News Karnataka Kannada
Monday, May 13 2024
ಸಾಂಡಲ್ ವುಡ್

ಜುಲೈ 21ರಂದು ತೆರೆಗೆ ಬರ್ತಿದೆ ‘ಅಂಬುಜ’ ಟೀಂ

Ambuja film
Photo Credit : Twitter

ಸ್ಯಾಂಡಲ್‌ವುಡ್ ಅಂಗಳದಲ್ಲಿ ಸೌಂಡ್ ಮಾಡ್ತಿರುವ ಸಿನಿಮಾಗಳ ಪೈಕಿ ‘ಅಂಬುಜ’ ಕೂಡ ಒಂದು. ಶ್ರೀನಿ ಹನುಮಂತರಾಜು ನಿರ್ದೇಶನದ, ಕಾಶಿನಾಥ್ ಡಿ ಮಡಿವಾಳರ್ ನಿರ್ಮಾಣದ ಈ ಚಿತ್ರ, ಟೀಸರ್ ನಿಂದ ಕುತೂಹಲ ಕೆರಳಿಸಿತ್ತು. ಅನ್‌ಟೋಲ್ಡ್ ಕ್ರೈಮ್ ಸ್ಟೋರಿ ಅಂತ ಟ್ಯಾಗ್‌ಲೈನೇ ಹೇಳಿದ್ದರಿಂದ ಸಹಜವಾಗಿ ‘ಅಂಬುಜ’ ಮೇಲೆ ನಿರೀಕ್ಷೆ ಹೆಚ್ಚಾಗಿತ್ತು. ಇದೀಗ ಈ‌ ಚಿತ್ರದ ಟ್ರೈಲರ್ ಹೊರಬಿದ್ದಿದ್ದು ನಿರೀಕ್ಷೆ ಡಬಲ್ ಆಗಿದೆ.

ನೀವೆಂದು ಕಂಡು ಕೇಳರಿಯದ ವಿಚಿತ್ರ ಕಥಾಹಂದರದ ಜೊತೆ ನಿಮ್ಮನ್ನೆಲ್ಲಾ ಬೆಚ್ಚಿಬೀಳಿಸಲು ‘ಅಂಬುಜ’ ಬರುತ್ತಿದ್ದಾರೆ ಅಂತ ಚಿತ್ರದ ನಿರ್ದೇಶಕರು ಹೇಳಿಕೊಂಡಿದ್ದರು. ಇದೊಂದು ಮಹಿಳಾ ಪ್ರಧಾನ ಸಿನಿಮಾ ಆಗಿದ್ದು, ನಟಿ ಶುಭಾ ಪೂಂಜಾ, ಅಮೃತವರ್ಷಿಣಿ ಖ್ಯಾತಿಯ ರಜಿನಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಲಂಬಾಣಿ ಹೆಣ್ಣುಮಗಳ ಪಾತ್ರದಲ್ಲಿ ರಜನಿ ಮಿಂಚಿದರೆ ಆಕೆಯ ಮಗಳ ಪಾತ್ರದಲ್ಲಿ ಬೇಬಿ ಆಕಾಂಕ್ಷ ನಟಿಸಿದ್ದಾರೆ. ಶುಭಾ ಪೂಂಜಾ ಅವರು ಕ್ರೈಂ ಜರ್ನ್‌ಲಿಸ್ಟ್ ಪಾತ್ರಕ್ಕೆ ಜೀವತುಂಬಿದ್ದಾರೆ. ದೀಪಕ್ ಸುಬ್ರಹ್ಮಣ್ಯ, ಪದ್ಮಜರಾವ್, ಶರಣಯ್ಯ, ಜಗದೀಶ್ ಹಲ್ಕುಡೆ, ನಿಶಾ ಹೆಗ್ಡೆ, ಗುರುದೇವ ನಾಗರಾಜ್, ಸಂದೇಶ್ ಶೆಟ್ಟಿ ಅಜ್ರಿ ಪಾತ್ರವರ್ಗದಲ್ಲಿದ್ದಾರೆ.‌

ಈ ಚಿತ್ರವನ್ನು ಶ್ರೀನಿ ಹನುಮಂತರಾಜು ನಿರ್ದೇಶನ ಮಾಡಿದ್ದು, ಮಾರ್ಸ್ ಸುರೇಶ್ ಅವರು ಡಿಸ್ಟ್ರಿಬ್ರೂಷನ್ ಜವಾಬ್ದಾರಿ ಹೊತ್ತಿದ್ದು, ಇದೇ ಜುಲೈ 21ರಂದು ʼಅಂಬುಜ’ ಚಿತ್ರ ರಾಜ್ಯಾದ್ಯಂತ ತೆರೆಕಾಣಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು