕಾರಣ ಎನ್​ಡಿಎ ಮಿತ್ರಪಕ್ಷಗಳ ಜೊತೆ ಸೇರಿ ಅಧಿಕಾರಕ್ಕೇರಲು ಮೋದಿ ಸಜ್ಜಾಗಿದ್ದಾರೆ. ಮೋದಿ 3ನೇ ಬಾರಿ ಪ್ರಧಾನಿಯಾಗೋದು ಕನ್ಫರ್ಮ್​ ಆಗಿದ್ದು, ಎನ್​ಡಿಎ ನಾಯಕರಾಗಿ ಆಯ್ಕೆ ಆಗಿದ್ದಾರೆ. ಜೂನ್​ 8ರಂದು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ. ಹೊಸ ಸರ್ಕಾರ ರಚನೆ ನಡುವೆ ಬಿಜೆಪಿಗೆ ಹೊಸ ಸವಾಲುಗಳು ಎದುರಾಗಿವೆ.

ಲೋಕಸಭೆಯ ಗದ್ದುಗೆ ಗುದ್ದಾಟದಲ್ಲಿ ಬಿಜೆಪಿಗೆ ನಿರೀಕ್ಷಿತ ಮಟ್ಟದ ಗೆಲವು ಸಿಗದಿದ್ದರೂ, ಮೋದಿ 3ನೇ ಬಾರಿಗೆ ಪ್ರಧಾನಿ ಆಗೋದು ಪಕ್ಕಾ ಆಗಿದೆ. ನಂಬರ್​ ಗೇಮ್​ ಆಟದಲ್ಲಿ ಎನ್​ಡಿಎ ಮೈಲುಗೈ ಸಾಧಿಸಿದೆ. ದೆಹಲಿಯಲ್ಲಿ ನಡೆದ ಸಭೆಯಲ್ಲಿ ಎನ್​ಡಿಎ ಮೈತ್ರಿ ಕೂಟದ ನಾಯಕರಾಗಿ ಮೋದಿಯನ್ನು ಆಯ್ಕೆ ಮಾಡಲಾಗಿದೆ. ಇದರ ಬೆನ್ನಲ್ಲೇ ಮೋದಿ ಜೂನ್​ 8ರಂದು 3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಇನ್ನು ಸಭೆ ಬಳಿಕ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿರುವ ಪ್ರಧಾನಿ ಮೋದಿ, ನಮ್ಮದು ಮೌಲ್ಯಯುತವಾದ ಮೈತ್ರಿ. ವಿಕ್ಷಿತ್​ ಭಾರತವನ್ನು ನಿರ್ಮಿಸಲು ಕೆಲಸ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆದರೆ ಉತ್ತರದಲ್ಲಿ ನಿತೀಶ್​ ಆದ್ರೆ ದಕ್ಷಿಣದಲ್ಲಿ ಚಂದ್ರಬಾಬು ನಾಯ್ಡು ಬಿಜೆಪಿ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದಾರೆ. ಸರ್ಕಾರ ರಚನೆಗೂ ಮುನ್ನ ಬಿಜೆಪಿಯ ಮಿತ್ರಪಕ್ಷಗಳು ಷರತ್ತು, ಬೇಡಿಕೆಗಳನ್ನು ಇಟ್ಟಿದ್ದು, ನಮಗೆ ಇಷ್ಟಿಷ್ಟೇ ಸಚಿವ ಸ್ಥಾನಗಳು ಬೇಕು ಎಂದು ಪಟ್ಟು ಹಿಡಿದಿವೆಯಂತೆ.

ಅದೇನೆ ಇರಲಿ.. ಬಿಜೆಪಿಗೆ ಸ್ಪಷ್ಟ ಬಹುಮತ ಬರದಿದ್ದರೂ, ಮಿತ್ರ ಪಕ್ಷಗಳ ಸಹಾಯದಿಂದ ಇತಿಹಾಸ ನಿರ್ಮಿಸಲು ಮೋದಿ ಸಜ್ಜಾಗಿದ್ದಾರೆ. ಜೂನ್​ 8ರಂದು ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದು ಬಂದಿದೆ.

Ad
Ad
Nk Channel Final 21 09 2023
Ad