Bengaluru 22°C
Ad

ಕಾಂಗ್ರೆಸ್​ ಹೆಚ್ಚು ಸ್ಥಾನ ಗಳಿಸುವಲ್ಲಿ ಶಿವಸೇನೆಯ ಪಾತ್ರವೂ ಇದೆ: ಸಂಜಯ್ ರಾವತ್

ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್​ ಹೆಚ್ಚು ಸ್ಥಾನ ಗಳಿಸುವಲ್ಲಿ ಶಿವಸೇನೆಯ ಪಾತ್ರವೂ ಇದೆ ಎಂದು ಸಂಜಯ್ ರಾವತ್ ಹೇಳಿದ್ದಾರೆ.

ಮಹಾರಾಷ್ಟ್ರ: ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್​ ಹೆಚ್ಚು ಸ್ಥಾನ ಗಳಿಸುವಲ್ಲಿ ಶಿವಸೇನೆಯ ಪಾತ್ರವೂ ಇದೆ ಎಂದು ಸಂಜಯ್ ರಾವತ್ ಹೇಳಿದ್ದಾರೆ.

ಈ ಮೊದಲು ರಾಹುಲ್ ಗಾಂಧಿ ನಾಯಕತ್ವವನ್ನು ಒಪ್ಪಿಕೊಳ್ಳಲು ಸಿದ್ಧರಿದ್ದರೆ ನಾವು ವಿರೋಧಿಸುವುದಿಲ್ಲ ಅವರು ಬಹುರಾಷ್ಟ್ರೀಯ ನಾಯಕ ಎಂದು ಸಾಬೀತುಪಡಿಸಿದ್ದಾರೆ, ನಾವೆಲ್ಲರೂ ಅವರನ್ನು ಬಯಸುತ್ತೇವೆ, ನಮ್ಮ ಮೈತ್ರಿಯಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಹೇಳಿದರು.

ಚುನಾವಣೆ ಆರಂಭವಾದಾಗಿನಿಂದ ಇಂಡಿ ಮೈತ್ರಿಕೂಟಕ್ಕೆ ಪ್ರಧಾನಿ ಹುದ್ದೆಯ ಬಗ್ಗೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ, ಬಿಜೆಪಿ ಸರ್ವಾಧಿಕಾರ ಆಡಳಿತದಿಂದ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿಸಲು ಈ ಮೈತ್ರಿ ಯಾವಾಗಲೂ ಹೋರಾಡಿದೆ.

ಕಾಂಗ್ರೆಸ್​ ಹಾಗೂ ಎನ್​ಸಿಪಿಯ ಮತಗಳ ಹೆಚ್ಚಳದಲ್ಲಿ ಶಿವಸೇನೆ ಪಾತ್ರವಹಿಸಿದೆ ಎಂದು ನಿಮಗೆ ಅನಿಸುವುದಿಲ್ಲವೇ, ಶಿವಸೇನೆ ಮತ್ತು ಉದ್ಧವ್ ಠಾಕ್ರೆ ಮಹಾರಾಷ್ಟ್ರಾದ್ಯಂತ ಪ್ರಚಾರ ಮಾಡದಿದ್ದರೆ ಹೀಗಾಗುತ್ತಿತ್ತೇ ಎಂದರು.

Ad
Ad
Nk Channel Final 21 09 2023
Ad