ಬೆಂಗಳೂರು: ಚಾಂದಿನಿ ಬಾರ್ ಸಿನಿಮಾ ಏ .21ಕ್ಕೆ ತೆರೆಕಾಣಲಿದೆ. ಚಿತ್ರದಲ್ಲಿ ರಾಘವೇಂದ್ರ ಕುಮಾರ್ಗೆ ಸುಕೃತಿ ಪ್ರಭಾಕರ್ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಉಳಿದಂತೆ ಸಿದ್ದು ಬದನವಾಳು, ಮಣಿಕಂಠ, ರಶ್ಮಿ, ಮಂಜು ಆರ್ಯ, ವಿಜಯ ಕಾರ್ತಿಕ್ ಅಭಿನಯಿಸಿದ್ದಾರೆ.
ಚಾಂದಿನಿ ಬಾರ್’ ಚಿತ್ರದ ಟೈಟಲ್ ಮತ್ತು ಕಥಾಹಂದರದ ಬಗ್ಗೆ ಮಾತನಾಡಿರುವ ನಾಯಕ ನಟ ರಾಘವೇಂದ್ರ ರಾಜ್ ಕುಮಾರ್, ಬಾರ್ ಒಂದರಲ್ಲಿ ಸೇರುವ ಬೇರೆ ಬೇರೆ ಹಿನ್ನೆಲೆಯ ವ್ಯಕ್ತಿಗಳ ಜೀವನ ಹೇಗೆಲ್ಲ ಇರುತ್ತದೆ ಎಂಬುದು ಸಿನಿಮಾದ ಹೂರಣ. ಬಾರ್ ಒಂದನ್ನು ಹಿನ್ನೆಲೆಯಾಗಿಟ್ಟುಕೊಂಡು ಕಥೆಯನ್ನು ಹೇಳಲಾಗಿದೆ. ಇಲ್ಲಿ ಲವ್, ಸೆಂಟಿಮೆಂಟ್, ಎಮೋಶನ್ಸ್, ಕಾಮಿಡಿ ಹೀಗೆ ಎಲ್ಲ ಥರದ ಮನೊರಂಜನಾತ್ಮಕ ಅಂಶಗಳಿವೆ ಎಂದು ತಿಳಿಸಿದ್ದಾರೆ.