Bengaluru 23°C
Ad

88 ವರ್ಷದ ಬಳಿಕ ದೆಹಲಿಯಲಲಿ ದಾಖಲೆ ಮಳೆ : ತತ್ತರಿಸಿದ ಜನಜೀವನ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ 24 ಗಂಟೆಯಲ್ಲಿ ಸುರಿದ ಧಾರಾಕಾರ ಮಳೆಗೆ ಜನಜೀವನ ತತ್ತರಿಸಿ ಹೋಗಿದ್ದು, ಹಲವೆಡೆ ಜಲಾವೃತಗೊಂಡಿದ್ದು, ಭಾರೀ ಪ್ರಮಾಣದಲ್ಲಿ ಟ್ರಾಫಿಕ್‌ ಜಾಮ್‌ ಗೆ ಕಾರಣವಾಗಿದೆ.

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ 24 ಗಂಟೆಯಲ್ಲಿ ಸುರಿದ ಧಾರಾಕಾರ ಮಳೆಗೆ ಜನಜೀವನ ತತ್ತರಿಸಿ ಹೋಗಿದ್ದು, ಹಲವೆಡೆ ಜಲಾವೃತಗೊಂಡಿದ್ದು, ಭಾರೀ ಪ್ರಮಾಣದಲ್ಲಿ ಟ್ರಾಫಿಕ್‌ ಜಾಮ್‌ ಗೆ ಕಾರಣವಾಗಿದೆ.ಅಲ್ಲದೇ ದೆಹಲಿ-ಎನ್‌ ಸಿಆರ್‌ ನಲ್ಲಿ ಸುರಿದ ಮಳೆ ಕಳೆದ 88 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದಿದೆ!

ಗುರುವಾರ ಬೆಳಗ್ಗೆ 8.30ರಿಂದ ಶುಕ್ರವಾರ (ಜೂನ್‌ 28) ಬೆಳಗ್ಗೆ 8.30ರವರೆಗೆ ದಾಖಲೆ ಪ್ರಮಾಣದ 228 ಮಿಲಿ ಮೀಟರ್‌ ಮಳೆಯಾಗಿದೆ. 1936ರಲ್ಲಿ 24ಗಂಟೆಯಲ್ಲಿ 235 ಮಿಲಿ ಮೀಟರ್‌ ಮಳೆಯಾಗಿ ದಾಖಲೆ ಬರೆದಿರುವುದಾಗಿ ಹವಮಾನ ಇಲಾಖೆ ಮಾಹಿತಿ ನೀಡಿದೆ.

ವಾಡಿಕೆಯಂತೆ ದೆಹಲಿಯಲ್ಲಿ ಜೂನ್‌ ತಿಂಗಳಿನಲ್ಲಿ 80.6 ಮಿಲಿ ಮೀಟರ್‌ ಮಳೆಯಾಗುತ್ತಿದೆ. ಇದರಿಂದಾಗಿ ಅಲ್ಲಿನ ಜನಜೀವನ ಅಸ್ಥವ್ಯಸ್ತವಾಗಿದೆ. . ಧಾರಾಕಾರ ಮಳೆಯಿಂದಾಗಿ ದೆಹಲಿ-ಎನ್‌ ಸಿಆರ್‌ ನ ಜನಜೀವನದ ಮೇಲೆ ಪರಿಣಾಮ ಬೀರಿದ್ದು, ಪ್ರವಾಹದಂತಹ ನೀರಿನಿಂದಾಗಿ ವಾಹನ ಸವಾರರು ಪರದಾಡುವಂತಾಗಿತ್ತು.

Ad
Ad
Nk Channel Final 21 09 2023
Ad