Bengaluru 23°C
Ad

ಬಿಲ್ವಪತ್ರೆಯನ್ನು ತಲೆದಿಂಬಿನ ಕೆಳಗಿಟ್ಟು ಮಲಗಿದರೆ ಏನು ಪ್ರಯೋಜನ?

ಬಿಲ್ವಪತ್ರೆಯನ್ನು ಶಿವನಿಗೆ ಪ್ರಿಯವೆಂದು ಪರಿಗಣಿಸಲಾಗಿದೆ. ಬಿಲ್ವಪತ್ರೆ ಇಲ್ಲದೆ ಈಶ್ವರನ ಆರಾಧನೆ ಅಪೂರ್ಣವಾಗುತ್ತದೆ. ಬಿಲ್ವ ಪತ್ರೆಯ ಮೂರು ಎಲೆಗಳು ಶಿವನ ಮೂರು ಕಣ್ಣುಗಳ ಸಂಕೇತವೆಂದು ಹೇಳಲಾಗುತ್ತದೆ.

ಬಿಲ್ವಪತ್ರೆಯನ್ನು ಶಿವನಿಗೆ ಪ್ರಿಯವೆಂದು ಪರಿಗಣಿಸಲಾಗಿದೆ. ಬಿಲ್ವಪತ್ರೆ ಇಲ್ಲದೆ ಈಶ್ವರನ ಆರಾಧನೆ ಅಪೂರ್ಣವಾಗುತ್ತದೆ. ಬಿಲ್ವ ಪತ್ರೆಯ ಮೂರು ಎಲೆಗಳು ಶಿವನ ಮೂರು ಕಣ್ಣುಗಳ ಸಂಕೇತವೆಂದು ಹೇಳಲಾಗುತ್ತದೆ. ಬಿಲ್ವ ಪತ್ರೆಯನ್ನು ಪೂಜೆಯಲ್ಲಿ ಬಳಸುವುದರ ಜೊತೆಗೆ ತಲೆದಿಂಬಿನ ಕೆಳಗೆ ಇಟ್ಟು ಮಲಗುವುದು ತುಂಬಾ ಪ್ರಯೋಜನಕಾರಿಯಾಗಿದೆ.

ಬಿಲ್ವಪತ್ರೆಯನ್ನು ತಲೆದಿಂಬಿನ ಕೆಳಗಿಟ್ಟು ಮಲಗುವುದರಿಂದ ಶುಕ್ರಗ್ರಹ ಬಲ ಪಡೆಯುತ್ತದೆ. ಶಾಸ್ತ್ರದ ಪ್ರಕಾರ, ಬಿಲ್ವಪತ್ರೆಯಲ್ಲಿ ತಾಯಿ ಲಕ್ಷ್ಮಿ ನೆಲೆಸಿದ್ದಾಳೆ. ಜೊತೆಗೆ ಅದನ್ನು ಶುಕ್ರ ಗ್ರಹಕ್ಕೂ ಹೋಲಿಕೆ ಮಾಡಲಾಗುತ್ತದೆ. ನೀವು ಶುಕ್ರಗ್ರಹಕ್ಕೆ ಸಂಬಂಧಿಸಿದ ಸಮಸ್ಯೆ ಎದುರಿಸುತ್ತಿದ್ದರೆ ಬಿಲ್ವಪತ್ರೆಯನ್ನು ತಲೆದಿಂಬಿನ ಕೆಳಗಿಟ್ಟು ಮಲಗಿ. ಹೀಗೆ ಮಾಡಿದಾಗ ಶುಭ ಮತ್ತು ಆಹ್ಲಾದಕರ ಜೀವನ ನಿಮ್ಮದಾಗುತ್ತದೆ.

ಬಿಲ್ವಪತ್ರೆಯಲ್ಲಿ ಲಕ್ಷ್ಮಿ ನೆಲೆಸಿದ್ದಾಳೆ. ಈ ಬಿಲ್ವಪತ್ರೆಯನ್ನು ತಲೆ ದಿಂಬಿನ ಕೆಳಗಿಟ್ಟರೆ ಮನೆಯಲ್ಲಿ ಲಕ್ಷ್ಮಿ ನೆಲೆಯೂರುತ್ತಾಳೆ. ಮನೆಯಲ್ಲಿ ಹಣದ ಕೊರತೆ ಎಂದೂ ಕಾಡುವುದಿಲ್ಲ. ಆರ್ಥಿಕ ಸಮಸ್ಯೆಯಿಂದ ನಿಮಗೆ ಮುಕ್ತಿ ಸಿಗುತ್ತದೆ.

ಬಿಲ್ವ ಪತ್ರೆಯಲ್ಲಿ ಶಿವನಿದ್ದಾನೆ. ಆತನ ಆಶೀರ್ವಾದ ನಿಮಗೆ ಸದಾ ಲಭ್ಯವಾಗುತ್ತದೆ. ಮನೆಯಲ್ಲಿ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ. ರಾತ್ರಿಯಲ್ಲಿ ಯಾವುದೇ ಸಮಸ್ಯೆ ಕಾಡುವುದಿಲ್ಲ. ದುಃಸ್ವಪ್ನದಿಂದ ಮುಕ್ತಿ ಸಿಗುತ್ತದೆ.

ಒತ್ತಡ, ಅಶಾಂತಿ, ಬೆದರಿಕೆ, ಒಂಟಿತನ, ಹತಾಶೆ ಸೇರಿದಂತೆ ನಾನಾ ಮಾನಸಿಕ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ ನೀವು ಬಿಲ್ವಪತ್ರೆ ಮೊರೆ ಹೋಗಬಹುದು. ಬಿಲ್ವಪತ್ರೆಯನ್ನು ತಲೆ ದಿಂಬಿನ ಕೆಳಗಿಟ್ಟು ಮಲಗಿದರೆ ಈ ಎಲ್ಲ ಮಾನಸಿಕ ಸಮಸ್ಯೆಯಿಂದ ನಿಮಗೆ ಪರಿಹಾರ ಸಿಗುತ್ತದೆ.

ಮನುಷ್ಯ ಏಳ್ಗೆ ಕಾಣುತ್ತಿದ್ದರೆ ಸ್ನೇಹಿತರು, ಆಪ್ತರು, ಅಪರಿಚಿತರ ಕಣ್ಣು ನಿಮ್ಮ ಮೇಲೆ ಬೀಳುತ್ತದೆ. ಈ ಕೆಟ್ಟ ದೃಷ್ಟಿಯಿಂದಾಗಿ ಅನಾರೋಗ್ಯ, ಅಶಾಂತಿ ಕಾಡುತ್ತದೆ. ತಲೆ ದಿಂಬಿನ ಕೆಳಗೆ ಭಗವದ್ಗೀತೆ ಅಥವಾ ಸುಂದರಕಾಂಡವನ್ನು ಇಟ್ಟುಕೊಂಡರೆ ಮನಸ್ಸು ಶಾಂತಗೊಳ್ಳುತ್ತದೆ. ಧನಾತ್ಮಕ ಶಕ್ತಿ ಹರಡುತ್ತದೆ. ಜೀವನದಲ್ಲಿ ಪ್ರಗತಿ ಸಾಧಿಸಬಹುದು. ಗುರು ಗ್ರಹ ಬಲಗೊಳ್ಳುತ್ತದೆ.

ನೀವು ರಾಹು ದೋಷಕ್ಕೆ ಒಳಗಾಗಿದ್ದರೆ ತಲೆದಿಂಬಿನ ಕೆಳಗೆ ಮೂಲಂಗಿಯನ್ನು ಇಟ್ಟು ಮಲಗಬೇಕು. ಮರುದಿನ ಅದನ್ನು ಶಿವಲಿಂಗಕ್ಕೆ ಅರ್ಪಿಸಬೇಕು. ಇದ್ರಿಂದ ರಾಹು ದೋಷ ನಿವಾರಣೆಯಾಗುತ್ತದೆ. ಮಂಗಳವಾರ ರಾತ್ರಿ ಒಂದು ಬಟ್ಟೆಯಲ್ಲಿ ಹೆಸರು ಕಾಳನ್ನು ಕಟ್ಟಿ ಅದನ್ನು ತಲೆ ದಿಂಬಿನ ಕೆಳಗೆ ಇಟ್ಟು ಮಲಗಿ. ಮರುದಿನ ಅದನ್ನು ದುರ್ಗಾ ದೇವಿಗೆ ಅರ್ಪಿಸಿ. ಇದ್ರಿಂದ ವ್ಯಾಪಾರದಲ್ಲಿ ಅಭಿವೃದ್ಧಿಯಾಗುತ್ತದೆ. ಆದಾಯದಲ್ಲಿ ಹೆಚ್ಚಳ ಕಂಡುಬರುತ್ತದೆ.

ಸರಿಯಾಗಿ ನಿದ್ರೆ ಬರ್ತಿಲ್ಲ, ನಿದ್ರೆ ಮಧ್ಯೆ ಎಚ್ಚವಾಗ್ತಿದೆ, ಕೆಟ್ಟ ಸ್ವಪ್ನಗಳು ಬೀಳ್ತಿವೆ ಎಂದಾದ್ರೆ ಕಬ್ಬಿಣದ ಕೀಯನ್ನು ದಿಂಬಿನ ಕೆಳಗಿಟ್ಟು ಮಲಗಿ. ಇದ್ರಿಂದ ರಾಹು ಮತ್ತು ಕೇತುವಿನ ಕೆಟ್ಟ ಪ್ರಭಾವ ಕಡಿಮೆ ಆಗುತ್ತದೆ. ಜಾತಕದಲ್ಲಿ ಶನಿ, ಕೇತು ಮತ್ತು ರಾಹುವಿನ ದೋಷ ನಿವಾರಣೆಯಾಗುತ್ತದೆ.

Ad
Ad
Nk Channel Final 21 09 2023
Ad