ಹ್ಯಾಟ್ರಿಕ್ ಹೀರೊ ಹುಟ್ಟು ಹಬ್ಬದ ಪ್ರಯುಕ್ತ ಬಿಗ್ ಸರ್ಪ್ರೈಸ್ ಕಾದಿದೆ. ಜುಲೈ 12, ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರ ಹುಟ್ಟುಹಬ್ಬ ಇರುವುದರಿಂದ “ಘೋಸ್ಟ್” ಚಿತ್ರದ ‘ಬಿಗ್ ಡ್ಯಾಡಿ’ ಎಂಬ ವಿಡಿಯೋ ಒಂದು ರೀಲಿಸ್ ಆಗಲಿದೆ ಎಂದು ನಿರ್ಮಾಪಕರು ಮಾಹಿತಿ ಹಂಚಿಕೊಂಡಿದ್ದಾರೆ.
ಕನ್ನಡ ಸೇರಿದಂತೆ 3 ಭಾಷೆಗಳಲ್ಲಿ ‘ಘೋಸ್ಟ್’ ಸಿನಿಮಾ ಸಿದ್ಧವಾಗುತ್ತಿದೆ. ‘ಬಿಗ್ ಡ್ಯಾಡಿ’ ವಿಡಿಯೋದ ರಿಲೀಸ್ ದಿನಾಂಕದ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಾಗಿನಿಂದ ಅಭಿಮಾನಿಗಳಲ್ಲಿ ಕೌತುಕ ಹೆಚ್ಚಾಗಿದೆ. ಶಿವರಾಜ್ಕುಮಾರ್, ಜಯರಾಂ, ಸತ್ಯಪ್ರಕಾಶ್, ಅನುಪಮ್ ಖೇರ್, ದತ್ತಣ್ಣ, ಪ್ರಶಾಂತ್ ನಾರಾಯಣನ್, ಅಭಿಜಿತ್ ಸೇರಿದಂತೆ ಹಲವು ಕಲಾವಿದರು ‘ಘೋಸ್ಟ್’ ಚಿತ್ರದ ಪಾತ್ರವರ್ಗದಲ್ಲಿ ಇದ್ದಾರೆ.
ಇನ್ನು ಈ ಚಿತ್ರವು ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿದ್ದು,ರಾಷ್ಟ್ರಪ್ರಶಸ್ತಿ ಪರಸ್ಕೃತ ಸಂದೇಶ್ ನಾಗರಾಜ್ ಅವರು ಈ ಚಿತ್ರವನ್ನು ಅರ್ಪಿಸುತ್ತಿದ್ದಾರೆ. ಶ್ರೀನಿ ನಿರ್ದೇಶನದದಲ್ಲಿ ಮೂಡಿದೆ.