News Karnataka Kannada
Sunday, May 19 2024
ಗಾಂಧಿನಗರ

ಇಂದು ಕನ್ನಡದ ಮೂವರು ಸ್ಟಾರ್ ಕಲಾವಿದರ ಹುಟ್ಟುಹಬ್ಬದ ಸಂಭ್ರಮ

Kannada actors celebrate their birthdays today
Photo Credit : News Kannada

ಇಂದು (ಸೆಪ್ಟೆಂಬರ್ 18) ವಿಷ್ಣುವರ್ಧನ್, ಉಪೇಂದ್ರ ಹಾಗೂ ಶ್ರುತಿ ಅವರ ಜನ್ಮದಿನ. ಈ ಕಾರಣಕ್ಕೆ ಅಭಿಮಾನಿಗಳು ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಅದ್ದೂರಿಯಾಗಿ ಬರ್ತ್​ಡೇ ಆಚರಿಸುವ ಕೆಲಸ ಆಗುತ್ತಿದೆ.

ಕೋಟಿಗೊಬ್ಬ ವಿಷ್ಣುವರ್ಧನ್:
ಕನ್ನಡ ಚಿತ್ರರಂಗದ ಕೋಟಿಗೊಬ್ಬ ವಿಷ್ಣುವರ್ಧನ್​ ಇಂದು ನಮ್ಮೊಂದಿಗಿದ್ದಿದ್ದರೆ ತಮ್ಮ 7೩ನೇ ಹುಟ್ಟು ಹಬ್ಬವನ್ನು ಅಭಿಮಾನಿಗಳು ಹಾಗೂ ಕುಟುಂಬಸ್ಥರ ಜೊತೆ ಆಚರಣೆ ಮಾಡಿಕೊಳ್ಳುತ್ತಿದ್ದರು. ಆದರೆ, ಅವರು ಇಹಲೋಕ ತ್ಯಜಿಸಿ 13 ವರ್ಷಗಳಾಗಿದ್ದು, ಅವರ ಹುಟ್ಟು ಹಬ್ಬವನ್ನು ಅಭಿಮಾನಿಗಳು ಇಂದು ಅರ್ಥಪೂರ್ಣವಾಗಿ, ವಿಭಿನ್ನವಾಗಿ ಆಚರಿಸುತ್ತಿದ್ದಾರೆ. ವಿಷ್ಣು ಇಂದಿಗೂ ಕನ್ನಡಿಗರ ಮನದಲ್ಲಿ ನೆಚ್ಚಿನ ಯಜಮಾನನಾಗಿ ಉಳಿದುಕೊಂಡಿದ್ದಾರೆ. ಕನ್ನಡ ಚಿತ್ರರಂಗ ಮಾತ್ರವಲ್ಲದೆ ತೆಲುಗು, ತಮಿಳು, ಹಿಂದಿ ಹಾಗೂ ಮಲೆಯಾಳಂ ಚಿತ್ರಗಳಲ್ಲಿ ಡಾ.ವಿಷ್ಣುವರ್ಧನ್​​ ನಟಿಸಿ ಅಧಿಕ ಸಂಖ್ಯೆ ಅಭಿಮಾನಿಗಳನ್ನು ಸಂಪಾದಿಸಿದ್ದರು. ಸಿಂಹಾದ್ರಿಯ ಸಿಂಹ, ಹೃದಯವಂತ, ಕದಂಬ, ಈ ಬಂಧನ, ಆಪ್ತರಕ್ಷಕ, ಆಪ್ತಮಿತ್ರ, ಹೀಗೆ ಸುಮಾರು 220 ಸಿನಿಮಾಗಳಲ್ಲಿ ಅಭಿನಯಿಸಿ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ.

ರಿಯಲ್‌ ಸ್ಟಾರ್:
ಉಪೇಂದ್ರ ಅವರು ಕೂಡ ಇಂದು ಜನ್ಮದಿನ ಆಚರಿಸಿಕೊಂಡಿದ್ದಾರೆ. ಅವರಿಗೆ ಅನೇಕರು ಶುಭಕೋರುತ್ತಿದ್ದಾರೆ. ಅವರ ಅಭಿಮಾನಿಗಳಿಗೆ ಇಂದಿನ ದಿನ ಸಖತ್ ವಿಶೇಷವಾಗಿದೆ. ಇಂದು ಗಣೇಶ ಚತುರ್ಥಿ. ಇದರ ಜೊತೆಗೆ ಉಪೇಂದ್ರ ಅವರ ಜನ್ಮದಿನದಂದು ‘ಯುಐ’ ಚಿತ್ರದ ಟೀಸರ್ ರಿಲೀಸ್ ಆಗಲಿದೆ. ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ಆಚರಣೆ ನಡೆಯಲಿದೆ. ಇನ್ನು 1998ರಲ್ಲಿ ತೆರೆಕಂಡ ʼಎʼ ಎಂಬ ಕನ್ನಡ ರೊಮಾಂಟಿಕ್‌ ಸೈಕಾಲಜಿಕಲ್‌ ಸಿನಿಮಾವನ್ನು ಬರೆದು ನಿರ್ದೇಶಿಸಿ ನಟಿಸಿದ್ದರು ಉಪೇಂದ್ರ. ಹಲವು ಫ್ಲ್ಯಾಷ್‌ಬ್ಯಾಕ್‌ಗಳ ಈ ಚಿತ್ರ ವಿಭಿನ್ನವಾಗಿ ಜನರ ಗಮನಸೆಳೆದಿತ್ತು. ಹೀರೋ ಸೂರ್ಯ ಪಾತ್ರಕ್ಕೂ ಅವರೇ ಜೀವ ತುಂಬಿದ್ದರು. ವಿಶೇಷವೆಂದರೆ, ‘ಎ’ ಸಿನಿಮಾದೊಳಗೆ ಒಂದು ಸಿನಿಮಾ ಕಥೆ ಇತ್ತು. ಉಪೇಂದ್ರ ಡೈರೆಕ್ಟರ್ ಪಾತ್ರ ಮಾಡಿದ್ದರೆ, ಚಾಂದಿನಿ ಸಿನಿಮಾದೊಳಗೂ ನಾಯಕಿಯಾಗಿಯೇ ಕಾಣಿಸಿಕೊಂಡಿದ್ದರು. ಚಿತ್ರದ ಸ್ಕ್ರೀನ್‌ಪ್ಲೇ ಆಗ ಕಾಲಕ್ಕೆ ಸದ್ದು ಮಾಡಿತ್ತು.

ಸ್ಯಾಂಡಲ್‍ವುಡ್‍ನ ಅದ್ಭುತ ನಟಿ ಶ್ರುತಿ:
ಸ್ಯಾಂಡಲ್‍ವುಡ್‍ನ ಅದ್ಭುತ ನಟಿ ಶ್ರುತಿ. ಶ್ರುತಿ ಅವರು ಸೆಪ್ಟೆಂಬರ್ 18 1975ರಲ್ಲಿ ಜನಿಸಿದ್ದಾರೆ. 1990ರ ದಶಕದಲ್ಲಿ ಕನ್ನಡ ಚಿತ್ರರಂಗವನ್ನು ಆಳಿದ ನಟಿ ಎಂದರೆ ತಪ್ಪಾಗಲ್ಲ. ಶ್ರುತಿ ಅವರು ಕನ್ನಡ ಚಿತ್ರರಂಗದಲ್ಲಿ ಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ಹಲವು ರೀತಿಯ ಪಾತ್ರ ಮಾಡಿ ಅವರು ಜನಮನ ಗೆದ್ದಿದ್ದಾರೆ. ಭಾವನಾತ್ಮಕ ಪಾತ್ರಗಳನ್ನು ಮಾಡೋದರಲ್ಲಿ ಅವರದ್ದು ಎತ್ತಿದ ಕೈ. ಈ ಮೊದಲು ಅವರು ಪಾತ್ರಗಳ ಮೂಲಕ ಅನೇಕರಿಗೆ ಕಣ್ಣೀರು ಹಾಕುವ ಕೆಲಸ ಮಾಡಿದ್ದರು. ಅವರಿಗೂ ಇಂದು ಜನ್ಮದಿನದ ಸಂಭ್ರಮ. ಅವರಿಗೆ ಎಲ್ಲಾ ಕಡೆಗಳಿಂದ ಶುಭಾಶಯಗಳು ಬರುತ್ತಿವೆ. ಇತ್ತೀಚೆಗೆ ಶ್ರುತಿ ನಟನೆಯ ‘ತತ್ಸಮ ತದ್ಭವ’ ಹಾಗೂ ‘13’ ಸಿನಿಮಾಗಳು ರಿಲೀಸ್ ಆಗಿವೆ. ನಟಿ ಶ್ರುತಿಗೆ ಸ್ನೇಹಿತರು, ತಾರೆಯರು, ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮುಖಾಂತರ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು