News Karnataka Kannada
Saturday, May 04 2024
ಸಾಂಡಲ್ ವುಡ್

ಆದಿಪುರುಷ್ ಅಬ್ಬರ: ಕರ್ನಾಟಕದಲ್ಲಿ 2ನೇ ದಿನ ದಾಖಲೆಯ ಗಳಿಕೆ

Adipurush
Photo Credit : Twitter

ಜೂನ್ 16ರಂದು ವಿಶ್ವದಾದ್ಯಂತ ಬಹು ನಿರೀಕ್ಷಿತ ಚಿತ್ರ ಆದಿಪುರುಷ್ ಬಿಡುಗಡೆಗೊಂಡಿತು. ರಾಮಾಯಣ ಕಥೆ ಆಧಾರಿತ ಚಿತ್ರವೆಂಬ ಕಾರಣಕ್ಕೆ ಆದಿಪುರುಷ್ ಚಿತ್ರ ಸಿನಿ ರಸಿಕರಲ್ಲಿ ಈ ಹಿಂದಿನಿಂದಲೂ ಚರ್ಚೆಯನ್ನು ಹುಟ್ಟುಹಾಕುತ್ತಲೇ ಇತ್ತು. ಮೊದಲಿಗೆ ಟೀಸರ್ ಮೂಲಕ ಕೆಟ್ಟ ವಿಎಫ್‌ಎಕ್ಸ್ ಕಾರಣದಿಂದಾಗಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ವಿರೋಧ ಹಾಗೂ ಟೀಕೆಗಳನ್ನು ಪಡೆದುಕೊಂಡು ಟ್ರೋಲ್‌ಗೆ ಒಳಗಾಗಿದ್ದ ಆದಿಪುರುಷ್ ಬಳಿಕ ಟ್ರೈಲರ್ ಹಾಗೂ ಹಾಡುಗಳ ಮೂಲಕ ಸಿನಿ ರಸಿಕರಲ್ಲಿ ನಿರೀಕ್ಷೆಯನ್ನು ಹುಟ್ಟುಹಾಕಿತ್ತು.

ಚಿತ್ರ ಬಿಡುಗಡೆಯಾದ ದಿನದ ಮೊದಲ ಪ್ರದರ್ಶನ ಮುಕ್ತಾಯವಾದ ಕೂಡಲೇ ಚಿತ್ರದ ಕುರಿತು ನೆಗೆಟಿವ್ ವಿಮರ್ಶೆಗಳು ಬರಲಾರಂಭಿಸಿದವು. ಕೆಲವರುರಾಮಾಯಣವನ್ನು ತಪ್ಪಾಗಿ ತೋರಿಸಲಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇನ್ನು ಚಿತ್ರ ಮೊದಲ ದಿನ ವಿಶ್ವದಾದ್ಯಂತ 140 ಕೋಟಿ ಗಳಿಸಿತು. ಚಿತ್ರತಂಡ ಅಧಿಕೃತವಾಗಿ ಪೋಸ್ಟರ್ ಬಿಡುಗಡೆಯಾಗುವ ಮೂಲಕ ಈ ಕಲೆಕ್ಷನ್ ವರದಿಯನ್ನು ಹಂಚಿಕೊಂಡಿತು. ಇದೀಗ ಎರಡನೇ ದಿನದ ಕಲೆಕ್ಷನ್ ವರದಿಯನ್ನೂ ಸಹ ಚಿತ್ರತಂಡ ಹಂಚಿಕೊಂಡಿದೆ. ಆದಿಪುರುಷ್ ನಿರ್ಮಾಪಕರು ಚಿತ್ರ ಎರಡನೇ ದಿನದ 100 ಕೋಟಿ ಗಳಿಸಿದ್ದು, ಮೊದಲೆರಡು ದಿನಗಳಲ್ಲಿ 240 ಕೋಟಿ ಗಳಿಸಿದೆ ಎಂದು ಪೋಸ್ಟರ್ ಬಿಡುಗಡೆ ಮಾಡಿದೆ.

ಇದು ವಿಶ್ವದಾದ್ಯಂತ ಚಿತ್ರ ಎರಡು ದಿನಗಳಲ್ಲಿ ಮಾಡಿರುವ ಕಲೆಕ್ಷನ್ ಆಗಿದ್ದು ಕರ್ನಾಟಕದಲ್ಲಿ ಮೊದಲ ದಿನ 8.17 ಕೋಟಿ ಗಳಿಸಿದೆ ಹಾಗೂ ಎರಡನೇ ದಿನ 6.15 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ. ಈ ಮೂಲಕ ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ಚಿತ್ರ ಎರಡು ದಿನಗಳಲ್ಲಿ 14.32 ಕೋಟಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದೆ ಎಂದು ವರದಿಯಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು