Bengaluru 22°C
Ad

ಸಂಪೂರ್ಣ ಮತದಾರರ ಸಂಖ್ಯೆ ಬಿಡುಗಡೆ ಮಾಡಿದ ಚುನಾವಣಾ ಆಯೋಗ

ಮೊದಲ ಐದು ಹಂತಗಳ ಮತದಾನ ನಂತರ ಸಂಪೂರ್ಣ ಮತದಾರರ ಸಂಖ್ಯೆಯನ್ನು ಭಾರತ ಚುನಾವಣಾ ಆಯೋಗ ಶನಿವಾರ ಬಿಡುಗಡೆ ಮಾಡಿದೆ.

ದೆಹಲಿ: ಮೊದಲ ಐದು ಹಂತಗಳ ಮತದಾನ ನಂತರ ಸಂಪೂರ್ಣ ಮತದಾರರ ಸಂಖ್ಯೆಯನ್ನು ಭಾರತ ಚುನಾವಣಾ ಆಯೋಗ ಶನಿವಾರ ಬಿಡುಗಡೆ ಮಾಡಿದೆ.

ಮತದಾನದ ಡೇಟಾವನ್ನು ಅಭ್ಯರ್ಥಿಗಳು ಮತ್ತು ಸಾರ್ವಜನಿಕರು ಪಡೆಯಬಹುದು ಎಂದು ಹೇಳಿದೆ.

ಲೋಕಸಭಾ ಚುನಾವಣೆಯ ಸಮಯದಲ್ಲಿ ತನ್ನ ವೆಬ್‌ಸೈಟ್‌ನಲ್ಲಿ ಮತಗಟ್ಟೆವಾರು ಮತದಾರರ ಅಂಕಿಅಂಶಗಳನ್ನು ಅಪ್‌ಲೋಡ್ ಮಾಡಲು ಎನ್‌ಜಿಒ ಮಾಡಿದ ಮನವಿಯ ಮೇಲೆ ಚುನಾವಣಾ ಸಂಸ್ಥೆಗೆ ನಿರ್ದೇಶನಗಳನ್ನು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದ ಒಂದು ದಿನದ ನಂತರ ಇಸಿಐ ಸಂಪೂರ್ಣ ಮತದಾನದ ಸಂಖ್ಯೆಯನ್ನು ಬಿಡುಗಡೆ ಮಾಡಿದೆ .

ಎಲ್ಲಾ ಅಭ್ಯರ್ಥಿಗಳ ಅಧಿಕೃತ ಏಜೆಂಟರು ಫಾರ್ಮ್ 17C ಅನ್ನು ಹೊಂದಿದ್ದಾರೆ. ಇದು 543 ಸಂಸತ್ತಿನ ಕ್ಷೇತ್ರಗಳಾದ್ಯಂತ ಸುಮಾರು 10.5 ಲಕ್ಷ ಮತಗಟ್ಟೆಗಳಲ್ಲಿ ಪ್ರತಿಯೊಂದಕ್ಕೂ ಒಟ್ಟು ಮತದಾನವಾದ ಮತಗಳ ಸಂಖ್ಯೆಯನ್ನು ದಾಖಲಿಸುತ್ತದೆ. ನಮೂನೆ 17C ಯಲ್ಲಿ ದಾಖಲಾದ ಒಟ್ಟು ಮತಗಳ ಸಂಖ್ಯೆಯನ್ನು ಬದಲಾಯಿಸಲಾಗುವುದಿಲ್ಲ ಎಂದ ಆಯೋಗವು ಎಲ್ಲಾ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಇದು ಲಭ್ಯವಿರುತ್ತದೆ ಎಂದು ಹೇಳಿದೆ.

Ad
Ad
Nk Channel Final 21 09 2023
Ad